ಕರಾವಳಿ

ಕಡಬ ಒಕ್ಕಲಿಗ ಸಮುದಾಯ ಭವನಕ್ಕೆ ಶಿಲಾನ್ಯಾಸ ಚಪ್ಪರ ಮುಹೂರ್ತ, ಆದಿಚುಂಚನಗಿರಿ ಶಾಖಾ ಮಠದ ಶ್ರೀ ಡಾ. ಧರ್ಮಪಾಲನಾಥ ಸ್ವಾಮೀಜಿ ದಿವ್ಯ ಹಸ್ತದಿಂದ ಚಪ್ಪರ ಮುಹೂರ್ತ

ನ್ಯೂಸ್ ನಾಟೌಟ್: ಕಡಬ ತಾಲೂಕು ಹೊಸ್ಮಠದಲ್ಲಿ ತಲೆ ಎತ್ತಲು ಸಿದ್ಧವಾಗಿರುವ ಒಕ್ಕಲಿಗ ಗೌಡ ಸಮುದಾಯ ಭವನ ಶಿಲಾನ್ಯಾಸ ಮತ್ತು ಡಿ26 ರಂದು ನಡೆಯಲಿರುವ ನೂತನ ತಾಲೂಕು ಸಮಿತಿ ಪದಗ್ರಹಣ ಹಿನ್ನೆಲೆಯಲ್ಲಿ ಸೋಮವಾರ ಚಪ್ಪರಮುಹೂರ್ತ ನಡೆಯಿತು.

ಆದಿಚುಂಚನಗಿರಿ ಮಂಗಳೂರು ಶಾಖಾ ಮಠದ ಶ್ರೀ ಡಾ. ಧರ್ಮಪಾಲನಾಥ ಸ್ವಾಮೀಜಿಯವರ ದಿವ್ಯ ಹಸ್ತದಿಂದ ಚಪ್ಪರ ಮುಹೂರ್ತ ಕಾರ್ಯಕ್ರಮ ನೆರವೇರಿತು. ಕಡಬ ತಾಲೂಕು ಒಕ್ಕಲಿಗ ಸೇವಾ ಸಂಘದ ಅಧ್ಯಕ್ಷ ಸುರೇಶ್ ಗೌಡ ಬೈಲು, ಸ್ವಾತಂತ್ರ್ಯ ಹೋರಾಟಗಾರ ಕೆದಂಬಾಡಿ ರಾಮಯ್ಯ ಗೌಡ ಸ್ಮಾರಕ ಸ್ಥಾಪನ ಸಮಿತಿ ಅಧ್ಯಕ್ಷ ಕಿರಣ್ ಬುಡ್ಲೆಗುತ್ತು, ಸ್ಪಂದನಾ ಸಮುದಾಯ ಸಹಕಾರ ಸಂಘದ ಅಧ್ಯಕ್ಷ ಕೇಶವ ಗೌಡ ಅಮೈ, ಸಂಘಟನಾ ಕಾರ್ಯದರ್ಶಿ ಶಿವರಾಮ ಏನೆಕಲ್, ಖಜಾಂಚಿ ಶಿವಪ್ರಸಾದ ಪುತ್ತಿಲ, ಉಪಾಧ್ಯಕ್ಷರಾದ ವೆಂಕಟ್ರಾಜ್ ಕೊಡಿಬೈಲು. ಧರ್ಮಪಾಲ ಗೌಡ ಕಣ್ಣಲ್, ನಿರ್ದೇಶಕರಾದ ಬಾಲಕೃಷ್ಣ ಗೌಡ ಕೋಲ್ಪೆ, ಚಂದ್ರಶೇಖರ ಕೋಡಿಬೈಲು, ಗಣೇಶ ಗೌಡ ಕೈಕುರೆ, ವೆಂಕಟ್ರಮಣ ಪಾಂಗ, ಸರ್ವೋತ್ತಮ ಪಂಜೋಡಿ ಕಡಬ ತಾಲೂಕು ಯುವ ಸಮಿತಿ ಅಧ್ಯಕ್ಷ ಪೂರ್ಣೇಶ ಬಲ್ಯ, ಕಾರ್ಯದರ್ಶಿ ಜನಾರ್ದನ ಆರಿಗ, ತಾಲೂಕು ಮಹಿಳಾ ಸಂಘದ ವೀಣಾ ರಮೇಶ್, ಕಾರ್ಯದರ್ಶಿ ಲಾವಣ್ಯ ಹೇಮಂತ್, ಗೌರವಾಧ್ಯಕ್ಷೆ ನೀಲಾವತಿ ಶಿವರಾಮ,ಸಂಘಟನಾ ಕಾರ್ಯದರ್ಶಿ ಶಾರದಾ ಕೇಶವ್ ನಿರ್ದೇಶಕರಾದ ಹಿರಿಯಣ್ಣಗೌಡ ಅಮೈ, ಗೀತಾ ಕೇವಳ, ಸಭಾಂಗಣ ಮತ್ತು ವೇದಿಕೆ ಸಮಿತಿ ಸಂಚಾಲಕ ರಕ್ಷಿತ್ ಗೌಡ ಪುತ್ತಿಲ ಮೋನಪ್ಪ ಗೌಡ ನಾಡೋಳಿ, ದೇವಯ್ಯ ಪನ್ಯಾಡಿ, ರಂಜಿತ್ ಪದಕಂಡ, ಸಭಾಭವನದ ಆರ್ಕಿಟೆಕ್ಟ್ ಸುರೇಶ್ ಕುಮಾರ್ ಪಣೆಮಜಲು, ಮೆರವಣಿಗೆ ಸಮಿತಿ ಅಧ್ಯಕ್ಷ ಸೀತಾರಾಮ ಗೌಡ ಪೊಸವಳಿಕೆ, ಸ್ವಾತಂತ್ರ್ಯ ಹೋರಾಟಗಾರ ಕೆದಂಬಾಡಿ ರಾಮಯ್ಯ ಗೌಡ ಸ್ಮಾರಕ ಸ್ಥಾಪನ ಸಮಿತಿ ನಿರ್ದೇಶಕ ಕಿರಣ್ ಹೊಸಳಿಕೆ,ಮಹೇಶ್ ನಡುತೋಟ,ಸುನಿಲ್ ಕೇರ್ನಡ್ಕ ಮೊದಲಾದವರು ಉಪಸ್ಥಿತರಿದ್ದರು.

Related posts

ನ.3,4, 5 ರಂದು ಸುಳ್ಯ ಅನ್ಸಾರಿಯಾದಲ್ಲಿ’ಆರ್ಟ್ಸ್ ಎಲೈವ್’ ಕಾರ್ಯಕ್ರಮ ,ಹಲವು ಗಣ್ಯರ ಉಪಸ್ಥಿತಿ,ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳ ಆಯೋಜನೆ

ಕೊತ್ತಲಿಗೆ ಕ್ರಿಕೆಟ್‌ ಆಡುವ ತಂಡಗಳಿಗೆ ಸುವರ್ಣಾವಕಾಶ

ಬೆಳ್ತಂಗಡಿ: ಹೃದಯಾಘಾತಕ್ಕೆ ಪಿಯುಸಿ ವಿದ್ಯಾರ್ಥಿ ಬಲಿ