ಕರಾವಳಿರಾಜಕೀಯ

ಪ್ರವೀಣ್ ನೆಟ್ಟಾರ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದ ಜೆ.ಪಿ.ನಡ್ಡಾ

ನ್ಯೂಸ್ ನಾಟೌಟ್ : ಸುಳ್ಯದ ಕೊಡಿಯಾಲ್ ಬೈಲ್ ಗೆ ಹೆಲಿಪ್ಯಾಡ್ ನಲ್ಲಿ ಬಂದಿಳಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಅವರು ಬೆಳ್ಳಾರೆಯ ಪ್ರವೀಣ್ ನೆಟ್ಟಾರ್ ಕನಸಿನ ಮನೆಗೆ ಭೇಟಿ ನೀಡಿ ಪ್ರವೀಣ್ ನೆಟ್ಟಾರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಗೈದರು. ನಂತರ ಪ್ರವೀಣ್ ನೆಟ್ಟಾರ್ ಅವರ ಕಂಚಿನ ಪುತ್ಥಳಿ ಕಡೆ ತೆರಳಿ ಪ್ರತಿಮೆಯನ್ನು ವೀಕ್ಷಿಸಿದರು.ಈ ಸಂದರ್ಭದಲ್ಲಿ ಪ್ರವೀಣ್ ನೆಟ್ಟಾರುರವರ ತಂದೆ ಶೇಖರ ಪೂಜಾರಿ, ತಾಯಿ ರತ್ನಾವತಿ, ಪತ್ನಿ ನೂತನ ಸೇರಿದಂತೆ ಸಂಬಂಧಿಕರು ಉಪಸ್ಥಿತರಿದ್ದರು.

ಜೆಪಿ ನಡ್ಡಾರವರು ಸುಳ್ಯ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಭಾಗೀರತಿ ಮುರುಳ್ಯರವರ ಪರವಾಗಿ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಷಣ ಮಾಡಲಿದ್ದಾರೆ.ಸುಳ್ಯದ ಚೆನ್ನಕೇಶವ ದೇವಳದ ಸಮೀಪ ಬೃಹತ್ ಚುನಾವಣಾ ಪ್ರಚಾರ ಸಭೆ ನಡೆಯುತ್ತಿದ್ದು, ಸಾವಿರಾರು ಕಾರ್ಯಕರ್ತರು,ಮುಖಂಡರು ಹಾಗೂ ಬೆಂಬಲಿಗರು ಭಾಗಿಯಾಗಿದ್ದಾರೆ.

Related posts

ಸುಳ್ಯ : ಬಂಟರ ಸಂಘದಿಂದ ದ.ಕ ಸಂಸದ ನಳಿನ್ ಕುಮಾರ್ ಕಟೀಲ್‌ರಿಗೆ ಸನ್ಮಾನ,ಶಾಲು ಹೊದಿಸಿ ನೆನಪಿನ ಕಾಣಿಕೆ ನೀಡಿ ಗೌರವ

ಕ್ರಿಕೆಟ್ ವಿಶ್ವಕಪ್ ಕಿರೀಟ ಗೆದ್ದ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮ್ಯಾನೇಜರ್ ಭಾರತದವರು..!ಆಸ್ಟ್ರೇಲಿಯಾ ಗೆಲುವಿಗೆ ಕಾರಣರಾದ ದ.ಕ. ಜಿಲ್ಲೆಯ ಕಿನ್ನಿಗೋಳಿ ಮೂಲದ ಯುವತಿಯ ಸ್ಫೂರ್ತಿ ಕಥೆ ಇಲ್ಲಿದೆ ಓದಿ…

ಬೈತಡ್ಕದಲ್ಲಿ ಶವ ಹುಡುಕುವಾಗ ನದಿ ನೀರಿಗೆ ಇಳಿದ ಅಜ್ಜ !