ಕೊಡಗುಕ್ರೀಡೆ/ಸಿನಿಮಾಜೀವನಶೈಲಿದಕ್ಷಿಣ ಕನ್ನಡಫ್ಯಾಷನ್

ಅಶ್ಲೀಲ ವಿಡಿಯೋ ವೈರಲ್ ಮಾಡಿದವರಿಗೆ ಸವಾಲೆಸೆದ ನಟಿ ಜ್ಯೋತಿ ರೈ, ಈ ವಿಡಿಯೋ ಕೂಡ ವೈರಲ್ ಮಾಡಿ ಎಂದು ಹೇಳಿದ್ಯಾಕೆ..?

99
Spread the love

ನ್ಯೂಸ್ ನಾಟೌಟ್: ಕಳೆದ ಕೆಲವು ದಿನಗಳಿಂದ ಕರ್ನಾಟಕ ಮೂಲದ ಜ್ಯೋತಿ ರೈ ಭಾರಿ ಸುದ್ದಿಯಲ್ಲಿದ್ದಾರೆ. ಕಿರುತೆರೆಯಲ್ಲಿ ಸಾಕಷ್ಟು ಹೆಸರು ಮಾಡಿರುವ ಅವರದ್ದು ಎನ್ನಲಾದ ಅಶ್ಲೀಲ ನಕಲಿ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಈ ಬಗ್ಗೆ ನಟಿ ತೀವ್ರ ಅಸಮಾಧಾನ ಹಾಕಿದ್ದರು. ವೈರಲ್ ಮಾಡಿದವರ ವಿರುದ್ಧ ಆಕ್ರೋಶ ಹೊರ ಹಾಕಿದ್ದರು.

ಈ ಪ್ರಕರಣದಿಂದ ಆಘಾತಕ್ಕೊಳಗಾದ ಅವರು ತೀವ್ರ ಬೇಸರದ ನಡುವೆಯೂ ಜನಪದ ಗಾಯಕರೊಬ್ಬರಿಗೆ ನೆರವಿನ ಹಸ್ತ ಚಾಚುವ ಮೂಲಕ ಮಾದರಿಯಾಗಿದ್ದಾರೆ. ತೆಲುಗಿನ ಜನಪ್ರಿಯ ಜನಪದ ಗಾಯಕ ಪದ್ಮಶ್ರೀ ಪ್ರಶಸ್ತಿ ವಿಜೇತ ಮೊಗಿಲಯ್ಯ (Darshanam Mogilaiah) ತೀವ್ರ ಬಡತನದಲ್ಲಿದ್ದು, ಜೀವನ ನಿರ್ವಹಣೆಗಾಗಿ ಗಾರೆ ಕೆಲಸ ಮಾಡುತ್ತಿದ್ದರು. ಅವರು ಗಾರೆ ಕೆಲಸ ಮಾಡುತ್ತಿರುವ ಚಿತ್ರಗಳು, ವಿಡಿಯೊ ವೈರಲ್ ಆಗಿತ್ತು. ಹೀಗಾಗಿ ತನ್ನ ನೋವನ್ನು ನುಂಗಿ ಜ್ಯೋತಿ ರೈ ಅವರು ಈ ಹಿರಿಯ ಕಲಾವಿದರ ನೆರವಿಗೆ ಧಾವಿಸಿದ್ದಾರೆ. ಅಕ್ಷಯ ತೃತೀಯ ದಿನದಂದೇ ೫೦ ಸಾವಿರ ರೂ. ನಗದು ನೀಡಿ ನೆರವಾಗಿದ್ದಾರೆ. ಈ ಬಳಿಕ ಮಾತನಾಡಿದ ಜ್ಯೋತಿ ರೈ, ‘ಈ ವಿಡಿಯೊ (ಮೊಗಿಲಯ್ಯ ಅವರಿಗೆ ಆರ್ಥಿಕ ನೆರವು ನೀಡುತ್ತಿರುವ ವಿಡಿಯೊ)ವನ್ನು ವೈರಲ್ ಮಾಡುವ ತಾಕತ್ತು ನಿಮ್ಮಲ್ಲಿ ಇದೆಯಾ? ಇದು ನಿಜವಾದುದು. ಈ ಕೆಳಗಿನ ಸಾಲುಗಳು ಕೆಲಸ ಇಲ್ಲದವರಿಗೆ, ಬುದ್ಧಿ ಇಲ್ಲದವರಿಗಾಗಿ. ಜಗತ್ತು ನನ್ನೆಡೆಗೆ ಅಂಧಕಾರವನ್ನು ದೂಡಿದಾಗ ನನ್ನೊಳಗಿನ ನಾನು ಇನ್ನಷ್ಟು ಪ್ರಕಾಶಮಾನವಾಗಿ ಹೊಳೆಯುತ್ತೇನೆ. ನನ್ನೊಳಗಿನ ಬೆಳಕು ಉರಿಯಲು ಇಂತಹ ಕತ್ತಲೇ ಇಂಧನ. ನಿರಾಶಾವಾದದ ಬೂದಿಯಿಂದ ಸಾಧ್ಯತೆಯ ಫೀನಿಕ್ಸ್ ಏಳುತ್ತದೆ. ನಕಾರಾತ್ಮಕ ಶಕ್ತಿಯು ಮೆಟ್ಟಿಲು, ನಾನು ಅದರ ಮೇಲೆ ಹತ್ತಿ ಸಕಾರಾತ್ಮಕತೆಯ ದಿಗಂತದ ಕಡೆಗೆ ಸಾಗುತ್ತೇನೆʼʼ ಎಂದು ಜ್ಯೋತಿ ರೈ ಬರೆದುಕೊಂಡಿದ್ದಾರೆ. ಸದ್ಯ ಅವರ ಈ ಪೋಸ್ಟ್‌ ವೈರಲ್ ಆಗಿದೆ.

See also  ತಿರುಪತಿ ತಿರುಮಲ ದೇವಸ್ಥಾನಕ್ಕೆ ಐಪಿಎಲ್ ಟ್ರೋಫಿ ಕೊಂಡೊಯ್ದ ಸಿಎಸ್‌ ಕೆ! ಸಿಎಸ್ ಕೆ ಗೆಲುವಿನ ಹಿಂದಿದೆಯಾ ದೇವರ ಆಟ!
  Ad Widget   Ad Widget   Ad Widget   Ad Widget   Ad Widget   Ad Widget