ಕರಾವಳಿ

ಮಹಾವಿಷ್ಣು ಮೂರ್ತಿ ಒತ್ತೆಕೋಲಕ್ಕೆ ತರಕಾರಿ ಕೊಟ್ಟ ಮುಸ್ಲಿಂ ವ್ಯಾಪಾರಿ

689

ಕಲ್ಮಡ್ಕ: ಕೋಮು ಸಂಘರ್ಷ ಸೂಕ್ಷ್ಮ ಪ್ರದೇಶವಾದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಿಂದೂ-ಮುಸಲ್ಮಾನರ ನಡುವೆ ಸೌಹಾರ್ದದ ಸಂದೇಶವನ್ನು ಬಿತ್ತಿ ಇಲ್ಲೊಬ್ಬ ಮುಸ್ಲಿಂ ವ್ಯಾಪಾರಿ ಸುದ್ದಿಯಾಗಿದ್ದಾರೆ.

ಕರಾವಳಿಯ ಹಿಂದೂ ಧರ್ಮೀಯರ ಆರಾಧ್ಯ ದೈವಗಳಲ್ಲಿ ಒಂದಾಗಿರುವ ಶ್ರೀ ಮಹಾವಿಷ್ಣುಮೂರ್ತಿ ಒತ್ತೆಕೋಲಕ್ಕೆ ಮುಸ್ಲಿಂ ವ್ಯಾಪಾರಿ ತರಕಾರಿ ನೀಡಿ ಸೌಹಾರ್ದತೆ ಮೆರೆದಿದ್ದಾರೆ. ಹೌದು, ಈ ಅಪರೂಪದ ಘಟನೆ ಕಲ್ಮಡ್ಕದ ಕಾಚಿಲದಲ್ಲಿ ನಡೆದಿದೆ.

ಈ ಬಾರಿಯ ಒತ್ತೆಕೋಲಕ್ಕೆ ಅನ್ನಸಂತರ್ಪಣೆಗೆ ಅಗತ್ಯವಿದ್ದ ತರಕಾರಿಗಳನ್ನು ನಿಂತಿಕಲ್ಲಿನ ಅಡಿಕೆ ವ್ಯಾಪಾರಿ ಇಸ್ಮಾಯಿಲ್ ಪಡ್ಪಿನಂಗಡಿ ನೀಡಿದ್ದಾರೆ. ದೈವಸ್ಥಾನದ ಆಡಳಿತ ಮಂಡಳಿಯವರು ಇವರನ್ನು ಮೇಲೇರಿ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಆತ್ಮೀಯವಾಗಿ ಸನ್ಮಾನಿಸಿದರು.

See also  ನಂದಿನಿ ಹಾಲಿನ ದರ ಮತ್ತೆ ಹೆಚ್ಚಳ..? ಸಿಎಂ ಸಿದ್ದರಾಮಯ್ಯ ಘೋಷಣೆ..!
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget