ವೈರಲ್ ನ್ಯೂಸ್ಸಿನಿಮಾ

‘ಬಿಗ್ ಬಾಸ್‌’ ವಿನ್ನರ್ ಶೈನ್ ಶೆಟ್ಟಿ ಮತ್ತು ‘ನಮ್ಮನೆ ಯುವರಾಣಿ’ ನಟಿ ಅಂಕಿತಾ ‘ಜಸ್ಟ್ ಮ್ಯಾರೀಡ್’ ಏನಿದು ಶುಭ ಸುದ್ದಿ..?

228

ನ್ಯೂಸ್ ನಾಟೌಟ್: ‘ಬಿಗ್ ಬಾಸ್‌’ ವಿನ್ನರ್ ಶೈನ್ ಶೆಟ್ಟಿ ಮತ್ತು ‘ನಮ್ಮನೆ ಯುವರಾಣಿ’ ಧಾರಾವಾಹಿಯ ಅಂಕಿತಾ ಅಮರ್ ಹಲವು ಸಮಯಗಳಿಂದ ಎಲ್ಲೂ ಕಾಣಿಸಿಕೊಂಡಿದಲ್ಲ. ಇದಕ್ಕೆ ಒಂದೇ ಉತ್ತರ ‘ಜಸ್ಟ್ ಮಾರೀಡ್’, ಹೌದು, ಶೈನ್ ಶೆಟ್ಟಿ ಮತ್ತು ಅಂಕಿತಾ ಅಮರ್ ಒಟ್ಟಿಗೆ ‘ಜಸ್ಟ್ ಮಾರೀಡ್’ ಅನ್ನೋ ಸಿನಿಮಾದಲ್ಲಿ ನಟಿಸಿದ್ದಾರೆ.

ಸದ್ದಿಲ್ಲದೇ, ಈ ಸಿನಿಮಾದ ಚಿತ್ರೀಕರಣ ಮುಕ್ತಾಯವಾಗಿದೆ ಎಂದು ಸಿನಿಮಾ ತಂಡ ತಿಳಿಸಿದೆ. ಬೆಂಗಳೂರು, ಮೈಸೂರು ಮತ್ತು ಚಿಕ್ಕಮಗಳೂರಿನಲ್ಲಿ ಸುಮಾರು ನಲವತ್ತೈದು ದಿನಗಳಲ್ಲಿ ಜಸ್ಟ್‌ ಮ್ಯಾರೀಡ್‌ ಸಿನಿಮಾದ ಚಿತ್ರೀಕರಣ ಮಾಡಲಾಗಿದೆ. ಈಗ ಚಿತ್ರೀಕರಣ ನಂತರದ ಕೆಲಸಗಳು ಬಿರುಸಿನಿಂದ ಸಾಗಿದೆ. ವಿಶೇಷ ಏನೆಂದರೆ ಸಾಕಷ್ಟು ಚಿತ್ರಗಳಿಗೆ ಸಂಗೀತ ನೀಡಿ ಮನಸೂರೆಗೊಂಡಿರುವ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಈ ಚಿತ್ರದ ಮೂಲಕ ನಿರ್ಮಾಪಕರಾಗಿದ್ದಾರೆ. ಕಳೆದ ಗಣೇಶ ಚತುರ್ಥಿ ದಿವಸ ಪ್ರಯುಕ್ತ ಅಧಿಕೃತವಾಗಿ ಈ ಸಿನಿಮಾವನ್ನು ಘೋಷಣೆ ಮಾಡಲಾಗಿತ್ತು. ಇದೀಗ ಶೂಟಿಂಗ್ ಮುಕ್ತಾಯಗೊಂಡಿದೆ. ಅಜನೀಶ್ ಲೋಕನಾಥ್ ಅವರು ಕನ್ನಡ ಚಿತ್ರರಂಗಕ್ಕೆ 2003ರಲ್ಲಿ ಕಾಲಿಟ್ಟರು.

ಸ್ಯಾಂಡಲ್‌ವುಡ್‌ನಲ್ಲಿ ಅವರಿಗೆ ಈಗ 21 ವರ್ಷಗಳ ಅನುಭವ ಇದೆ. ಹಾಗಾಗಿ, ಈಗಲಾದರೂ ಏನಾದರೂ ಹೊಸದು ಮಾಡಬೇಕು ಎಂಬ ಆಲೋಚನೆಯಿಂದ ಸಿನಿಮಾ ನಿರ್ಮಾಣಕ್ಕೆ ಇಳಿದಿದ್ದಾರೆ. ಇನ್ನು, ನಿರ್ದೇಶಕಿ ಸಿ ಆರ್ ಬಾಬಿ ಅವರ ಬಳಿ ಒಟ್ಟು ಐದು ಕಥೆಗಳು ರೆಡಿ ಇದ್ದವಂತೆ. ಕೊನೆಗೆ ಎಲ್ಲ ಚರ್ಚೆ ಮುಗಿದ ನಂತರ ‘ಜಸ್ಟ್ ಮ್ಯಾರೀಡ್’ ಕಥೆಯನ್ನು ಓಕೆ ಮಾಡಿ, ಅದನ್ನೇ ಈಗ ಸಿನಿಮಾ ಮಾಡಿದ್ದಾರೆ. ಈ ಸಿನಿಮಾದ ಹಾಡುಗಳಿಗೆ ಅಜನೀಶ್ ಲೋಕನಾಥ್ ಅವರೇ ಸಂಗೀತ ನೀಡಿದ್ದು, ಚಿತ್ರದಲ್ಲಿ ಒಟ್ಟು ಆರು ಹಾಡುಗಳಿವೆ. ರಘು ನಿಡುವಳ್ಳಿ ಸಂಭಾಷಣೆ ಈ ಸಿನಿಮಾಕ್ಕಿದೆ. ಈ ಚಿತ್ರದ ಸಂಭಾಷಣೆಕಾರರು. ಶೈನ್ ಶೆಟ್ಟಿ, ಅಂಕಿತಾ ಅಮರ್ ಜೊತೆಗೆ ದೇವರಾಜ್, ಅಚ್ಯುತ್ ಕುಮಾರ್, ಮಾಳವಿಕಾ ಅವಿನಾಶ್, ಅನೂಪ್ ಭಂಡಾರಿ, ಶ್ರುತಿ ಹರಿಹರನ್, ಶ್ರುತಿ ಕೃಷ್ಣ, ಸಾಕ್ಷಿ ಅಗರ್ವಾಲ್, ಶ್ರೀಮಾನ್, ರವಿಶಂಕರ್ ಗೌಡ, ರವಿ ಭಟ್, ವಾಣಿ ಹರಿಕೃಷ್ಣ, ಸಂಗೀತ ಅನಿಲ್, ಕುಮುದಾ, ಜಯರಾಮ್, ವೇದಿಕಾ ಕಾರ್ಕಳ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ.

See also  ಆಸ್ಪತ್ರೆ ಸೇರಿದ್ದ 21 ವಿದ್ಯಾರ್ಥಿನಿಯರಲ್ಲಿ ಇಬ್ಬರಿಗೆ ಕಾಲರಾ..! ಹಾಸ್ಟೆಲ್ ಖಾಲಿ ಮಾಡಿ ಹೊರಟ ಮೆಡಿಕಲ್ ವಿದ್ಯಾರ್ಥಿನಿಯರು
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget