ಬೆಂಗಳೂರುಸಿನಿಮಾ

ಗುಣಮುಖರಾಗಿ ತಾಯ್ನಾಡಿಗೆ ಮರಳಿದ ನಟ ಶಿವರಾಜ್ ಕುಮಾರ್ ಗೆ ಅದ್ಧೂರಿ ಸ್ವಾಗತ, ರಾಮ್ ಚರಣ್ ಸಿನಿಮಾದಲ್ಲಿ ನಟಿಸ್ತೇನೆ ಎಂದ ಶಿವಣ್ಣ

ನ್ಯೂಸ್ ನಾಟೌಟ್ : ಅನಾರೋಗ್ಯದ ಚಿಕಿತ್ಸೆಗಾಗಿ ಅಮೆರಿಕಕ್ಕೆ ತೆರಳಿದ್ದ ಶಿವರಾಜ್ ಕುಮಾರ್ ಚಿಕಿತ್ಸೆ ಪಡೆದು ಗುಣಮುಖರಾಗಿ ಬೆಂಗಳೂರಿಗೆ ಇಂದು (ಜನವರಿ 26) ವಾಪಸ್ಸಾಗಿದ್ದಾರೆ. ವಿಮಾನ ನಿಲ್ದಾಣದಲ್ಲಿ ಸಿನಿಮಾ ಸೆಲೆಬ್ರಿಟಿಗಳು, ಆಪ್ತರು ನಟ ಶಿವಣ್ಣನನ್ನು ಸ್ವಾಗತಿಸಿದ್ದಾರೆ.

ನಿವಾಸಕ್ಕೆ ಆಗಮಿಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳ ಬಳಿ ಮಾತನಾಡಿದ ಶಿವರಾಜ್ ಕುಮಾರ್, ‘ಅಮೆರಿಕಕ್ಕೆ ಹೋಗಬೇಕಾದರೆ ಎಮೋಷನಲ್ ಆಗಿದ್ದೆ, ಭಯವೂ ಇತ್ತು. ಏನೇ ಆದರೂ ಜೀವನದಲ್ಲಿ ಫೇಸ್ ಮಾಡಬೇಕು, ಮಾಡೋಣ ನೋಡೋಣ ಎಂದರೆ ಆಗಲ್ಲ. ಹೋಗುವಾಗ ಭಯವಿತ್ತು, ವಿಮಾನದಲ್ಲಿ ಟ್ರಾವೆಲ್ ಮಾಡುವಾಗಲೂ ಸಹ ನನಗೆ ತುಸು ಅಳುಕು ಇತ್ತು. ಅಲ್ಲಿಗೆ ಹೋದ ಮೇಲೆ ಕಾನ್ಫಿಡೆನ್ಸ್ ಬಂತು, ಶಸ್ತ್ರಚಿಕಿತ್ಸೆ ಆಗುವ ದಿನವೂ ಭಯ ಇತ್ತು. 6 ಗಂಟೆ ಮನೆಯವರಿಗೂ ಟೆನ್ಶನ್ ಇತ್ತು, ಆದರೆ ಎಲ್ಲವೂ ಯಶಸ್ವಿಯಾಗಿ ಆಯ್ತು’ ಎಂದಿದ್ದಾರೆ ಶಿವರಾಜ್ ಕುಮಾರ್.

‘ಆಪರೇಷನ್ ಬಳಿಕ ಟೈಮ್ ತೆಗೊಂಡು ವಾಕಿಂಗ್ ಶುರು ಮಾಡಿದೆ, ನಿಧಾನಕ್ಕೆ ಆರೋಗ್ಯ ಸರಿ ಹೋಯ್ತು. ಹೆಣ್ಣುಮಕ್ಕಳಿಗೆ ತುಂಬಾ ಕಷ್ಟ ಈ ಸಮಯದಲ್ಲಿ, ನನಗೆ ಎಲ್ಲರ ಸಪೋರ್ಟ್ ಸಿಕ್ಕಿತು, ಒಂದು ತಿಂಗಳು ಪ್ರತಿಯೊಬ್ಬರೂ ನನ್ ಜೊತೆ ಇದ್ದರು. ಎಲ್ಲರೂ ನನ್ನ ಜೊತೆಗೆ ಇದ್ದರು, ನಾನು ಅದೃಷ್ಟವಂತ ಅನಿಸುತ್ತಿದೆ. ಈಗ ತುಂಬಾ ಸ್ಟ್ರಾಂಗ್ ಆಗಿದೀನಿ. ಎಲ್ಲರ ಆಶೀರ್ವಾದ ನನಗೆ ಸಿಕ್ಕಿದೆ. 38 ವರ್ಷಗಳಿಂದಲೂ ನನ್ನನ್ನು ಬೆಳೆಸಿದ್ದಾರೆ. ‘ಕಿಂಗ್ ಈಸ್ ಬ್ಯಾಕ್’ ಎಂದಿದ್ದಾರೆ ಶಿವರಾಜ್ ಕುಮಾರ್.
ಎರಡು ಮೂರು ದಿನ ಲಿಕ್ವಿಡ್ ಫುಡ್ ನಲ್ಲೇ ಇದ್ದೆ, ಎರಡು ದಿನ, ಮೂರು ದಿನದ ಬಳಿಕ ಲೈಟ್ ವಾಕ್ ಮಾಡೋಕೆ ಶುರು ಮಾಡಿದೆ, ಈ ಥರ ಕಾಯಿಲೆ ಬಂದಾಗ ಹೆಣ್ಣು ಮಕ್ಕಳಿಗೆ ಬಹಳ ಕಷ್ಟವಾಗುತ್ತದೆ. ಜೀವನನೇ ಒಂದು ಪಾಠ. ಇನ್ನು ರಾಮ್ ಚರಣ್ ಅವರ ಸಿನಿಮಾದಲ್ಲಿಯೂ ನಟಿಸುತ್ತೀನಿ ಎಂದಿದ್ದಾರೆ.

https://newsnotout.com/2025/01/belthangady-robbery-charmadi-case-viral-news-d/

Related posts

ಸೂಪರ್‌ ಸ್ಟಾರ್‌ ರಜನೀಕಾಂತ್ ಆಸ್ಪತ್ರೆಗೆ ದಾಖಲು..! ಇಲ್ಲಿದೆ ಸಂಪೂರ್ಣ ಮಾಹಿತಿ

ಕೆಎಸ್.ಆರ್.ಟಿ.ಸಿ ಆರಂಭಿಸಲಿದೆಯಾ ಸರಕು ಸಾಗಣೆ ಸೇವೆ..? ಲಾರಿಗಳನ್ನು ವಿನ್ಯಾಸಗೊಳಿಸಲಾದ ಕೆಎಸ್.ಆರ್.ಟಿ.ಸಿ ಯ ಪ್ಲಾನ್ ಏನು?

ಮೊಬೈಲ್‌ನಲ್ಲಿ ಜೋರಾಗಿ ಮಾತನಾಡಿದ್ದಕ್ಕೆ ಜಗಳ!ಅಕ್ಕನನ್ನೇ ಕೊಲೆ ಮಾಡಿದ ತಂಗಿ..!