ಕರಾವಳಿ

ತರಬೇತಿಗಳಿಲ್ಲದೆ ಎಲೆಗಳಲ್ಲಿಯೇ ಚಿತ್ರಬಿಡಿಸುವ ಕಾಡುಪಂಜದ ಹುಡುಗ

524

ನ್ಯೂಸ್ ನಾಟೌಟ್ : ಚಿತ್ರಕಲೆ ಅನ್ನುವುದು ಒಂದು ಅದ್ಭುತ ಕಲೆ. ಕೆಲವರಿಗೆ ಇದು ರಕ್ತದಲ್ಲಿಯೇ ಕರಗತವಾಗಿರುತ್ತದೆ. ಹಾಗೆಯೇ ಇಲ್ಲೊಬ್ಬ ಹಳ್ಳಿ ಹುಡುಗ ಎಲೆಗಳಲ್ಲಿಯೇ ಚಿತ್ರ ಬಿಡಿಸಿ ಸುದ್ದಿಯಾಗಿದ್ದಾನೆ. ಯಾವುದೇ ತರಬೇತಿಗಳಿಲ್ಲದೆ ಈತ ಕಾಂತಾರ ಸಿನಿಮಾದ ನಟ, ನಿರ್ದೇಶಕ ರಿಷಭ್ ಶೆಟ್ಟಿ ಸೇರಿದಂತೆ ಹಲವಾರು ದಿಗ್ಗಜರ, ದೈವ ದೇವರ ಚಿತ್ರವನ್ನು ಎಲೆಯಲ್ಲಿ ಬಿಡಿಸಿದ್ದಾನೆ.

ಮನೀಶ್‌ ಕಾಡುಪಂಜ

ಈತ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಸಂಪಾಜೆ ಗ್ರಾಮದ ಕಾಡುಪಂಜ ನಾಗೇಶ್ ಅವರ ಪುತ್ರ ಮನೀಶ್‌ ಕಾಡುಪಂಜ. ಈತ ಅರಂತೋಡಿನ ನೆಹರೂ ಸ್ಮಾರಕ ಪದವಿ ಪೂರ್ವ ಕಾಲೇಜಿನ ವಿಜ್ಞಾನ ವಿಭಾಗದ ಪ್ರಥಮ ಪಿಯುಸಿ ವಿದ್ಯಾರ್ಥಿ. ಈತನಿಗೆ ಬಾಲ್ಯದಿಂದಲೂ ಚಿತ್ರಗಳನ್ನು ಬಿಡಿಸುವ ಹವ್ಯಾಸವಿತ್ತು. ಅದರಂತೆ ಆತ ಹಲವಾರು ಚಿತ್ರಗಳನ್ನು ರಚಿಸಿ ಗಮನ ಸೆಳೆದಿದ್ದಾನೆ.

ಸ್ವಾಮಿ ಕೊರಗಜ್ಜ, ನಟ , ನಿರ್ದೇಶಕ ರಿಷಭ್ ಶೆಟ್ಟಿ, ಪುನೀತ್ ರಾಜ್ ಕುಮಾರ್, ಪ್ರಧಾನಿ ನರೇಂದ್ರ ಮೋದಿ, ಮಹಾತ್ಮ ಗಾಂಧೀಜಿ, ವೀರೇಂದ್ರ ಹೆಗ್ಗಡೆ, ಸುಭಾಷ್ ಚಂದ್ರ ಬೋಸ್‌ ಸೇರಿದಂತೆ ಹಲವಾರು ದಿಗ್ಗಜರ, ದೈವ-ದೇವರ ಚಿತ್ರಗಳನ್ನು ಎಲೆಗಳಲ್ಲಿ ಬಿಡಿಸಿದ್ದಾನೆ. ಇದನ್ನು ತನ್ನದೇ ಯುಟ್ಯೂಬ್ ಚಾನಲ್ ನಲ್ಲಿ ಪ್ರಕಟಿಸಿ ಎಲ್ಲರ ಗಮನ ಸೆಳೆದಿದ್ದಾನೆ.

See also  ಚಿನ್ನದ ಬೆಲೆಯಲ್ಲಿ 230, ಬೆಳ್ಳಿ ಬೆಲೆ 500 ರೂ. ಹೆಚ್ಚಳ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget