Latestಕ್ರೈಂಬೆಂಗಳೂರು

20ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡ 15ರ ಬಾಲಕಿ..!

3.3k

ನ್ಯೂಸ್‌ ನಾಟೌಟ್: ಪರೀಕ್ಷೆಗೆ ಓದಿಕೊಳ್ಳುವಂತೆ ತಾಯಿ ಗದರಿಸಿದ್ದಕ್ಕೆ 20ನೇ ಮಹಡಿಯಿಂದ ಜಿಗಿದು ಬಾಲಕಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಕಾಡುಗೋಡಿಯ ಅಪಾರ್ಟ್ಮೆಂಟ್‌ ನಲ್ಲಿ ನಡೆದಿದೆ.

ಈ ಕುರಿತು ಪೊಲೀಸರು ಮಾಹಿತಿ ನೀಡಿದ್ದು, ಮೃತ ಬಾಲಕಿಯನ್ನು ಅವಂತಿಕಾ ಚೌರಾಸಿಯಾ (15) ಎಂದು ಗುರುತಿಸಲಾಗಿದೆ.

ಕಾಡುಗೋಡಿಯ ಅಪಾರ್ಟ್ಮೆಂಟ್‌ನಲ್ಲಿದ್ದ ಬಾಲಕಿ ಎಸ್‌ಎಸ್‌ಎಲ್‌ಸಿ ಓದುತ್ತಿದ್ದಳು. ಎಸ್‌ಎಸ್‌ಎಲ್‌ಸಿಯ ಪರೀಕ್ಷೆ ಹತ್ತಿರ ಬರುತ್ತಿದ್ದ ಕಾರಣ ಓದುವಂತೆ ತಾಯಿ ಗದರಿಸಿದ್ದಾರೆ. ಇದರಿಂದ ಕೋಪಗೊಂಡ ಬಾಲಕಿ ವಾಸಿಸುತ್ತಿದ್ದ ಅಪಾರ್ಟ್ಮೆಂಟ್‌ನ 20ನೇ ಮಹಡಿ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಸ್ಥಳಕ್ಕೆ ಕಾಡುಗೋಡಿ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

See also  ಆ ರಾಜಕಾರಣಿ ಮದುವೆ ಆಗೋದಾಗಿ ನಂಬಿಸಿ ಮೋಸ ಮಾಡಿದ್ದಾನೆ ಏಂದು ಆರೋಪಿಸಿದ್ದು ಯಾರಿಗೆ? 'ನಾಗಮಂಡಲ' ಖ್ಯಾತಿಯ ನಟಿ ಬಿಚ್ಚಿಟ್ಟ ರಹಸ್ಯವೇನು?
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget