ಕರಾವಳಿಕೊಡಗುಸುಳ್ಯ

ಕಡಬ: ಕುಮಾರಧಾರ ನದಿಗೆ ವ್ಯಕ್ತಿ ಜಿಗಿದ ಶಂಕೆ, ಪೊಲೀಸರಿಂದ ಹುಡುಕಾಟ

ನ್ಯೂಸ್ ನಾಟೌಟ್: ಕುಮಾರಧಾರ ನದಿಗೆ ವ್ಯಕ್ತಿಯೊಬ್ಬ ಜಿಗಿದಿರುವ ಶಂಕೆ ವ್ಯಕ್ತವಾಗಿದೆ.

ಕಡಬ ತಾಲೂಕಿನ ಕೋಡಿಂಬಾಳ ಸಮೀಪದ ನೆಕ್ಕಿಲಾಡಿ ಗ್ರಾಮದ ಕೋರಿಯರ್ ಎಂಬಲ್ಲಿ ಘಟನೆ ನಡೆದಿದೆ. ಸಕಲೇಶಪುರ ಬಾಲಗದ್ದೆ ನಿವಾಸಿ ಧರ್ಮಯ್ಯ (40) ಎಂಬವರು ನದಿಗೆ ಹಾರಿರುವ ಶಂಕೆ ವ್ಯಕ್ತವಾಗಿದೆ ಎನ್ನಲಾಗಿದೆ. ನದಿ ಬದಿಯಲ್ಲಿ ಧರ್ಮಯ್ಯ ಅವರ ಶೂ ಪತ್ತೆಯಾಗಿದೆ. ಘಟನಾ ಸ್ಥಳಕ್ಕೆ ಕಡಬ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶೌರ್ಯ ತಂಡದ ಸದಸ್ಯರಿಂದ ನದಿಯಲ್ಲಿ ಹುಡುಕಾಟ ನಡೆಯುತ್ತಿದೆ. ಧರ್ಮಯ್ಯ ರಬ್ಬರ್ ಕಟ್ಟಿಂಗ್ ಕೆಲಸಕ್ಕೆ ಸಕಲೇಶಪುರದಿಂದ ಕೋಡಿಂಬಾಳಕ್ಕೆ ಬಂದಿದ್ದ ಎನ್ನಲಾಗಿದೆ.

Related posts

‘ನನಗೇನೂ ವಿರೋಧ ಪಕ್ಷದ ನಾಯಕನಾಗುವ ಹಂಬಲವಿಲ್ಲ,ಒಂದು ವೇಳೆ ಆದರೆ ಅದರ ಮಜಾನೇ ಬೇರೆ:ಕಾಂಗ್ರೆಸ್‌ನವರಿಗೆ ತಕ್ಕ ಉತ್ತರ ಕೊಡಬಲ್ಲವನು ನಾನೊಬ್ಬನೇ-ಯತ್ನಾಳ್

ಸುಳ್ಯ: ನಿಷೇಧಿತ ಪ್ಲಾಸ್ಟಿಕ್‌ ಮಾರಾಟಕ್ಕೆ ಯತ್ನ , ಓಮ್ನಿ ಕಾರು ಸಹಿತ 5 ಕ್ವಿಂಟಾಲ್ ಪ್ಲಾಸ್ಟಿಕ್ ವಶಕ್ಕೆ ಪಡೆದ ನಗರ ಪಂಚಾಯತ್..!

ಸುಬ್ರಹ್ಮಣ್ಯ: ಕೊಳೆತ ಸ್ಥಿತಿಯಲ್ಲಿ ತಲೆಬುರುಡೆ ಹಾಗೂ ಬ್ಯಾಗ್‌ ಪತ್ತೆ, ಕೊಂಬೆಯಲ್ಲಿ ನೇತಾಡುತ್ತಿದ್ದ ಬಟ್ಟೆ..! ಸುಬ್ರಹ್ಮಣ್ಯ- ಉಪ್ಪಿನಂಗಡಿ ರಾಜ್ಯ ಹೆದ್ದಾರಿಯ ರಕ್ಷಿತಾರಣ್ಯದಲ್ಲಿ ಏನಿದು ನಿಗೂಢ ರಹಸ್ಯ..?