ಕರಾವಳಿ

ಮಡಿಕೇರಿಯಿಂದ ಕಾಣೆಯಾಗಿದ್ದ ಮಹಿಳೆ ಕಡಬದಲ್ಲಿ ಪತ್ತೆ 

538

ಕಡಬ: ಮಡಿಕೇರಿಯಿಂದ ನಾಪತ್ತೆಯಾಗಿದ್ದ ಮಹಿಳೆಯೊಬ್ಬರು ಕಡಬದಲ್ಲಿ ಪತ್ತೆಯಾಗಿದ್ದಾರೆ. ನಾಪತ್ತೆಯಾಗಿದ್ದ ಮಹಿಳೆ ನೆಟ್ಟಣದ ಮಹಿಳೆಯೋರ್ವರ ಮನೆಯಲ್ಲಿ ಇರುವುದನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.

ಮಡಿಕೇರಿ ಭಾಗದ ಮುಸ್ಲಿಂ ಮಹಿಳೆ  ಹಿಂದೂ ಯುವಕನನ್ನು ಮದುವೆಯಾಗಿದ್ದು ಬಳಿಕ ಅಲ್ಲಿಂದ ನಾಪತ್ತೆಯಾಗಿದ್ದರು ಎನ್ನಲಾಗಿದ್ದು, ಬಳಿಕ ಆ ಮಹಿಳೆ ಸುಳ್ಯಕ್ಕೆ ಬಂದಿದ್ದರು ಎನ್ನಲಾಗಿತ್ತು. ಅಲ್ಲಿಂದ ನೆಟ್ಟಣ ಸಮೀಪದ ಮುಸ್ಲಿಂ ಸಮುದಾಯದ ಮಹಿಳೆಯೋರ್ವರು ಮನೆ ಕೆಲಸಕ್ಕೆಂದು ಕರೆ ತಂದಿದ್ದರು ಎಂದು ತಿಳಿದು ಬಂದಿದೆ. ನಾಪತ್ತೆಯಾಗಿದ್ದ ಮಹಿಳೆಯ ಪತಿ ಮಡಿಕೇರಿ ಪೊಲೀಸರಿಗೆ ದೂರು ನೀಡಿದ್ದು ಈ ಹಿನ್ನೆಲೆಯಲ್ಲಿ ಮಹಿಳೆಯು ನೆಟ್ಟಣದಲ್ಲಿ ಇರುವುದನ್ನು ಪೋಲಿಸರು ಪತ್ತೆ ಹಚ್ಚಿದ್ದರು. ಮಾ.19ರಂದು ನೆಟ್ಟಣದ ಮಹಿಳೆ ಹಾಗೂ ನಾಪತ್ತೆಯಾಗಿದ್ದ ಮಹಿಳೆ ಆಟೋ ರಿಕ್ಷಾದಲ್ಲಿ ಕಡಬಕ್ಕೆ ಬರುತ್ತಿದ್ದ ವೇಳೆ ಐತ್ತೂರು ಪಂಚಾಯತ್ ಬಳಿ ಪೊಲೀಸರು ಅವರನ್ನು ವಶಪಡಿಸಿಕೊಂಡಿದ್ದರು. ಇದೀಗ ಮಡಿಕೇರಿ ಪೊಲೀಸರು ಮಹಿಳೆಯನ್ನು ಕರೆದೊಯ್ದಿದ್ದಾರೆ ಎಂದು ತಿಳಿದು ಬಂದಿದೆ.

See also  ಪುತ್ತೂರು-ಸುಳ್ಯ: ಉಚಿತ ಕಂಪ್ಯೂಟರ್ ಟೀಚರ್ ಟ್ರೈನಿಂಗ್ , ಸೀಮಿತ ಸೀಟುಗಳಿಗೆ ಮಾತ್ರ ಅವಕಾಶ, ಕೂಡಲೇ ಅರ್ಜಿ ಸಲ್ಲಿಸಿ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget   Ad Widget