ಕ್ರೈಂಬೆಂಗಳೂರುವೈರಲ್ ನ್ಯೂಸ್

ಪರಿಚಯ ಮಾಡಿಕೊಂಡು ಜ್ಯೂಸ್‌ ಕುಡಿಸಿ ಪ್ರಯಾಣಿಕರಿಂದ ಚಿನ್ನಾಭರಣ ದೋಚುತ್ತಿದ್ದ ಕಳ್ಳಿ..! ಪೊಲೀಸರು ಬಂಧಿಸಿದ ತಕ್ಷಣ ವಿಷಪೂರಿತ ಚಾಕೊಲೆಟ್‌ ಸೇವಿಸಿದ ಮಹಿಳೆ..!

ನ್ಯೂಸ್ ನಾಟೌಟ್: ಒಂಟಿ ಪ್ರಯಾಣಿಕರನ್ನೇ ಟಾರ್ಗೆಟ್‌ ಮಾಡಿ, ಜ್ಯೂಸ್‌ ಕುಡಿಸಿ ಮೊಬೈಲ್‌, ಪರ್ಸ್‌, ಚಿನ್ನಾಭರಣ ದೋಚುತ್ತಿದ್ದ ಕಳ್ಳಿಯೊಬ್ಬಳನ್ನು ಬ್ಯಾಟರಾಯನಪುರ ಪೊಲೀಸರು ಬಂಧಿಸಿದ್ದಾರೆ.

ಆಂಧ್ರಪ್ರದೇಶ ಮೂಲದ ಲತಾ ಬಂಧಿತ ಮಹಿಳೆ ಎಂದು ಗುರುತಿಸಲಾಗಿದೆ. ಬಿಎಂಟಿಸಿ ಬಸ್‌ನಲ್ಲಿ ಒಂಟಿ ಪ್ರಯಾಣಿಕರನ್ನೇ ಟಾರ್ಗೆಟ್‌ ಮಾಡಿ, ಪರಿಚಯ ಮಾಡಿಕೊಂಡು ಜ್ಯೂಸ್‌ ಕುಡಿಯಲು ಕರೆದುಕೊಂಡು ಹೋಗುತ್ತಿದ್ದಳು. ಜ್ಯೂಸ್‌ ಕುಡಿದು ಪ್ರಜ್ಞೆ ಕಳೆದುಕೊಂಡ ತಕ್ಷಣ ಮೊಬೈಲ್, ಪರ್ಸ್, ಚಿನ್ನಾಭರಣ ದೋಚಿ ಎಸ್ಕೇಪ್ ಆಗುತ್ತಿದ್ದಳು ಎನ್ನಲಾಗಿದೆ.

ಈ ಬಗ್ಗೆ ಮಾಹಿತಿ ಪಡೆದ ಬ್ಯಾಟರಾಯನಪುರ ಪೊಲೀಸರು ಆಕೆಯನ್ನ ಬಂಧಿಸಿ ಠಾಣೆಗೆ ಕರೆತಂದಿದ್ದಾರೆ. ಠಾಣೆಗೆ ಕರೆತಂದ ಕೆಲವೇ ನಿಮಿಷಗಳಲ್ಲಿ ಮಹಿಳೆ ವಿಷಪೂರಿತ ಚಾಕೊಲೆಟ್‌ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ ಎನ್ನಲಾಗಿದೆ. ಮಹಿಳೆ ಕುಸಿದುಬಿದ್ದ ನಂತರ ಪೊಲೀಸರು ಆಕೆಯನ್ನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದಾರೆ.

Click

https://newsnotout.com/2024/10/lawyer-and-cigarate-kannada-news-mangaluru-bengaluru-issue-cm-statement/
https://newsnotout.com/2024/10/kannada-news-renukaswamy-sahana-kannada-news-darshan/
https://newsnotout.com/2024/10/mangaluru-kananda-news-bus-conductor-kannada-news-viral/
https://newsnotout.com/2024/10/omar-abdulla-kannada-news-rahul-gandhi-mallikarjuna-karge/

Related posts

ಪ್ರವಾಸಿಗರ ಬಸ್ಸಿನ ಮೇಲೆ ಹುಲಿಗಳ ಹಿಂಡಿನ ದಾಳಿ, ಇಲ್ಲಿದೆ ನೋಡಿ ವೈರಲ್ ವಿಡಿಯೋ

ರಾಮಮಂದಿರ ಉದ್ಘಾಟನೆಗೆ ಸೋನಿಯ ಸೇರಿ ಹಲವು ಕಾಂಗ್ರೆಸ್ ಮುಖಂಡರಿಗೆ ಆಹ್ವಾನ ನೀಡಿದ್ಯಾರು? ಮುಖಂಡರ ಪ್ರತಿಕ್ರಿಯೆ ಹೇಗಿತ್ತು..?

ಸುಳ್ಯ: ಬೈಕ್ – ಕಾರು ನಡುವೆ ಅಪಘಾತ, ಛಿದ್ರ..ಛಿದ್ರವಾದ ಬೈಕ್