ಕರಾವಳಿ

ಕಾಣಿಯೂರು : ಅಪಪ್ರಚಾರಕ್ಕೆ ಮನನೊಂದು ಯುವತಿ ನೇಣು ಬಿಗಿದು ಆತ್ಮಹತ್ಯೆ: ಏನಿದು ಘಟನೆ?

ನ್ಯೂಸ್‌ ನಾಟೌಟ್‌:ಯುವತಿಯೋರ್ವಳು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಡಬ ತಾಲೂಕಿನ ಕಾಣಿಯೂರಿನಿಂದ ವರದಿಯಾಗಿದೆ.ಮಾ.03 ರಂದು ಈ ಘಟನೆ ನಡೆದಿದ್ದು,ಅನಿಲ ಮನೆ ದಿವ್ಯ (26) ಮೃತ ದುರ್ದೈವಿ ಎಂದು ತಿಳಿದು ಬಂದಿದೆ.

ಅಪಪ್ರಚಾರಕ್ಕೆ ಮನನೊಂದು ಯುವತಿ ತಮ್ಮ ಮನೆಯ ಅಡುಗೆ ಕೋಣೆಯಲ್ಲಿ ನೇಣು ಬಿಗಿದುಕೊಂಡಿದ್ದಾರೆ ಎಂದು ಮೇಲ್ನೋಟಕ್ಕೆ ತಿಳಿದು ಬಂದಿದೆ. ತಕ್ಷಣ ಗಮನಿಸಿದ ಮನೆಯವರು ಆಸ್ಪತ್ರೆಗೆ ದಾಖಲಿಸಿದರೂ ಯುವತಿ ಮೃತಪಟ್ಟರೆನ್ನಲಾಗಿದೆ. ಈ ಬಗ್ಗೆ ಯುವತಿಯ ತಂದೆ ಪದ್ಮಯ್ಯ ಗೌಡ ಅನಿಲ ಎಂಬವರು ಬೆಳ್ಳಾರೆ ಠಾಣೆಗೆ ಪೊಲೀಸ್ ದೂರು ನೀಡಿದ್ದು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ ಹಾಗೂ ತನಿಖೆ ಮುಂದುವರಿಸಿದ್ದಾರೆಂದು ತಿಳಿದು ಬಂದಿದೆ.

Related posts

ಗೋಳಿತ್ತೊಟ್ಟು:ಕುಡಿದು ಸರ್ಕಾರಿ ಬಸ್​ನಲ್ಲೇ ಬಿದ್ದ ಗ್ರಾಮಕರಣಿಕ..! ಕುಡುಕನನ್ನು ಕಂಡು ಬಸ್​ ಚಾಲಕ ಏನು ಮಾಡಿದ್ರು ಗೊತ್ತಾ?

‘ಅಜ್ಜಾವರದ ದಲಿತ ಕಾಲೋನಿಗೆ ಮಾನವೀಯತೆಯಿಂದ ನೀರು ಬಿಡಿ..ಜನಾಡಳಿತ ಇರುವುದೇ ಜನರ ಕಷ್ಟಕ್ಕೆ ಸ್ಪಂದಿಸುವುದಕ್ಕಲ್ಲವೇ..?

ಬಂಟ್ವಾಳ: ಉಳಿಯ ಕ್ಷೇತ್ರ ಬ್ರಹ್ಮಕಲಶೋತ್ಸವಕ್ಕೆ 50,000 ರೂ. ದೇಣಿಗೆ: ಹರಿಪ್ರಸಾದ್ ಶಕ್ತಿನಗರ