ಕರಾವಳಿ

ಕೊರಗಜ್ಜನನ್ನು ಆರಾಧಿಸುತ್ತಿದ್ದ ಖಾಸಿಂ ಸಾಹೇಬ್ ನಿಧನ

261

ನ್ಯೂಸ್ ನಾಟೌಟ್ : ಕಳೆದ ಹಲವು ವರ್ಷಗಳಿಂದ ಕೊರಗಜ್ಜನ ಆರಾಧಕರಾಗಿ ಗುರುತಿಸಿಕೊಂಡಿದ್ದ ಖಾಸಿಂ ಸಾಹೇಬ್(66) ಅವರು ಹೃದಯಾಘಾತದಿಂದಾಗಿ ಇಂದು ಮುಂಜಾನೆ ನಿಧನರಾದರು ಎಂದು ತಿಳಿದು ಬಂದಿದೆ.

ಖಾಸಿಂ ಅವರು ಮೂಲತಃ ಕೇರಳದ ಪಾಲಕ್ಕಾಡ್ ಜಿಲ್ಲೆಯವರಾಗಿದ್ದು, ಸದ್ಯ ಮಂಗಳೂರು ಹೊರವಲಯದ ಮುಲ್ಕಿ ಬಳ್ಕುಂಜೆಯಲ್ಲಿ ನೆಲೆಸಿದ್ದರು. ಕಳೆದ 20 ವರ್ಷಗಳಿಂದ ಅವರು ಕೊರಗಜ್ಜನ ಆರಾಧನೆಯನ್ನು ಮಾಡುತ್ತಿದ್ದರು. ಮಾತ್ರವಲ್ಲ ಕೊರಗಜ್ಜನಿಗೆ ಗುಡಿ ಕಟ್ಟಿ ದೀಪವಿಟ್ಟು ಪೂಜೆಯನ್ನು ಮಾಡುತ್ತಿದ್ದರು.ಕರಾವಳಿಯಲ್ಲಿ ಕೊರಗಜ್ಜನನ್ನು ಆರಾಧಿಸುವ ಮುಸ್ಲಿಂ ವ್ಯಕ್ತಿಯೆಂದೇ ಪ್ರಸಿದ್ಧಿ ಪಡೆದಿದ್ದರು.ಈ ಬಗ್ಗೆ ಹಲವು ಲೇಖನಗಳು ವಿವಿಧ ಮಾಧ್ಯಮಗಳಲ್ಲಿ ಬಂದಿದ್ದವು.ಈ ಕುರಿತ ಸುದ್ದಿ ಸಾಕಷ್ಟು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಕೂಡ ಆಗಿತ್ತು. ಖಾಸಿಂ ಅವರು ಕೇರಳದಿಂದ 35 ವರ್ಷದ ಹಿಂದೆ ಬಳ್ಕುಂಜೆಗೆ ಬಂದಿದ್ದು, ಅಲ್ಲಿ ಗುಡಿ ಕಟ್ಟಿ ಪೂಜಿಸುತ್ತಿದ್ದರು.

See also  ವಿವಾಹಿತ ಮಹಿಳೆ ದಿಢೀರ್‌ ಅಸ್ವಸ್ಥ,ಹೃದಯಾಘಾತದಿಂದ ಮೃತ್ಯು
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget   Ad Widget