ನ್ಯೂಸ್ ನಾಟೌಟ್: ಪುತ್ತೂರು ಸಮೀಪದ ಕಬಕದಿಂದ ಆಲ್ಟೋ ಕಾರಿನಲ್ಲಿ ಕಿಡ್ನ್ಯಾಪ್ ಆಗಿದೆ ಅನ್ನುವ ಕರೆ 112 ಗೆ ಬಂದ ಹಿನ್ನೆಲೆಯಲ್ಲಿ ಜಾಲ್ಸೂರು ಹಾಗೂ ಸುಳ್ಯದಲ್ಲಿ ಪೊಲೀಸರು ನಾಕಾ ಬಂದಿ ಹಾಕಿ ಕಾದಿರುವ ಘಟನೆ ಶನಿವಾರ ತಡರಾತ್ರಿ ನಡೆದಿದೆ.
ವ್ಯಕ್ತಿಯೊಬ್ಬನನ್ನು ಆಲ್ಟೋ ಕಾರಿನಲ್ಲಿ ಕಿಡ್ಯ್ನಾಪ್ ಮಾಡಲಾಗಿದೆ. ತಕ್ಷಣ ಬಚಾವ್ ಮಾಡಿ ಎಂಬ ಕರೆ ಬಂದಿದೆ. ತಕ್ಷಣ ಪೊಲೀಸರು ಫೀಲ್ಡ್ ಗೆ ಇಳಿದು ಕಾರ್ಯಾಚರಣೆ ನಡೆಸಿದ್ದಾರೆ. ಕರೆ ಮಾಡಿದವರು ಯಾರು ಅನ್ನುವುದರ ಬಗ್ಗೆ ಮಾಹಿತಿ ಸಿಕ್ಕಿಲ್ಲ. ಈ ನಿಟ್ಟಿನಲ್ಲಿ ತನಿಖೆ ನಡೆಯುತ್ತಿದೆ ಎನ್ನಲಾಗಿದೆ.