ಕ್ರೈಂರಾಜಕೀಯವೈರಲ್ ನ್ಯೂಸ್

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಆರೋಪಿಯನ್ನು ಪಕ್ಷಕ್ಕೆ ಸೇರಿಸಿಕೊಂಡ ಶಿವಸೇನೆ..? ತೀವ್ರ ವಿರೋಧದ ಬಳಿಕ ನಿರ್ಧಾರ ತಡೆಹಿಡಿದ ಮಹಾರಾಷ್ಟ್ರ ಮುಖ್ಯಮಂತ್ರಿ..!

ನ್ಯೂಸ್ ನಾಟೌಟ್: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಆರೋಪಿ ಶ್ರೀಕಾಂತ್ ಪಂಗರ್ಕರ್ ನನ್ನು ಮೊದಲು ಸೇರಿಸಿಕೊಂಡು ಪಕ್ಷದ ಯಾವುದೇ ಹುದ್ದೆಗೆ ನೇಮಕಾತಿ ಮಾಡದಂತೆ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆಯು ತಡೆ ಹಿಡಿದಿದೆ.

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಆರೋಪಿ ಶ್ರೀಕಾಂತ್ ಪಂಗರ್ಕರ್ ಜಲ್ನಾದಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆಗೆ ಶುಕ್ರವಾರ(ಅ.20) ಮರು ಸೇರ್ಪಡೆಯಾಗಿದ್ದ.

ಪಂಗರ್ಕರ್ ಪಕ್ಷಕ್ಕೆ ಸೇರ್ಪಡೆ ಅನೂರ್ಜಿತವಾಗಿದ್ದು, ಪಂಗರ್ಕರ್ ಗೆ ಪಕ್ಷದ ಯಾವುದೇ ಹುದ್ದೆಯನ್ನು ನೀಡಿದರೆ, ಆ ನಿರ್ಧಾರವನ್ನು ತಡೆಹಿಡಿಯಲಾಗಿದೆ ಎಂದು ಶಿವಸೇನೆಯು ಹೇಳಿಕೆಯಲ್ಲಿ ತಿಳಿಸಿದೆ. ಶಿಂಧೆ ನೇತೃತ್ವದ ಶಿವಸೇನೆಯ ಹಿರಿಯ ನಾಯಕ ಹಾಗೂ ಮಾಜಿ ಸಚಿವ ಅರ್ಜುನ್ ಖೋಟ್ಕರ್ ಶ್ರೀಕಾಂತ್ ಪಂಗರ್ಕರ್ ಸೇರ್ಪಡೆ ಬಗ್ಗೆ ಘೋಷಿಸಿದ್ದರು.

ವ್ಯಾಪಕ ಟೀಕೆಗಳ ನಂತರ ಶಿಂಧೆ ನೇತೃತ್ವದ ಶಿವಸೇನೆ ಭಾನುವಾರ ಜಲ್ನಾ ಜಿಲ್ಲೆಯಲ್ಲಿ ಪಂಗರ್ಕರ್ ಗೆ ಪಕ್ಷದ ಯಾವುದೇ ಹುದ್ದೆಯನ್ನು ನೀಡಿದ್ದರೆ, ಆ ನಿರ್ಧಾರಕ್ಕೆ ತಡೆಹಿಡಿಯಲಾಗಿದೆ ಎಂದು ಹೇಳಿದೆ. 2017ರ ಸೆ. 5ರಂದು ಪತ್ರಕರ್ತೆ ಗೌರಿ ಲಂಕೇಶ್ ಅವರನ್ನು ಅವರ ಮನೆಯ ಹೊರಗೆ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಪ್ರಕರಣದ ತನಿಖೆ ನಡೆಸಿದ ಕರ್ನಾಟಕ ಪೊಲೀಸರು ಪಂಗರ್ಕರ್ ಸೇರಿದಂತೆ ಹಲವರನ್ನು ಬಂಧಿಸಲಾಗಿತ್ತು. ಇದೇ ಸೆಪ್ಟೆಂಬರ್ 4ರಂದು ಆತ ಕರ್ನಾಟಕ ಹೈಕೋರ್ಟ್ ನಿಂದ ಜಾಮೀನು ಪಡೆದುಕೊಂಡು ಬಿಡುಗಡೆಯಾಗಿದ್ದ.

Click

https://newsnotout.com/2024/10/kannada-news-andra-cm-chandra-babu-naidu-about-family-planning/
https://newsnotout.com/2024/10/mother-of-kiccha-sudeep-nomore-kannada-news-viral-news/
https://newsnotout.com/2024/10/mangaluru-money-issue-online-whats-app-message-kannada-news/

Related posts

ಚೈತ್ರಾ ಕುಂದಾಪುರ ವಂಚನೆ ಪ್ರಕರಣ: ಹಾಲಶ್ರೀ ಸ್ವಾಮೀಜಿಯನ್ನು ಬಂಧಿಸಿ ಬೆಂಗಳೂರಿಗೆ ಕರೆ ತಂದ ಸಿಸಿಬಿ ಪೊಲೀಸರು, ಕಟಕ್ ನಲ್ಲಿ ಟೀ ಶರ್ಟ್ ಹಾಕಿ ಓಡಾಡುತ್ತಿದ್ದ ಸ್ವಾಮೀಜಿಗೆ ಇನ್ಮುಂದೆ ಪೊಲೀಸ್ ಡ್ರಿಲ್..!

ಪರಿವಾರಕಾನ ಅಪಘಾತ: ಆರೋಪಿ ಖುಲಾಸೆ

ಪತ್ನಿಯನ್ನು ಕೊಂದು ಹಾಸಿಗೆಯ ಪೆಟ್ಟಿಗೆಯಲ್ಲಿ ಶವ ಬಚ್ಚಿಟ್ಟ ಪತಿ! ಇಲ್ಲಿದೆ ಅಕ್ರಮ ಸಂಬಂಧ ಹೊಂದಿದ್ದಾತನ ರೋಚಕ ಸ್ಟೋರಿ!