ಕರಾವಳಿಕ್ರೈಂ

ಕಲ್ಲಡ್ಕ: ಒಂದೇ ದಿನ ಹಲವು ಕಡೆ ಅಗ್ನಿ ಅವಘಡ, ಹೊತ್ತಿ ಉರಿದ ಲಾರಿ !

ನ್ಯೂಸ್ ನಾಟೌಟ್: ಹಾಸನದಿಂದ ಮಂಗಳೂರು ಕಡೆಗೆ ಆಗಮಿಸುತ್ತಿದ್ದ ಒಣಹುಲ್ಲು ಸಾಗಾಟದ ಲಾರಿಯೊಂದರಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡು ಹೊತ್ತಿ ಉರಿದ ಘಟನೆ ಶನಿವಾರ ಕಲ್ಲಡ್ಕ ಸಮೀಪದ ದಾಸಕೋಡಿಯಲ್ಲಿ ಶನಿವಾರ ಫೆ.೨೫ ರಂದು ನಡಿದಿದೆ.

ಒಣಹುಲ್ಲು ಸಾಗಾಟದ ಲಾರಿಯು ಹೆದ್ದಾರಿಯಲ್ಲಿ ಆಗಮಿಸುತ್ತಿದ್ದ ವೇಳೆ ಬ್ಯಾಟರಿ ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡಿದೆ ಎನ್ನಲಾಗಿದೆ. ಬಂಟ್ವಾಳ ಅಗ್ನಿಶಾಮಕ ದಳದವರು ಸ್ಥಳಕ್ಕೆ ತೆರಳಿ ಬೆಂಕಿ ನಂದಿಸುವ ಕಾರ್ಯನಿರ್ವಹಿಸಿದ್ದಾರೆ.

ಜತೆಗೆ ಕಾಕತಾಳಿಯ ಎನ್ನುವಂತೆ ಅದೇ ದಿನ ತಾಲೂಕಿನ ಸಜೀಪಮೂಡದ ಬೊಳ್ಳಾಯಿ, ಮೊಡಂಕಾಪು ಸಮೀಪದ ಬಂಟಗುರಿ, ಪಲ್ಲಮಜಲಿನಲ್ಲೂ ಆಕಸ್ಮಿಕವಾಗಿ ಗುಡ್ಡ ಪ್ರದೇಶಕ್ಕೆ ಬೆಂಕಿ ಹಿಡಿದ ಘಟನೆ ನಡೆದಿದೆ.

ಬಂಟಗುರಿ, ಪಲ್ಲಮಜಲಿಗೆ ಬಂಟ್ವಾಳ ಅಗ್ನಿಶಾಮಕ ದಳ ಹಾಗು ಬೊಳ್ಳಾಯಿಗೆ ಮಂಗಳೂರು ಅಗ್ನಿಶಾಮಕ ದಳದವರು ತೆರಳಿ ಬೆಂಕಿ ನಂದಿಸುವ ಕಾರ್ಯ ನಿರ್ವಹಿಸಿದ್ದಾರೆ ಎಂದು ವರದಿಯಾಗಿದೆ.

Related posts

ಸುಳ್ಯ:ರಸ್ತೆ ಬದಿಯಲ್ಲಿ ಹೋಗುತ್ತಿದ್ದಾಗ ಯಮರೂಪದಲ್ಲಿ ಬಂದ ಕಾರು..!, ಗಂಭೀರ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ವ್ಯಕ್ತಿ ದುರಂತ ಅಂತ್ಯ

ಓಯೋ ರೂಮ್ ಗಳಿಗೆ ಇನ್ನು ಮುಂದೆ ಹೊಸ ನಿಯಮ..! ಅವಿವಾಹಿತ ಜೋಡಿಗೆ ಹೋಟೆಲ್‌ ಪ್ರವೇಶ ನಿರ್ಬಂಧ..!

ಚಾಲೆಂಜಿಂಗ್ ಸ್ಟಾರ್ ದರ್ಶನ್ ಮುಂದಿನ ಸಿನಿಮಾಗೆ ಕರಾವಳಿ ಬೆಡಗಿ ಆಯ್ಕೆ..!ಪುತ್ತೂರಿನ ಆ ಚೆಲ್ವೆಯ ಹೆಸರೇನು ಗೊತ್ತಾ?ಯಾರೀಕೆ?ಇಲ್ಲಿದೆ ಡಿಟೇಲ್ಸ್‌..