ಕ್ರೈಂ

ಕಡಬ: ಮದ್ಯದ ನಶೆಯಲ್ಲಿ ಪಾನ್ ಅಂಗಡಿಯವನಿಗೆ ಹಿಗ್ಗಾಮುಗ್ಗಾ ಥಳಿಸಿದ ಪೊಲೀಸರು

ಕಡಬ: ಬೇಲಿಯೇ ಎದ್ದು ಹೊಲ ಮೇಯ್ದರೆ ಹೇಗಿರುತ್ತದೆ ಅನ್ನುವುದಕ್ಕೆ ಇಲ್ಲಿಬ್ಬರು ಪೊಲೀಸ್ ಸಿಬ್ಬಂದಿಯ ಪ್ರತ್ಯಕ್ಷ ಉದಾಹರಣೆಯಾಗಿ ಕಾಣಬಹುದು. ಹೌದು, ಉಪ್ಪಿನಂಗಡಿ ಠಾಣೆಯ ಪೊಲೀಸ್ ಅಧಿಕಾರಿಯೊಬ್ಬರು ಕುಡಿದ ಮತ್ತಿನಲ್ಲಿ ರಸ್ತೆ ಬದಿಯ ಪಾನ್ ಅಂಗಡಿಯ ಮಾಲೀಕನಿಗೆ ಲಾಠಿಯಲ್ಲಿ ಯದ್ವಾತದ್ವಾ ಬಾರಿಸಿ ಘಟನಾ ಸ್ಥಳದಿಂದ ಕಾಲ್ಕಿತ್ತ ಘಟನೆ ಶುಕ್ರವಾರ ಮಧ್ಯರಾತ್ರಿ ನಡೆದಿದೆ.

ಕಡಬದಲ್ಲಿ ಪ್ರತಿ ವರ್ಷವೂ ನಡೆಯುವಂತೆ  ಅದ್ದೂರಿಯಾಗಿ ನಡೆಯುವ ಏಕಾಹಭಜನ ಮಹೋತ್ಸವಕ್ಕೆ  ಹೆಚ್ಚುವರಿಯಾಗಿ ಉಪ್ಪಿನಂಗಡಿ ಠಾಣೆಯ ಪೊಲೀಸರನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು.    ನಡು ರಾತ್ರಿ ಕಾಲೇಜು ರಸ್ತೆಯಲ್ಲಿರುವ ಪಾನ್ ಅಂಗಡಿಯತ್ತ ನಡೆದುಕೊಂಡು  ಬಂದ  ಇಬ್ಬರು ಪೊಲೀಸ್‌  ಸಿಬ್ಬಂದಿ   ಬಿಟ್ಟಿ ಬೀಡ ಜಗಿದು ಹಣ ನೀಡದೆ ಹೋಗಲು ಮುಂದಾಗಿದ್ದರು . ಹೀಗಾಗಿ ಪಾನ್ ಅಂಗಡಿಯಾತ ೨೦ ರೂ  ಹಣ ಕೊಡುವಂತೆ ವಿನಂತಿಸಿದ್ದ. ಇದರಿಂದ   ಕುಪಿತಗೊಂಡ ಪೊಲೀಸ್ ಸಿಬ್ಬಂದಿ  ಪೊಲೀಸರ ಬಳಿಯೇ ಹಣ ಕೇಳುತ್ತಿಯಾ ಎಂದು ಏರುಧ್ವನಿಯಲ್ಲಿ ಮಾತನಾಡಿ  ಕೈಯಲ್ಲಿದ್ದ ಲಾಠಿಯಿಂದ ಯದ್ವತದ್ವಾ ಹೊಡೆದು ಪಾನ್ ಸ್ಟಾಲನ್ನು ಧ್ವಂಸ ಮಾಡಿದ್ದಾರೆ ಎನ್ನಲಾಗಿದೆ. ಪೊಲೀಸ್ ಸಿಬ್ಬಂದಿ  ದುರ್ವರ್ತನೆ ತೋರಿದ ಬಳಿಕ ತಮ್ಮ  ಕಾರಿನಲ್ಲಿ ಹೋಗಿ ಕುಳಿತಿದ್ದು ಇದನ್ನು ಗಮನಿಸಿದ   ಸಾರ್ವಜನಿಕರು ಕಾರನ್ನು ಸುತ್ತುವರಿದು ತರಾಟೆಗೆ ತೆಗೆದುಕೊಂಡಿದ್ದಾರೆ.  

Related posts

ವಿದ್ಯಾರ್ಥಿಗಳ ಉತ್ತರ ಪತ್ರಿಕೆಯಲ್ಲಿ ನೋಟುಗಳ ರಾಶಿ..! ಫೋಟೋ ಕಳುಹಿಸಿದ ಶಿಕ್ಷಕಿ! ಭಾರತೀಯ ಪೊಲೀಸ್​ ಸೇವಾ ಅಧಿಕಾರಿ ಈ ಬಗ್ಗೆ ಹೇಳಿದ್ದೇನು?

ಕೊಡಗು: ಬಿಜೆಪಿ ಕಾರ್ಯಕರ್ತನ ಸಾವು ಪ್ರಕರಣ..! ಯದುವೀರ್ ಸೇರಿ ಹಲವು ಬಿಜೆಪಿ ಮುಖಂಡರಿಂದ ಪ್ರತಿಭಟನೆ..! ನಿಷೇಧಾಜ್ಞೆ ಜಾರಿ

ದರ್ಶನ್ ಪ್ರಕರಣ: ಕೈದಿ ನಂಬರ್ ‘D 6106’ ಎಂದು ಹೇರ್ ಕಟಿಂಗ್‌ ಮಾಡಿಸಿಕೊಂಡ ಅಭಿಮಾನಿ..! ಇಲ್ಲಿದೆ ವೈರಲ್ ವಿಡಿಯೋ