ಕರಾವಳಿ

ಕಡಬ:ಔಷಧಿ ತರಲೆಂದು ತೆರಳಿದ್ದ ವ್ಯಕ್ತಿ ನಾಪತ್ತೆ,ಪತ್ತೆಗಾಗಿ ಮನವಿ

179

ನ್ಯೂಸ್ ನಾಟೌಟ್ : ಕಳೆದ ಆರು ದಿನಗಳ ಹಿಂದೆ ವಿದ್ಯುತ್ ಬಿಲ್ಲು ಪಾವತಿಗೆ ಹಾಗೂ ಔಷಧಿಗೆಂದು ಮನೆಯಿಂದ ತೆರಳಿದ್ದ ವ್ಯಕ್ತಿಯೊಬ್ಬರು ನಾಪತ್ತೆಯಾಗಿರುವ ಬಗ್ಗೆ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಡಬ ತಾಲೂಕಿನ ಐತ್ತೂರು ಗ್ರಾಮದ ಎಡೆಂಜ ನಿವಾಸಿ ನಾಗರಾಜ (65)ನಾಪತ್ತೆಯಾದ ವ್ಯಕ್ತಿ.

ನಾಗರಾಜರವರು ಮಾ.20ರಂದು ಬೆಳಿಗ್ಗೆ 9.30 ಕ್ಕೆ ಮನೆಯಿಂದ ವಿದ್ಯುತ್ ಬಿಲ್ಲು ಪಾವತಿಸಲು ಹಾಗೂ ಆಸ್ಪತ್ರೆಗೆ ಔಷಧಿ ತರಲೆಂದು ತೆರಳಿದ್ದರು.ಆದರೆ ಆರು ದಿನಗಳಾದರೂ ಮನೆಗೆ ಹಿಂತಿರುಗಿಲ್ಲ ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ. ಸಂಬಂಧಿಕರ ಮನೆಗಳಲ್ಲಿ ಹಾಗೂ ಪರಿಸರದಲ್ಲಿ ಎಷ್ಟೇ ಹುಡುಕಾಟ ನಡೆಸಿದರೂ ಪತ್ತೆಯಾಗಿಲ್ಲ. ಇವರನ್ನು ಪತ್ತೆ ಮಾಡಿಕೊಡುವಂತೆ ನಾಗರಾಜ ಅವರ ಪತ್ನಿ ಶಿವಮ್ಮ ಎಂಬವರು ನೀಡಿದ ದೂರಿನಂತೆ ಕಡಬ ಠಾಣೆಯಲ್ಲಿ ದೂರು ದಾಖಲಾಗಿದೆ.

See also  ಯಡಕುಮಾರಿ ಬಳಿ ಗುಡ್ಡ ಕುಸಿತ, ಬೆಂಗಳೂರು -ಮಂಗಳೂರು ರೈಲ್ವೆ ಸಂಚಾರ ಅಸ್ತವ್ಯಸ್ತ
  Ad Widget   Ad Widget   Ad Widget   Ad Widget   Ad Widget