ಕರಾವಳಿ

ಜೂನ್‌ 12ರಂದು HSRP ನಂಬರ್ ಪ್ಲೇಟ್ ಅಳವಡಿಕೆಗೆ ಅಂತಿಮ ದಿನ, ಅಳವಡಿಕೆ ಮಾಡದ ವಾಹನ ಸವಾರರಿಗೆ ಬೀಳಲಿದೆ ಭಾರಿ ದಂಡ

ನ್ಯೂಸ್ ನಾಟೌಟ್: ಇದೀಗ ಎಲ್ಲ ಕಡೆಯೂ ಅತೀ ಸುರಕ್ಷಾ ನೋಂದಣಿ ಫ‌ಲಕ (ಎಚ್‌ಎಸ್‌ಆರ್‌ಪಿ) ಅಳವಡಿಕೆ ಪ್ರಕ್ರಿಯೆ ನಡೆಯುತ್ತಿದೆ. ಕೆಲವರು ವಾಹನಗಳಿಗೆ ಎಚ್ ಎಸ್ ಆರ್ ಪಿ ನೋಂದಣಿ ಫಲಕ ಅಳವಡಿಕೆ ಮಾಡಿಕೊಂಡಿದ್ದರೂ ಅಲ್ಲಿಯೂ ಸಮಸ್ಯೆ ಎದುರಾಗಿದೆ ಅನ್ನುವಂತಹ ದೂರುಗಳು ಕೇಳಿ ಬಂದಿವೆ.

ಸರಕಾರವು ಖಾಸಗಿ ಸಂಸ್ಥೆಗಳಿಗೆ ನಂಬರ್‌ಪ್ಲೇಟ್‌ ಮಾಡುವ ಹೊಣೆಗಾರಿಕೆ ನೀಡಿದ್ದು, ಕೆಲವು ಗ್ರಾಹಕರು ನೀಡಿದ ದಾಖಲೆ ಸಮರ್ಪಕವಾಗಿದ್ದರೂ ನಂಬರ್‌ ಪ್ಲೇಟ್‌ ಅದಲು ಬದಲಾಗಿ ಬಂದಿದೆ. ಕೆಲವರು ಅದನ್ನು ಸರಿಪಡಿಸಿದರೂ ಇನ್ನು ಕೆಲವು ಪ್ರಕ್ರಿಯೆ ಹಂತದಲ್ಲಿಯೇ ಬಾಕಿ ಉಳಿದಿವೆ. ಜೂನ್‌ 12ರಂದು ನಂಬರ್ ಪ್ಲೇಟ್ ಅಳವಡಿಕೆಗೆ ಅಂತಿಮ ದಿನವಾಗಿದೆ. ಬಳಿಕ ದಂಡ ವಿಧಿಸಲು ಸಾರಿಗೆ ಇಲಾಖೆ ಚಿಂತನೆ ನಡೆಸುತ್ತಿದೆ.

ಅತೀ ಸುರಕ್ಷಾ ನೋಂದಣಿ ಫ‌ಲಕ (ಎಚ್‌ಎಸ್‌ಆರ್‌ಪಿ) ಯಲ್ಲಿ ವಾಹನದ ಎಲ್ಲ ಮಾಹಿತಿಗಳೂ ಇರುತ್ತದೆ. ವಾಹನ ಕಳವಾದರೆ ಸುಲಭದಲ್ಲಿ ಹುಡುಕಬಹುದು. ಕಳ್ಳತನವಾಗುವ ವಾಹನಗಳು ಅಪರಾಧ ಕೃತ್ಯಗಳಲ್ಲಿ ಬಳಕೆಯಾಗುವುದನ್ನು ತಡೆಗಟ್ಟಲು ಸಾಧ್ಯವಿದೆ. ನಂಬರ್‌ ಪ್ಲೇಟ್‌ಗಳನ್ನು ಅನಧಿಕೃತವಾಗಿ ಬದಲಾಯಿಸುವುದು ಅಸಾಧ್ಯ. ಮಾಹಿತಿಯನ್ನು ತಿದ್ದಲೂ ಸಾಧ್ಯವಿಲ್ಲ.

Related posts

Air India: 60 ವರ್ಷಗಳ ಇತಿಹಾಸವಿರುವ ಭಾರತೀಯ ಸಾಂಪ್ರದಾಯಿಕ ಉಡುಪು ಸೀರೆಗೆ ಕೊಕ್ ಕೊಟ್ಟ ಏರ್‌ ಇಂಡಿಯಾ..! ಸೀರೆ ಬೇಡವೆಂದು ಹೇಳಿದ್ಯಾಕೆ ಸಂಸ್ಥೆ..?

ಕೆವಿಜಿ ಮಾತೃಸಂಸ್ಥೆ NMCಯಲ್ಲಿ ಡಾ. ಕೆವಿಜಿ ಜನ್ಮ ದಿನಾಚರಣೆ ಹಾಗೂ ಪುಷ್ಪ ನಮನ ಕಾರ್ಯಕ್ರಮ

ಅಪಘಾತದಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ಯುವವಾಗ್ಮಿ ಶ್ರೀದೇವಿ ಆರೋಗ್ಯ ವಿಚಾರಿಸಿದ ಅರುಣ್ ಪುತ್ತಿಲ