Latestಕರಾವಳಿರಾಜ್ಯವೈರಲ್ ನ್ಯೂಸ್

ಜೂ.8ರಿಂದ ರಾಜ್ಯದಲ್ಲಿ ಮತ್ತೆ ಮಳೆ..! 11 ಜಿಲ್ಲೆಗಳಿಗೆ ಎಚ್ಚರಿಕೆ ನೀಡಿದ ಹವಾಮಾನ ಇಲಾಖೆ..!

3.6k

ನ್ಯೂಸ್ ನಾಟೌಟ್: ಬೆಂಗಳೂರು ಸೇರಿದಂತೆ ಬಹುತೇಕ ಜಿಲ್ಲೆಗಳಲ್ಲಿ ಕೊಂಚ ವಿರಾಮವಾಗಿದ್ದ ಮುಂಗಾರು ಮಳೆ ನಾಳೆ ಜೂನ್ 8ರಿಂದ ಮತ್ತೆ ಶುರುವಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಈ ಬಾರಿ ದಕ್ಷಿಣ ಕನ್ನಡ, ಉಡುಪಿಗೆ ಬದಲಾಗಿ ಉತ್ತರ ಕರ್ನಾಟಕದ 11 ಜಿಲ್ಲೆಗಳಿಗೆ ಯೆಲ್ಲೊ ಅಲರ್ಟ್ ಘೋಷಿಸಲಾಗಿದೆ. ಕೃಷ್ಣಾ ನದಿ ತೀರದ ಜನರಿಗೆ ಪ್ರವಾಹದ ಎಚ್ಚರಿಕೆ ನೀಡಲಾಗಿದೆ, ಜಲಾಶಯದಿಂದ ನೀರು ಬಿಡುಗಡೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ದಾವಣಗೆರೆಯಲ್ಲಿ ಮಳೆ ಬಿಡುವು ನೀಡಿದ್ದು, ಬಿತ್ತನೆ ಕಾರ್ಯ ಚುರುಕುಗೊಂಡಿದೆ.

ಬೆಳಗಾವಿ, ಧಾರವಾಡ, ಹಾವೇರಿ, ಗದಗ, ಕೊಪ್ಪಳ, ಬಾಗಲಕೋಟೆ, ವಿಜಯಪುರ, ರಾಯಚೂರು, ಯಾದಗಿರಿ, ಕಲಬುರ್ಗಿ, ಬೀದರ್ ಜಿಲ್ಲೆಗಳಿಗೆ ಭಾರಿ ಮಳೆಯಾಗಲಿದ್ದು, ಇಂದಿನಿಂದ(ಜೂ.7) ಯೆಲ್ಲೋ ಅಲರ್ಟ್ ನೀಡಲಾಗಿದೆ. ಜೂನ್ 9 ರವರೆಗೆ ರಾಜ್ಯಾದ್ಯಂತ ಅತಿ ಸಾಧಾರಣ ಮಳೆಯಾಗಲಿದ್ದು, ಜೂ. 10 ರಿಂದ 12ರವರೆಗೆ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. 

ಕೊಳದಲ್ಲಿ ಬಿದ್ದ ಚಿಂಕಾರ ಪ್ರಾಣಿಯನ್ನು ರಕ್ಷಿಸಿದ ಆನೆ..! ವಿಡಿಯೋ ವೈರಲ್

ಕೇವಲ 180 ಮೀಟರ್​ ದೂರಕ್ಕೆ ಓಲಾ ಬೈಕ್​ ಬುಕ್​ ಮಾಡಿದ ಯುವತಿ..! ಇದಕ್ಕೆ ಆಕೆ ನೀಡಿದ ಕಾರಣವೇನು..?

See also  ಕುಕ್ಕುಜಡ್ಕ: ಮಾನಸಿಕ ಖಿನ್ನತೆಗೊಳಗಾಗಿ ಎರಡು ದಿನಗಳಿಂದ ತಿರುಗಾಡುತ್ತಿದ್ದ ಅಪರಿಚಿತ ವ್ಯಕ್ತಿ..! ಊಟ ಕೊಟ್ಟು, ಮನೆಗೆ ತಲುಪಿಸಿ ಮಾನವೀಯತೆ ಮೆರೆದ ಆಟೋ ರಿಕ್ಷಾ ಚಾಲಕರು
  Ad Widget   Ad Widget   Ad Widget     Ad Widget   Ad Widget   Ad Widget Ad Widget     Ad Widget   Ad Widget   Ad Widget