ಕರಾವಳಿಸುಳ್ಯ

ಕಡಬ: ಹಲವು ಸಲಕರಣೆ,ಸಾಮಗ್ರಿಗಳಿದ್ದ ಕಟ್ಟಡದಲ್ಲಿ ಕಾಣಿಸಿಕೊಂಡ ಬೆಂಕಿ,ಅಪಾರ ನಷ್ಟ

310

ನ್ಯೂಸ್ ನಾಟೌಟ್ : ಕಡಬದ ನೂಜಿಬಾಳ್ತಿಲ ಗ್ರಾಮದ ಬೆಥನಿ ಆಶ್ರಮದ ಪಕ್ಕದ ಹಳೆ ಕಟ್ಟಡದಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ  ಬೆಂಕಿ ಹತ್ತಿಕೊಂಡ ಘಟನೆ ವರದಿಯಾಗಿದೆ. ಇದರಿಂದಾಗಿ ಸಲಕರಣೆ, ಸಾಮಾಗ್ರಿಗಳು ಬೆಂಕಿಗಾಹುತಿಯಾಗಿದ ಘಟನೆ ಇಂದು ಮುಂಜಾನೆ ನಡೆದಿದೆ.

ಇಲ್ಲಿ ರಬ್ಬರ್ ಶೀಟ್, ತೆಂಗಿನಕಾಯಿ ಸೇರಿದಂತೆ ಸಲಕರಣೆ, ಸಾಮಾಗ್ರಿಗಳು ಇದ್ದಿದ್ದು,ಬೆಂಕಿಗಾಹುತಿಯಾಗಿದೆ.ಇಂದು ಮುಂಜಾನೆ ಈ ಘಟನೆ ಬೆಳಕಿಗೆ ಬಂದಿದೆ, ರಾತ್ರಿ ವೇಳೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದಲೇ ಬೆಂಕಿ ಹತ್ತಿಕೊಂಡಿರಬಹುದು ಎಂದು ಅಂದಾಜಿಸಲಾಗಿದೆ. ಸ್ಥಳಕ್ಕೆ ಮೆಸ್ಕಾಂ ಜೆ.ಇ. ವಸಂತ, ನೂಜಿಬಾಳ್ತಿಲ ಗ್ರಾಮ ಪಂಚಾಯತ್ ಅಧ್ಯಕ್ಷೆ ಗಂಗಮ್ಮ , ಪಿಡಿಒ ಗುರುವ, ಗ್ರಾಮ ಲೆಕ್ಕಾಧಿಕಾರಿ ಶಶಿಕಲಾ, ಪಂಚಾಯತ್ ಉಪಾಧ್ಯಕ್ಷ ಇಮ್ಯಾನುವೆಲ್ ಸದಸ್ಯರಾದ ಚಂದ್ರಶೇಖರ ಹಳೆನೂಜಿ ಭೇಟಿ ನೀಡಿದ್ದಾರೆ.ಮೆಸ್ಕಾಂ ಅಧಿಕಾರಿಗಳು ಈ ಬಗ್ಗೆ ಪ್ರತಿಕ್ರಿಯಿಸಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಘಟನೆ ಸಂಭವಿಸಿತೇ ಎಂಬುದನ್ನು ಪರಿಶೀಲಿಸುತ್ತೇವೆ ಎಂದಿದ್ದಾರೆ.

See also  ಕುಸಿಯುತ್ತಿದೆ ಮನೆಯ ಹಿಂದಿನ ಬರೆ, ಆತಂಕದಲ್ಲಿ ಮನೆ ಮಾಲೀಕರ ಜೀವನ
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget