Uncategorized

ಸಹೋದರನಿಂದಲೇ ಮಹಿಳಾ ಪೇದೆಯ ಕೊಲೆ..! ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದ ಆಕೆಗೆ ಕಾರಿನಿಂದ ಡಿಕ್ಕಿ ಹೊಡೆದು ಹಲ್ಲೆ..!

ನ್ಯೂಸ್ ನಾಟೌಟ್: ಅಂತರ್ಜಾತಿ ವಿವಾಹವಾದ ಮಹಿಳಾ ಪೊಲೀಸ್ ಪೇದೆಯೊಬ್ಬರನ್ನು ಆಕೆಯ ಸಹೋದರನೇ ಬರ್ಬರವಾಗಿ ಹತ್ಯೆಗೈದಿದ್ದು, ಮರ್ಯಾದಾ ಹತ್ಯೆಯ ಶಂಕೆ ವ್ಯಕ್ತವಾಗಿದೆ. ಈ ಘಟನೆ ತೆಲಂಗಾಣದ ರಂಗಾ ರೆಡ್ಡಿ ಜಿಲ್ಲೆಯ ಇಬ್ರಾಹಿಂಪಟ್ಟಣಂ ಮಂಡಲದ ರಾಯಪೋಲ್ ಗ್ರಾಮದಲ್ಲಿ ನಡೆದಿದೆ.

2020ರ ಬ್ಯಾಚ್ ನ ಪೊಲೀಸ್ ಕಾನ್ಸ್ ಟೇಬಲ್ ಆಗಿರುವ ನಾಗಮಣಿ ಎಂಬವರು ರಂಗಾ ರೆಡ್ಡಿ ಜಿಲ್ಲೆಯ ಹಯಾತ್‌ ನಗರ ಪೊಲೀಸ್ ಠಾಣೆಯಲ್ಲಿ ಕೆಲಸ ಮಾಡುತ್ತಿದ್ದರು. ಬೇರೆ ಜಾತಿಯ ಶ್ರೀಕಾಂತ್ ಎಂಬಾತನನ್ನು ಪ್ರೀತಿಸುತ್ತಿದ್ದ ನಾಗಮಣಿ ಹದಿನೈದು ದಿನಗಳ ಹಿಂದೆ ವಿವಾಹವಾಗಿದ್ದರು. ಆದರೆ ಈ ಅಂತರ್ಜಾತಿ ವಿವಾಹಕ್ಕೆ ಆಕೆಯ ಕುಟುಂಬಸ್ಥರು ವಿರೋಧ ವ್ಯಕ್ತಪಡಿಸಿದ್ದರು.

ನಾಗಮಣಿ ರಾಯಪೋಲ್‌ ಎಂಬಲ್ಲಿಂದ ಮಣ್ಣೇಗೌಡ ಎಂಬಲ್ಲಿಗೆ ಸ್ಕೂಟರ್‌ ನಲ್ಲಿ ಹೋಗುತ್ತಿದ್ದಾಗ ಆಕೆಯ ಸಹೋದರ ಪರಮೇಶ್ ಆಕೆಯ ಸ್ಕೂಟರ್ ಗೆ ಕಾರಿನಿಂದ ಢಿಕ್ಕಿ ಹೊಡೆದಿದ್ದಾನೆ. ಈ ವೇಳೆ ಬಿದ್ದ ನಾಗಮಣಿ ಮೇಲೆ ಪರಮೇಶ್ ಮಾರಕಾಸ್ತ್ರದಿಂದ ಹಲ್ಲೆ ನಡೆಸಿದ್ದು, ಗಂಭೀರವಾಗಿ ಗಾಯಗೊಂಡ ನಾಗಮಣಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ವರದಿ ತಿಳಿಸಿದೆ.

ಘಟನೆ ಮರ್ಯಾದೆ ಹತ್ಯೆಯಂತೆ ಕಂಡು ಬರುತ್ತಿದೆ. ನಾಗಮಣಿ ಅಂತರ್ಜಾತಿ ಪ್ರೇಮ ವಿವಾಹವಾಗಿರುವುದರಿಂದ ಆಕೆಯ ಸಹೋದರ ಅಸಮಾಧಾನಗೊಂಡಿದ್ದ. ಈ ಕುರಿತು ಪ್ರಕರಣ ದಾಖಲಿಸಲಾಗಿದ್ದು, ಆರೋಪಿ ಪರಮೇಶ್ ಪತ್ತೆಗೆ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Click

https://newsnotout.com/2024/12/chandrashekar-swamiji-statement-fir-latter-to-inspector-kannada-news/
https://newsnotout.com/2024/12/shabarimale-kerala-temple-viral-news-kerala/
https://newsnotout.com/2024/12/siddaramayya-kannada-news-accident-ips-viral-news/
https://newsnotout.com/2024/12/bath-towel-kannada-news-video-viral-news-video/
https://newsnotout.com/2024/12/baloon-kannada-news-7th-student-nomore-13-year-old/
https://newsnotout.com/2024/12/kannada-news-russia-president-vladimir-putin-prepares-to-visit-india-in-2025/
https://newsnotout.com/2024/12/bjp-show-cause-notice-to-yathnal-kannada-news-vijayendra/
https://newsnotout.com/2024/12/hospital-bed-kannada-news-photo-viral-kannada-news-dec-3/

Related posts

ಕಾಂಟ್ಯಾಕ್ಟ್ ಲೆನ್ಸ್ ಗಳನ್ನು ಧರಿಸುವ ಪ್ರತಿಯೊಬ್ಬರು ತಿಳಿದುಕೊಳ್ಳಬೇಕಾದ ಸಂಗತಿ,ಇಲ್ಲವಾದಲ್ಲಿ ಈ ಗತಿ ನಿಮಗೂ ಆಗಬಹುದು,ಎಚ್ಚರ!

ಇಂದಿನ (ಜು.28) ಬಿಜೆಪಿ ಜನೋತ್ಸವ ಸಾಧನಾ ಸಮಾವೇಶ ರದ್ದು

ನಾಳೆ ಎಲ್ಲ ಖಾಸಗಿ ಶಾಲೆಗಳಿಗೆ ರಜೆ ಘೋಷಿಸಿದ ರುಪ್ಸಾ