ಕರಾವಳಿ

ಪರಿಹಾರ ಸೂಚಿಸಿ ಅಂದ್ರೆ ಸೆಕ್ಸ್ ಮಾಡಿ ಎಂದ ಜ್ಯೋತಿಷಿ

ನ್ಯೂಸ್ ನಾಟೌಟ್ : ಕೆಲವು ಜ್ಯೋತಿಷಿಗಳು ಜನರನ್ನು ಯಾಮಾರಿಸಿ ದುಡ್ಡು ಮಾಡುವ ಕಪಟ ತಂತ್ರಕ್ಕೆ ಮೊರೆ ಹೋಗಿದ್ದಾರೆ. ಇನ್ನು ಕೆಲವರು ಅದಕ್ಕಿಂತಲೂ ನೀಚ ಕೆಲಸ ಮಾಡಿ ಸುದ್ದಿಯಾಗುತ್ತಿದ್ದಾರೆ. ಇಲ್ಲೊಬ್ಬ ಜ್ಯೋತಿಷಿ ಅದೆಲ್ಲವನ್ನು ಮೀರಿ ವೈರಲ್ ಆಗಿದ್ದಾನೆ.

ರಾಜಸ್ಥಾನದ ಉದಯಪುರದಲ್ಲಿ ಪರಿಹಾರಕ್ಕೆ ಬಂದ ಜೋಡಿಗೆ ತನ್ನೆದುರೇ ಲೈಂಗಿಕ ಕ್ರಿಯೆ ನಡೆಸಲು ಪೂಜಾರಿಯೊಬ್ಬನು ಒತ್ತಾಯಿಸಿದ್ದಾನೆ. ಇವರು ಲೈಂಗಿಕ ಕ್ರಿಯೆ ನಡೆಸುತ್ತಿದ್ದಾಗ ಈ ಜ್ಯೋತಿಷಿ ಗುಪ್ತಾಂಗಕ್ಕೆ ಪಾಸ್ಟ್ ಗಂ ಸುರಿದಿದ್ದಾನೆ. ಇದರಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದಾಗ ಹಲ್ಲೆ ನಡೆಸಿ ಅವರನ್ನು ಕೊಂದಿದ್ದಾನೆ ಎಂದು ತಿಳಿದು ಬಂದಿದೆ. ಮೃತರನ್ನು ರಾಹುಲ್ ಮೀನಾ(೩೦ವ) ಮತ್ತು ಸೋನು ಕುನ್ವಾರ್(೨೮) ಎಂದು ತಿಳಿದು ಬಂದಿದೆ. ಇತ್ತೀಚಿನ ದಿನಗಳಲ್ಲಿ ರಾಹುಲ್ ಮತ್ತು ಸೋನು ನಡುವೆ ಕೌಟುಂಬಿಕ ಕಲಹಗಳು ನಡೆಯತ್ತಿತ್ತು. ಈ ವೇಳೆ ಆಕೆ ಭಲೇಶ್ (೫೫) ಹೆಸರಿನ ಜ್ಯೋತಿಷಿ ಸಹಾಯವನ್ನು ಪಡೆದಿದ್ದಾರೆ. ಭಲೇಶನು ಕಳೆ ೮ ವ‍ರ್ಷಗಳಿಂದ ರಾಜಸ್ತಾನದಲ್ಲಿ ವಾಸವಿದ್ದ. ಜನರಿಗೆ ತಾಯತ ತಯಾರಿಸುತ್ತಿದ್ದ. ಈ ವೇಳೆ ಇವರಿಬ್ಬರು ಪೂಜಾರಿಯ ಆಶ್ರಯ ಪಡೆದಿದ್ದಾರೆ. ಪೂಜೆಯ ವೇಳೆ ನೀವು ನನ್ನ ಎದುರು ಲೈಂಗಿಕ ಕ್ರಿಯೆ ಮಾಡಿದರೆ ನಮ್ಮ ಎಲ್ಲಾ ದೋಷಗಳು ಪರಿಹಾರವಾಗುತ್ತದೆ ಎಂದು ಒತ್ತಾಯ ಮಾಡಿದ್ದಾನೆ ಎಂದು ತಿಳಿದು ಬಂದಿದೆ.

Related posts

ಮಂಗಳೂರು: ಪ್ಲಾಸ್ಟಿಕ್ ಡಬ್ಬಿ ನುಂಗಿ ವಿಲವಿಲ ಒದ್ದಾಡಿದ ನಾಗಪ್ಪ..! ಸಮಯಕ್ಕೆ ಸರಿಯಾಗಿ ಬಂದು ಜೀವ ಉಳಿಸಿದ ವೈದ್ಯ ..!

ಹಿಜಾಬ್ ನಿಷೇಧ ವಾಪಸ್ ಪಡೆದ್ರೆ ಶಾಲಾ-ಕಾಲೇಜುಗಳನ್ನು ಕೇಸರಿಮಯ ಮಾಡ್ತೇವೆ ಎಂದ ಶರಣ್ ಪಂಪವೆಲ್! ವಿಶ್ವ ಹಿಂದೂ ಪರಿಷತ್ ಈ ಬಗ್ಗೆ ನೀಡಿದ ಎಚ್ಚರಿಕೆಗಳೇನು?

ಸುಳ್ಯ ತಾಲೂಕಿನ ಶಾಲಾ-ಕಾಲೇಜು-ಅಂಗನವಾಡಿಗಳಿಗೆ ಇಂದು ರಜೆ