ಕರಾವಳಿ

ಆಟೋ ರಿಕ್ಷಾ-ಪಿಕಪ್ ನಡುವೆ ಭೀಕರ ಅಪಘಾತ, 4 ವರ್ಷದ ಕಂದಮ್ಮ ಬಲಿ

ನ್ಯೂಸ್ ನಾಟೌಟ್ : ಆಟೋ ರಿಕ್ಷಾ ಹಾಗೂ ಪಿಕಪ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಆಟೋ ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ನಾಲ್ಕು ವರ್ಷದ ಬಾಲಕನೊಬ್ಬ ದಾರುಣವಾಗಿ ಮೃತಪಟ್ಟ ಘಟನೆ ನಡೆದಿದೆ. ಕಡಬ-ಪಂಜ ಕೋಂಡಿಬಾಳ ಎಂಬಲ್ಲಿ ಗುರುವಾರ ಸಂಜೆ ದುರ್ಘಟನೆ ಸಂಭವಿಸಿದೆ.

ಕಡಬದಿಂದ ಕೋಡಿಂಬಾಳ ಕಡೆಗೆ ತೆರಳುತ್ತಿದ್ದ ರಿಕ್ಷಾಕ್ಕೆ ಎದುರಿನಿಂದ ಬರುತ್ತಿದ್ದ ಪಿಕಪ್ ಡಿಕ್ಕಿ ಹೊಡೆದಿದೆ. ಇದರಿಂದ ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ಪುಟ್ಟ ಕಂದಮ್ಮ ನವೀನ್ ಎಂಬುವವರ ಪುತ್ರ ಹಾರ್ದಿಕ್ ಗಂಭೀರ ಗಾಯಗೊಂಡು ಮೃತಪಟ್ಟಿದ್ದಾರೆ. ಕಡಬ ಸಮುದಾಯ ಕೇಂದ್ರದಲ್ಲಿ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಆಂಬ್ಯುಲೆನ್ಸ್ ಮೂಲಕ ಕರೆದುಕೊಂಡು ಹೋಗುತ್ತಿದ್ದಾಗ ಬಾಲಕ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ.

Related posts

ಮಂಗಳೂರು: ಪತ್ನಿಗೆ ವಿಚ್ಛೇದನ ಕೊಡುವುದಕ್ಕೆ ವಿಳಂಬ ಮಾಡಿದ್ದಕ್ಕೆ ಜಡ್ಜ್‌ ಕಾರನ್ನೇ ಪುಡಿಗೊಳಿಸಿದ ಮಾಜಿ ಸೈನಿಕ..! ಅಂಗಡಿಯಿಂದ ದೊಣ್ಣೆ ಖರೀದಿಸಿ ಕೃತ್ಯ..!

ಕಲ್ಲುಗುಂಡಿ: ಪುಟ್ಟ ಮಗುವಿನ ಜೀವ ಉಳಿಸೋಕೆ ಕ್ರಿಕೆಟ್ ಪಂದ್ಯದಲ್ಲಿ ಗೆದ್ದ ಹಣವನ್ನೇ ನೀಡಿದ ಯುವಕರು..! ಯಶಸ್ವಿ ಯುವಕ ಮಂಡಲ ಹುಡುಗರ ಕಾರ್ಯಕ್ಕೆ ಮೆಚ್ಚುಗೆ

ಅಮರ ತಾಲೂಕು ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ ಗೆ ದೇಣಿಗೆ ಹಸ್ತಾಂತರ