ಕರಾವಳಿಕ್ರೈಂಸುಳ್ಯ

ಬೆಳ್ಳಾರೆ: ಭೀಕರವಾಗಿ ಮಹಿಳೆಯನ್ನು ಹತ್ಯೆ ಮಾಡಿದ ಆರೋಪಿಗೆ ನ್ಯಾಯಾಂಗ ಬಂಧನ, ನ್ಯಾಯಾಲಯದ ಆದೇಶ

166

ನ್ಯೂಸ್ ನಾಟೌಟ್: ಬೆಳ್ಳಾರೆಯಲ್ಲಿ ಕಲ್ಲು ಎತ್ತಿ ಹಾಕಿ ಮಹಿಳೆ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿಯನ್ನು ನ್ಯಾಯಾಲಯ ನ್ಯಾಯಾಂಗ ಬಂಧನಕ್ಕೊಳಪಡಿಸಿದೆ.

ಬೆಳ್ಳಾರೆಯಲ್ಲಿ ಜೂ.9ರಂದು ರಾತ್ರಿ ಕುಡಿದ ಮತ್ತಿನಲ್ಲಿ ಜಯ ಕುಮಾರ್ ಕಲ್ಮಡ್ಕ ಎಂಬಾತ ಪಾಟಾಜೆ ಸುಂದರ ಎಂಬವರ ಪತ್ನಿ ನಳಿನಿ ಅನ್ನುವವರನ್ನು ಬೆಳ್ಳಾರೆಯ ಪೇಟೆಯಲ್ಲಿ ಹತ್ಯೆ ಮಾಡಿದ್ದ. ಈ ಪ್ರಕರಣ ಮರುದಿನ ಬೆಳಗ್ಗೆ ಭಾರಿ ಸುದ್ದಿಯಾಗಿತ್ತು. ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿದರು. ಕ್ಷಿಪ್ರ ಕಾರ್ಯಾಚರಣೆ ನಡೆಸಿ ಪೊಲೀಸರು ಮಂಗಳವಾರ ಆರೋಪಿಯನ್ನು ಬಂಧಿಸಿದ್ದರು. ಆರೋಪಿಯ ಸ್ಥಳ ಮಹಜರು ನಡೆಸಿದ ಬಳಿಕ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಈ ವೇಳೆ ನ್ಯಾಯಾಲಯ ಆತನಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

See also  ನನ್ನ ಮದುವೆ ಶೀಘ್ರದಲ್ಲೇ ಇದೆ,ರಶ್ಮಿಕಾ ಜತೆ ಇನ್ನೂ ಸಂಪರ್ಕದಲ್ಲಿದ್ದೇನೆ-ನಟ ರಕ್ಷಿತ್ ಶೆಟ್ಟಿ;ಸಿಂಪಲ್ ಸ್ಟಾರ್ ಮದುವೆಯಾಗುತ್ತಿರೋ ಆ 'ಲಕ್ಕಿ ಗರ್ಲ್' ಯಾರು ಗೊತ್ತಾ?
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget   Ad Widget