ಕ್ರೈಂವೈರಲ್ ನ್ಯೂಸ್

ಸ್ಟೈಲ್‌ ಆಗಿ ಡ್ರೆಸ್‌ ಮಾಡಿ ಬಂದ ಯುವತಿ ಕಬಾಬ್ ಕದ್ದು ಪರಾರಿ..! ಆಕೆ ಶಾಪಿಂಗ್ ಮಾಲ್ ನಲ್ಲಿ ಲಾಕ್ ಆದದ್ದೇಗೆ..?

187

ನ್ಯೂಸ್ ನಾಟೌಟ್ : ಹಣ, ಚಿನ್ನಾಭರಣ, ಬೆಳ್ಳಿ ಕಳ್ಳತನದ ಬಗ್ಗೆ ಕೇಳಿರುತ್ತೀರಾ. ಆದರೆ ಇಲ್ಲೊಬ್ಬಳು ಯುವತಿ ಕಬಾಬ್ ಕಳ್ಳತನ ಮಾಡಿ ಸಿಕ್ಕಿಬಿದ್ದಿದ್ದಾಳೆ.ಸ್ಟೈಲ್‌ ಆಗಿ ಡ್ರೆಸ್‌ ಮಾಡಿಕೊಂಡು ದುಬಾರಿ ಅಂಗಡಿಗಳನ್ನೇ ಹುಡುಕಿ ಶಾಪಿಂಗ್‌ ಮಾಡುತ್ತಿದ್ದ ಯುವತಿಯನ್ನು ಏಕಾಏಕಿ ಒಂದು ಅಂಗಡಿಯೊಳಗೆ ಒಬ್ಬ ವ್ಯಕ್ತಿ ಬಂದು ಲಾಕ್‌ ಮಾಡಿದ್ದಾನೆ. ಆಕೆ ಎಷ್ಟೇ ಕಿರುಚಾಡಿದರೂ ಕೂಗಾಡಿದರೂ ಸಹ ಬಾಗಿಲು ತೆರೆಯದೇ ಆಕೆ ಹಾಗೂ ಆಕೆ ಜೊತೆಗಿರುವವರನ್ನು ಒಳಗಡೆಯೇ ಲಾಕ್‌ ಮಾಡಿದ್ದಾನೆ. ಆಕೆಯ ವರ್ತನೆ ಹಾಗೂ ಆಕೆಯನ್ನು ಕೂಡಿ ಹಾಕಿರುವುದನ್ನು ಕಂಡು ಸ್ಥಳದಲ್ಲಿದ್ದವರು ಅಚ್ಚರಿಗೊಂಡಿದ್ದಾರೆ.

ಹಾಗೂ ನಡೆದ ಅಸಲಿ ಸಂಗತಿಯನ್ನು ವಿಚಾರಿಸಿದ್ದಾರೆ ಎನ್ನಲಾಗಿದೆ.ಅಷ್ಟು ಸ್ಟೈಲಿಶ್‌ ಆಗಿದ್ದ ಯುವತಿಯನ್ನು ಕೂಡಿ ಹಾಕಿರುವುದರ ಹಿಂದಿನ ವಿಚಾರ ತಿಳಿದು ಅಚ್ಚರಿಗೊಂಡರೂ ಸಹ ಕೆಲವರು ಜೋರಾಗಿ ನಕ್ಕು ಅಲ್ಲಿಂದ ಹೊರಟಿದ್ದಾರೆ. ಈ ಯುವತಿ ಮೂಲತಃ ಪಾಕ್ತಿಸ್ತಾನದವಳು ಎಂದು ಉಲ್ಲೇಖಿಸಲಾಗಿದೆ. ಪಾಕಿಸ್ತಾನದ ಈ ಯುವತಿ ಲಂಡನ್​​ನ ಶಾಪ್ ​ವೊಂದರಲ್ಲಿ ಚಿಕನ್ ಕಬಾಬ್​ ಕಳ್ಳತನ ಮಾಡಿ ಸಿಕ್ಕಿಹಾಕಿಕೊಂಡಿದ್ದಾಳೆ ಎನ್ನಲಾಗಿದೆ.ಲಂಡನ್​ನಲ್ಲಿನ ಅಂಗಡಿಯೊಂದರಲ್ಲಿ ಪಾಕಿಸ್ತನಾದ ಯುವತಿಯರು ವಸ್ತುಗಳನ್ನು ಖರೀದಿ ಮಾಡಲೆಂದು ಹೋಗಿದ್ದಾರೆ. ಈ ವೇಳೆ ಈ ಯುವತಿಯರ ಗುಂಪಿನಲ್ಲಿದ್ದ ಯುವತಿಯೊಬ್ಬಳು ಅಂಗಡಿಯಲ್ಲಿ ಚಿಕನ್ ಕಬಾಬ್​ ಕಳ್ಳತನ ಮಾಡಿದ್ದಾಳೆ.

ಇದನ್ನು ನೋಡಿದ ಅಲ್ಲಿನ ಸಿಬ್ಬಂದಿ ಕಬಾಬ್‌ ಅಷ್ಟೆ ಎಂದು ಸುಮ್ಮನಿದ್ದಾರೆ. ಆದರೆ ಆಕೆಯ ಚಲನವಲನಗಳ ಮೇಲೆ ನಿಗಾವಹಿಸಿದ್ದರು. ಈ ಅಂಗಡಿಯಲ್ಲಿ ಕಬಾಬ್ ಕದ್ದ ಬಳಿಕ ಅದೇ ಸಾಲಿನಲ್ಲಿರುವ ಇನ್ನೊಂದು ಅಂಗಡಿಗೆ ಯುವತಿ ಹೋಗಿದ್ದಾಳೆ. ಅಲ್ಲಿ ಕೂಡ ತನ್ನ ಕೈಚಳಕ ತೋರಿಸಲು ಮುಂದಾಗಿದ್ದಾಳೆ ಎನ್ನಲಾಗಿದೆ.ಇದನ್ನು ನೋಡಿದ ಅಲ್ಲಿನ ಸಿಬ್ಬಂದಿ ಹಾಗೂ ಕಬಾಬ್‌ ಶಾಪ್‌ ಸಿಬ್ಬಂದಿ ಹೊರಗಿನಿಂದ ಡೋರ್‌ ಲಾಕ್‌ ಮಾಡಿದ್ದಾರೆ. ಡೋರ್‌ ಲಾಕ್‌ ಆಗುತ್ತಿದ್ದಂತೆ ಸಿಟ್ಟಿಗೆದ್ದ ಯುವತಿ ಹಾಗೂ ಆಕೆಯ ಜೊತೆಗಿದ್ದವರು ಬಾಗಿಲನ್ನು ಏಳೆದಾಡಿದ್ದು, ಜೋರಾಗಿ ಕಿರುಚಾಡಿದ್ದಾರೆ. ಮುಂದೆ ಅವರನ್ನು ಹಿಡಿದು ವಿಚಾರಿಸಲಾಗಿದೆ ಎಂದು ವರದಿ ತಿಳಿಸಿದೆ.

See also  ಇಬ್ಬರು ಮಕ್ಕಳನ್ನು ಕೊಲೆಗೈದ ತಾಯಿ ರಾತ್ರೋರಾತ್ರಿ ಜೈಲಿನೊಳಗೆ ಆತ್ಮಹತ್ಯೆ..! ಆಕೆಯ ಪತಿಗೂ ಜೈಲುವಾಸ..!
  Ad Widget   Ad Widget   Ad Widget   Ad Widget   Ad Widget   Ad Widget   Ad Widget