ನ್ಯೂಸ್ ನಾಟೌಟ್: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ (BBMP) ನಡೆಯಲಿರುವ ಕಾರ್ಯಕ್ರಮಕ್ಕೆ ಟೀ, ಕಾಫಿ, ತಿಂಡಿ ಸೇರಿದಂತೆ ಆಹಾರ ಪೂರೈಕೆಯ ವ್ಯವಸ್ಥೆಗಾಗಿ 99.00 ಲಕ್ಷ ರೂಪಾಯಿ ಮೊತ್ತದ ಟೆಂಡರ್ ಕರೆದ ವಿಚಾರ ಅಚ್ಚರಿಗೆ ಕಾರಣವಾಗಿದೆ.
ಇದು ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಹುಟ್ಟು ಹಾಕಿದ್ದು, ಬಿಬಿಎಂಪಿ ಸಭೆಯಗಳಲ್ಲಿ ಆಹಾರ ಪೂರೈಕೆಗಾಗಿ ಜನರ ತೆರಿಗೆ ಹಣವು ಇಷ್ಟೊಂದು ದೊಡ್ಡ ಮಟ್ಟದಲ್ಲಿ ಪೋಲಾಗುತ್ತಿದೆಯೇ?. ಪಾಲಿಕೆಯ ಈ ದುಂದುವೆಚ್ಚ ಸರಿಯಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ಟೆಂಡರ್ ಕರೆದಿದ್ದ ಪೇಪರ್ ಕಟಿಂಗ್ ಫೋಟೋ ವೈರಲ್ ಆಗಿತ್ತು. ಟೆಂಡರ್ ಸಾಕಷ್ಟು ವಿರೋಧ ಕೇಳಿ ಬಂದವು.
ಈ ಟೆಂಡರ್ ಕುರಿತು ಸ್ಪಷ್ಟನೆ ನೀಡಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಸಾಮಾಜಿಕ ಜಾಲತಾಣ ಮತ್ತು ಮಾಧ್ಯಮಗಳಲ್ಲಿ ವದಂತಿಗಳು ಹಬ್ಬಿವೆ. ಪಾಲಿಕೆ ವ್ಯಾಪ್ತಿಯಲ್ಲಿ ವರ್ಷವಿಡೀ ನಡೆಯುವ ಸಭೆಗಳು ಹಾಗೂ ಸಮಾರಂಭಗಳು/ಕಾರ್ಯಕ್ರಮಗಳಿಗಾಗಿ ದಿನಾಂಕ: 17-03-2024 ತಾರೀಖಿಗೆ ಅನ್ವಯಿಸುವಂತೆ ಅಂದಿನ ಪತ್ರಿಕೆಗಳಲ್ಲಿ ಟೆಂಡರ್ ಆಹ್ವಾನಿಸಲಾಗಿತ್ತು.
ಇದನ್ನೂ ಓದಿ:ನಡು ರಸ್ತೆಯಲ್ಲಿ ಭೀಕರ ಕೊಲೆಯ ದೃಶ್ಯದ ಶೂಟಿಂಗ್..! ಇಬ್ಬರು ಅರೆಸ್ಟ್..!
ಈ ಟೆಂಡರ್ ನಡಿ ಆಹಾರ, ತಿಂಡಿ, ಟೀ, ಕಾಫಿ ಪೂರೈಕೆ ವ್ಯವಸ್ಥೆಯು ಕೇವಲ ಒಂದು ಸಭೆ, ಕಾರ್ಯಕ್ರಮಕ್ಕೆ ಅಲ್ಲ. ಈ ಟೆಂಡರ್ ಕೇವಲ ಒಂದು ಕಾರ್ಯಕ್ರಮಕ್ಕೆ ಮಾತ್ರ ಸೀಮಿತವಾಗಿರುವುದಿಲ್ಲ.
ಬಿಬಿಎಂಪಿ ವತಿಯಿಂದ ವರ್ಷವಿಡೀ ನಡೆಸುವ ಎಲ್ಲಾ ಸಭೆಗಳು, ನಿಯಮಿತ ಕಾರ್ಯಕ್ರಮಗಳು ಮತ್ತು ಸಾರ್ವಜನಿಕ ಕಾರ್ಯಕ್ರಮಗಳಿಗೆ ಆಹಾರ ಪೂರೈಕೆಗಾಗಿ ಈ ಟೆಂಡರ್ ಕರೆಯಲಾಗಿದೆ ಎಂದು ಬಿಬಿಎಂಪಿ ಅಧಿಕಾರಿಗಳು ಸ್ಪಷ್ಟನೆ ನೀಡಿದೆ.
ಇದನ್ನೂ ಓದಿ:ಸುಳ್ಯದ ನೆಲ್ಲೂರು ಕೆಮ್ರಾಜೆಯಲ್ಲಿ ವಿಷ ಸೇವಿಸಿ ಮಹಿಳೆ ಆತ್ಮಹತ್ಯೆ..! ಕಾರಣ ನಿಗೂಢ..!