ಕರಾವಳಿ

ಕಡಬ: ರಿಯಾದ್ ಜೈಲಿನಲ್ಲಿ ಬಂಧಿಯಾಗಿರುವ ಕಡಬದ ಯುವಕನಿಗೆ ಶೀಘ್ರದಲ್ಲೇ ಬಿಡುಗಡೆ ಭಾಗ್ಯ, ಸೌದಿ ಜೈಲಿನಿಂದ ಸಂಸದ ನಳಿನ್ ಕುಮಾರ್‌ಗೆ ಬಂತು ಇ-ಮೇಲ್..!

252

ನ್ಯೂಸ್‌ ನಾಟೌಟ್‌: ಯಾರೋ ಮಾಡಿದ ತಪ್ಪಿಗೆ ಕಡಬದ ಅಮಾಯಕ ಯುವಕ ಸಿಲುಕಿ ಸೌದಿಯ ರಿಯಾದ್ ಜೈಲಿನಲ್ಲಿ ಬಂಧಿಯಾಗಿದ್ದ ಘಟನೆಗೆ ಸಂಬಂಧಿಸಿ ಮಹತ್ವದ ಬೆಳವಣಿಗೆಯಾಗಿದೆ.

ಹ್ಯಾಕರ್‌ಗಳ ವಂಚನೆಯಿಂದ ಸೌದಿಯ ರಿಯಾದ್ ಜೈಲಿನಲ್ಲಿ ಸೆರೆಮನೆ ವಾಸ ಅನುಭವಿಸುತ್ತಿರುವ ದಕ್ಷಿಣ ಕನ್ನಡ ಜಿಲ್ಲೆಯ ಕಡಬದ ಚಂದ್ರಶೇಖರ್ ಎನ್ನುವ ಅನಿವಾಸಿ ಭಾರತೀಯ ಶೀಘ್ರದಲ್ಲೇ ಬಿಡುಗಡೆಯಾಗಲಿದ್ದಾನೆ. ಈ ಸಂಬಂಧ ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕೇಂದ್ರ ಸರಕಾರದ ಮೂಲಕ ಸೌದಿ ರಾಯಭಾರಿ ಕಚೇರಿಗೆ ವಿವರಣೆ ನೀಡಿ ಪತ್ರ ಬರೆದಿದ್ದು, ಇದೀಗ ಪತ್ರಕ್ಕೆ ಸೌದಿ ರಾಯಭಾರಿ ಕಚೇರಿಯಿಂದ ಪೂರಕ ಸ್ಪಂದನೆ ದೊರಕಿದೆ ಎನ್ನಲಾಗಿದೆ.

ಸಂಸದ ನಳಿನ್ ಕುಮಾರ್‌ ಅವರ ದೆಹಲಿ ಕಚೇರಿಗೆ ಸೌದಿ ಅರೇಬಿಯಾದ ರಿಯಾದ್‌ ಜೈಲಿನಿಂದಲೇ ಇ-ಮೇಲ್ ಬಂದಿದ್ದು, ಹಲವಾರು ವಿವರಣೆಗಳನ್ನು ಒದಗಿಸಿದೆ. ಒಂದು ಕಡೆಯಿಂದ ಚಂದ್ರಶೇಖರ್ ಅವರ ಸ್ನೇಹಿತರು ಬಿಡುಗಡೆಗೆ ಸತತ ಪ್ರಯತ್ನ ಪಡುತ್ತಿದ್ದು, ಇತ್ತ ಸಂಸದರ ಮೂಲಕ ಭಾರತ ಸರಕಾರ ಶ್ರಮಿಸುತ್ತಿರುವುದರಿಂದ ಶೀಘ್ರ ಬಿಡುಗಡೆಯಾಗುವ ಆಶಾಭಾವನೆ ಇದೆ.

https://www.youtube.com/watch?v=jSafzs4BB_c
See also  ಪುತ್ತೂರು: ಸಗರಸಭಾ ಸದಸ್ಯ ನೇಣು ಬಿಗಿದು ಆತ್ಮಹತ್ಯೆ , ಮನೆಯಲ್ಲಿ ಯಾರೂ ಇಲ್ಲದ ವೇಳೆ ದುರಂತ
  Ad Widget   Ad Widget   Ad Widget     Ad Widget   Ad Widget   Ad Widget Ad Widget     Ad Widget   Ad Widget   Ad Widget