ಕರಾವಳಿಸುಳ್ಯ

ಕೆ.ವಿ.ಜಿ. ಕಾನೂನು ಮಹಾವಿದ್ಯಾಲಯದಲ್ಲಿ ವಾರ್ಷಿಕ ಕ್ರೀಡೋತ್ಸವ

376

ನ್ಯೂಸ್ ನಾಟೌಟ್ : ಕೆ .ವಿ.ಜಿ ಕಾನೂನು ಮಹಾವಿದ್ಯಾಲಯದಲ್ಲಿ ಜ.19ರಂದು ವಾರ್ಷಿಕ ಕ್ರೀಡೋತ್ಸವವು ನಡೆಯಿತು.

ಕುಕ್ಕೆ ಶ್ರೀ ಸುಬ್ರಹ್ಮಣ್ಮೇಶ್ವರ ಪದವಿ ಕಾಲೇಜಿನ ವಿಶ್ರಾಂತ ದೈಹಿಕ ಶಿಕ್ಷಣ ನಿರ್ದೇಶಕ ಶ್ರೀ. ತುಕರಾಮ್ ಗೌಡ ಕ್ರೀಡೋತ್ಸವವನ್ನು ಉದ್ಘಾಟಿಸಿ, ಶಿಕ್ಷಣ ಮತ್ತು ಸಂಸ್ಕಾರ ವಿದ್ಯಾರ್ಥಿ ಜೀವನದಲ್ಲಿ ಬಹುಮುಖ್ಯ. ಮಾನಸಿಕ ಮತ್ತು ದೈಹಿಕ ಆರೋಗ್ಯಕ್ಕೆ ಕ್ರೀಡೆ ಮತ್ತು ಯೋಗಾಸನ ಪೂರಕ ಎಂದರು. ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಇದರ ಅಧ್ಯಕ್ಷರಾದ ಡಾ.ಕೆ.ವಿ. ಚಿದಾನಂದ ಇವರು ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ದೈನಂದಿನ ಜೀವನದಲ್ಲಿ ಮಾನಸಿಕ ಮತ್ತು ದೈಹಿಕ ಸಾಮರ್ಥ್ಯ ಬಹುಮುಖ್ಯ, ನಮ್ಮ ಗುರಿ ಸದಾ ಸಾಧನೆಯತ್ತ ಇರಬೇಕು ಆದಕ್ಕಾಗಿ ಕ್ರೀಡೆಗಳಲ್ಲಿ ಭಾಗವಹಿಸುವಿಕೆ ಅತೀ ಮುಖ್ಯ ಎಂದರು.

ವೇದಿಕೆಯಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಪ್ರೋ.ಉದಯಕೃಷ್ಣ. ಬಿ, ದೈಹಿಕ ಶಿಕ್ಷಣ ನಿರ್ದೇಶಕರುಗಳಾದ ಮಿಥನ್. ಎಸ್ ಮತ್ತು ಲೆಫ್ಟಿನೆಂಟ್ ಸೀತಾರಾಮ್. ಎಮ್. ಡಿ ಹಾಗೂ ಕಾಲೇಜಿನ ಕ್ರೀಡಾ ಸಂಯೋಜಕರಾದ ಲಕ್ಷ್ಮೀಕಾಂತ್. ಕೆ. ಎಲ್. ರವರು ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಅಂಜಲಿ ಮತ್ತು ಕವನ ಪ್ರಾರ್ಥಿಸಿದರು. ಪ್ರಾಂಶುಪಾಲರಾದ ಪ್ರೋ. ಉದಯಕೃಷ್ಣ.ಬಿ, ಸ್ವಾಗತಿಸಿ, ಉಪನ್ಯಾಸಕ ರಾಜೇಂದ್ರ ಪ್ರಸಾದ್. ಎ ವಂದಿಸಿದರು. ಉಪನ್ಯಾಸಕಿ ರಶ್ಮಿ. ಹೆಚ್ ಕಾರ್ಯಕ್ರಮ ನಿರೂಪಿಸಿದರು.

See also  ಸುಣ್ಣಮೂಲೆ: ಆರು ವರ್ಷದ ಬಾಲಕನಿಗೆ ಓಮ್ನಿ ಕಾರು ಡಿಕ್ಕಿ, ಗಂಭೀರ ಸ್ಥಿತಿಯಲ್ಲಿ ಬಾಲಕ ಆಸ್ಪತ್ರೆಗೆ ದಾಖಲು
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget