ನ್ಯೂಸ್ ನಾಟೌಟ್: ರೀಲ್ಸ್ ಹುಚ್ಚಾಟದಿಂದ ಕೆಲವೊಂದು ಧಾರ್ಮಿಕ ಕೇಂದ್ರಗಳ ಪಾವಿತ್ರ್ಯತೆಗೂ ಧಕ್ಕೆ ತರುವಂತಾಗಿದೆ.ಹುಟ್ಟು ಹಬ್ಬವನ್ನು ಮನೆ, ಹೋಟೆಲ್, ಅಥವಾ ರೆಸಾರ್ಟ್ ಗಳಲ್ಲಿ ಮಾಡುತ್ತಾರೆ.
ಆದರೆ ಇಲ್ಲಿರುವ ವಿಡಿಯೋದಲ್ಲಿ ಮಹಿಳೆಯೊಬ್ಬಳು ತನ್ನ ಹುಟ್ಟು ಹಬ್ಬದವನ್ನು ವಾರಣಾಸಿಯ ಪ್ರಸಿದ್ಧ ದೇವಾಲಯವಾದ ಕಾಲಭೈರವೇಶ್ವರ ದೇವಸ್ಥಾನದಲ್ಲಿ ಆಚರಿಸಿಕೊಂಡಿರುವುದು ಅಷ್ಟು ಮಾತ್ರ ಅಲ್ಲದೆ, ಮಹಿಳೆ ದೇವರ ದರ್ಶನ ಪಡೆದು ಗರ್ಭಗುಡಿಯಲ್ಲೇ ಅರ್ಚಕರ ಸಮ್ಮುಖದಲ್ಲಿ ಕೇಕ್ ಕತ್ತರಿಸಿ ದೇವರಿಗೆ ಸಮರ್ಪಿಸಿದ್ದಾರೆ. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ ಅಲ್ಲದೆ ಮಹಿಳೆ ಹಾಗೂ ದೇವಳದ ಅರ್ಚಕರ ವಿರುದ್ಧ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದುವರೆಗೆ ಎಲ್ಲೂ ಯಾರೂ ದೇವಸ್ಥಾನದ ಗರ್ಭಗುಡಿಯಲ್ಲಿ ಕೇಕ್ ಕತ್ತರಿಸಿ ಹುಟ್ಟು ಹಬ್ಬ ಆಚರಿಸಿದ ವಿವರವೇ ಇಲ್ಲ ಇದು ಅಹಂಕಾರದ ಪರಮಾವಧಿ ಅಲ್ಲದೆ ದೇವಳದ ಅರ್ಚಕರೂ ಇದಕ್ಕೆ ಸಮ್ಮತಿ ನೀಡಿರುವುದು ವಿಷಾಧನೀಯ ಎಂದು ನೆಟ್ಟಿಗರು ತಮ್ಮ ಆಕ್ರೋಶ ಹೊರ ಹಾಕಿದ್ದಾರೆ.
Click