ಕರಾವಳಿ

ಕಡಬ:ಎಣ್ಣೆ ಹೊಡ್ದು ಬಾರ್ ಮುಂದೆಯೇ ಗಡದ್ ನಿದ್ದೆ,ಗ್ರಾಮಕರಣಿಕನೊಬ್ಬನ ಅಮಲಿನ ಕಥೆ!

344

ನ್ಯೂಸ್ ನಾಟೌಟ್ :ಜವಾಬ್ದಾರಿಯುತ ಸ್ಥಾನದಲ್ಲಿರುವ ಗ್ರಾಮಕರಣಿಕರೊಬ್ಬರು ಕಂಠ ಪೂರ್ತಿ ಕುಡಿದು ಬಾರ್ ಮುಂದೆಯೇ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವ ಘಟನೆ ಕಡಬ ಸಮೀಪದ ಕಳಾರದಿಂದ ವರದಿಯಾಗಿದೆ.ಈ ದೃಶ್ಯವನ್ನು ಸ್ಥಳೀಯರು ಮೊಬೈಲ್ ನಲ್ಲಿ ಸೆರೆ ಹಿಡಿದ್ದಾರೆ.

ಕಡಬ ಕಂದಾಯ ಇಲಾಖೆ ವ್ಯಾಪ್ತಿಯ ಗೋಳಿತ್ತೊಟ್ಟು ಗ್ರಾಮದ ಗ್ರಾಮಕರಣಿಕ ಎಂದು ಸಾಮಾಜಿಕ ಜಾಲತಾಣದಲ್ಲಿ ಸುದ್ದಿಗಳು ಹರಿದಾಡುತ್ತಿದೆ.15 ದಿನಗಳ ಹಿಂದೆಯಷ್ಟೇ ಕುಡಿದು ಬಿದ್ದು ಕಣ್ಣಿಗೆ ಗಾಯವಾಗಿ ಮಂಗಳವಾರವಷ್ಟೇ ಆಸ್ಪತ್ರೆ ಯಿಂದ ಬಿಡುಗಡೆ ಆಗಿ ಕಡಬಕ್ಕೆ ಬಂದಿದ್ದರು ಎನ್ನಲಾಗಿದೆ.

ಎ.19 ರ ಸಂಜೆ ವೇಳೆ ಈ ಘಟನೆ ನಡೆದಿದ್ದು,ಕೆಲ ಸಮಯದ ಬಳಿಕ ತಹಶೀಲ್ದಾರ್ ಕಚೇರಿಯ ಸಿಬ್ಬಂದಿಗಳೇ ಆತನನ್ನು ಮನೆಗೆ ತಲುಪಿಸಿರುವುದಾಗಿ ತಿಳಿದು ಬಂದಿದೆ.ಇವರ ಬಗ್ಗೆ ಗ್ರಾಮಸ್ಥರು ಈ ಹಿಂದೆ ಆರೋಪವೊಂದನ್ನು ಮಾಡಿದ್ದರು. ಕರ್ತವ್ಯಕ್ಕೆ ಸರಿಯಾದ ಸಮಯಕ್ಕೆ ಹಾಜರಾಗದೆ ಪಾನಮತ್ತರಾಗಿಯೇ ಕಚೇರಿಗೆ ಬರುತ್ತಿರುವುದಾಗಿ ಹೇಳಿದ್ದರು. ಇದೀಗ ಸಾಕ್ಷಿ ಸಮೇತ ವಿಡಿಯೋ ಸಿಕ್ಕಿದ್ದು,ಇತರ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಮುಜುಗರಪಡುವಂತಾಗಿದೆ . ಮೇಲಾಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

See also  ಸಿದ್ದರಾಮಯ್ಯ ವಿರುದ್ಧ ಹಿಂದೂ ಕಾರ್ಯಕರ್ತರ ಹತ್ಯೆ ಆರೋಪ ಪ್ರಕರಣ! ಹರೀಶ್ ಪೂಂಜಾ ವಿರುದ್ಧ ಕೇಸ್ ಗೆ ಹೈಕೋರ್ಟ್ ತಡೆ!
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget