ಪುತ್ತೂರು

ಹೊತ್ತಿನ ಊಟಕ್ಕಾಗಿ ಪರದಾಡುತ್ತಿರುವ ಬಡವರಿಗಾಗಿ ಗದ್ದೆಗಿಳಿದು ನಾಟಿ ಮಾಡಿದ ಪತ್ರಕರ್ತರು..!

ಅಳಿಕೆ: ಪತ್ರಕರ್ತರೆಂದರೆ ಸಮಾಜಕ್ಕಾಗಿ ಜನರ ಕಷ್ಟಗಳಿಗಾಗಿ ದುಡಿಯುವವರು ಅನ್ನುವ ಭಾವನೆಯಿದೆ. ಪತ್ರಕರ್ತರು ಸಮಾಜದ ನೋವುಗಳಿಗೆ ಕ್ಷಿಪ್ರವಾಗಿ ಸ್ಪಂದಿಸಿದ ಅದೆಷ್ಟೋ ಉದಾಹರಣೆಗಳಿವೆ. ಅಂತಹುದೇ ಒಂದು ಕ್ಷಿಪ್ರ ಸ್ಪಂದನೆಯನ್ನು ದಕ್ಷಿಣ ಕನ್ನಡ ಜಿಲ್ಲೆಯ ಪತ್ರಕರ್ತರು ಮಾಡಿ ಸುದ್ದಿಯಾಗಿದ್ದಾರೆ.

ಏನಿದು ಸಾಹಸ?

ಭತ್ತದ ಕೃಷಿಕರೊಂದಿಗೆ ಪತ್ರಕರ್ತರ ಸಾಮೂಹಿಕ ಭತ್ತದ ನಾಟಿ ಕಾರ್ಯಕ್ರಮವನ್ನು ಮಾಡಿದ್ದಾರೆ. ಮಿತ್ತಳಿಕೆ ಗುತ್ತು ಕುಟುಂಬಸ್ಥರ ಸಹಕಾರ ದೊಂದಿಗೆ ಅಳಿಕೆ ಗ್ರಾಮದ ಮಿತ್ತಳಿಕೆಯ (ಚೆಂಡುಕಳ) ಗದ್ದೆಯಲ್ಲಿ ಗುರುವಾರ ಯಶಸ್ವಿಯಾಗಿ ನಡೆಯಿತು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಬಂಟ್ವಾಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಸಂಯುಕ್ತ ಆಶ್ರಯದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಮಿತ್ತಳಿಕೆಯ ಕುಟುಂಬದವರ ಗದ್ದೆಯಲ್ಲಿ ಪತ್ರಕರ್ತರು ನಾಟಿ ಮಾಡಿದ ಭತ್ತದ ಪೈರು ಬೆಳೆದು ಬೆಳೆ ಬಂದ ಬಳಿಕ ಅದನ್ನು ಬಡವರಿಗೆ ದಕ್ಷಿಣ ಕನ್ನಡ ಕಾರ್ಯ ನಿರತ ಪತ್ರಕರ್ತರ ಸಂಘದ ಮೂಲಕ ವಿತರಣೆ ಮಾಡುವುದಾಗಿ ಮಿತ್ತಳಿಕೆ ಕುಟುಂಬದ ಸದಸ್ಯರು ತಿಳಿಸಿದ್ದಾರೆ. ಮಿತ್ತಳಿಕೆ ಕುಟುಂಬದವರು ನೀಡುವ ಭತ್ತದ ಬೆಳೆಯ ಫಸಲನ್ನು ಪಡೆದು ಆರ್ಥಿಕ ವಾಗಿ ಹಿಂದುಳಿದ ಕುಟುಂಬ. ಬಡ ಕುಟುಂಬ ಗಳಿಗೆ ಅದನ್ನು ವಿತರಿಸುವ ಗುರಿ ಹೊಂದಲಾಗಿದೆ ಎಂದು ದ.ಕ ಜಿಲ್ಲೆಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ತಿಳಿಸಿದ್ದಾರೆ.

Related posts

ಪುತ್ತೂರು: ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಯುವಕ

ಪುತ್ತೂರು ಕಾಂಗ್ರೆಸ್ ಅಭ್ಯರ್ಥಿಯಾಗಿ ಅಶೋಕ್ ಕುಮಾರ್ ರೈ,ಅಧಿಕೃತ ಘೋಷಣೆಯೊಂದೇ ಬಾಕಿ

ಪುತ್ತೂರು: ಒಂದೇ ದಿನ ನಾಲ್ಕು ಕಡೆ ಅಗ್ನಿ ಅವಘಡ