ಕ್ರೈಂ

ಕಡಬ : ಮಲಗಿದ್ದಲ್ಲೇ ಚಿರ ನಿದ್ರೆಗೆ ಜಾರಿದ ನಿವೃತ್ತ ಯೋಧ..!

181
Spread the love

ಕಡಬ: ಇಲ್ಲಿನ ಸಮೀಪದ ಕೋಡಿಂಬಾಳ ಗ್ರಾಮದ ಕುದುಂಬೂರು ಸಮೀಪ ನಿವೃತ್ತ ಸೈನಿಕರೋರ್ವರು ಮನೆಯೊಳಗಡೆ ಮಲಗಿದಲ್ಲೆ ಮೃತಪಟ್ಟಿರುವ ಘಟನೆ ನಿನ್ನೆ ರಾತ್ರಿ ನಡೆದಿರುವುದು ಬೆಳಕಿಗೆ ಬಂದಿದೆ. ಮೃತರನ್ನು ಮೂಲತಃ ನೂಜಿಬಾಳ್ತಿಲ ಕನ್ವರೆ ಸಮೀಪದ ವೇಳಿಕಲ್ ನಿವಾಸಿ ನಿವೃತ್ತ ಸೈನಿಕ ಯೋಹನ್ನಾನ್ (50) ಎಂದು ಗುರುತಿಸಲಾಗಿದೆ.

ಯೋಹನ್ನಾನ್ ಅವರು ಕಳೆದ ರಾತ್ರಿಯೇ ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ. ಇವರು ಮನೆಯಲ್ಲಿ ಒಬ್ಬರೇ ಇದ್ದು ನಿನ್ನೆ ಹಗಲಲ್ಲೂ ಕೂಡ ಮನೆಯ ಎದುರಿದ್ದ ಲೈಟ್ ಉರಿಯುತ್ತಿತ್ತು. ಹಗಲು ವೇಳೆಯೇ ಲೈಟ್ ಉರಿಯುತ್ತಿದ್ದು, ಮನೆ ಬಾಗಿಲಿಗೂ ಚಿಲಕ ಹಾಕಿದ್ದರಿಂದ ಸ್ಥಳೀಯರು ಸಂಶಯದಿಂದ ಬಾಗಿಲು ತೆಗೆದು ನೋಡಿದಾಗ ಮೃತಪಟ್ಟಿರುವುದು ದೃಢಪಟ್ಟಿದೆ. ದೇಶ ಸೇವೆ ಮಾಡಿದ ಯೋಧ ಈ ರೀತಿಯಾಗಿ ಸಾವಿಗೀಡಾಗಿರುವುದು ವಿಪರ್ಯಾಸವೇ ಸರಿ.

See also  ಕೊಡಗು: SSLC ಬಾಲಕಿಯ 'ತಲೆ' ಕಡಿದು ಮರದ ಮೇಲಿಟ್ಟ ನಿಷ್ಕರುಣಿ ಪ್ರೇಮಿ..! ಸಹೋದರಿಯ 'ರುಂಡ' ಕಂಡು ಸಹೋದರ ವಿಚಿತ್ರವಾಗಿ ವರ್ತಿಸಿದ್ದೇಕೆ..? ಪೊಲೀಸರೇ ಶಾಕ್ ಗೆ ಒಳಗಾಗಿದ್ದೇಗೆ..?
  Ad Widget   Ad Widget   Ad Widget