Uncategorized

ಯುವ ಕ್ರಿಕೆಟಿಗನ ಶವ ಸ್ನೇಹಿತನ ಮನೆಯಲ್ಲಿ ನಿಗೂಢವಾಗಿ ಪತ್ತೆ, 66 ರನ್ನಿಗೆ 6 ವಿಕೆಟ್‌ ಕಿತ್ತು ಪ್ರಚಂಡ ಸಾಧನೆ ಮಾಡಿದ್ದ 20 ವರ್ಷದ ಕ್ರಿಕೆಟಿಗನಿಗೆ ಆಗಿದ್ದೇನು..?

ನ್ಯೂಸ್ ನಾಟೌಟ್: ಮೂರು ದಿನಗಳ ಹಿಂದೆ ವೊರ್ಸೆಸ್ಟರ್‌ಶೈರ್‌ ಪರವಾಗಿ 66 ರನ್ನಿಗೆ 6 ವಿಕೆಟ್‌ ಕಿತ್ತು ಅಸಾಮಾನ್ಯ ಬೌಲಿಂಗ್​ ಪ್ರದರ್ಶನ ತೋರಿದ್ದ ಇಂಗ್ಲೆಂಡ್​ ಉದಯೋನ್ಮುಖ ಆಟಗಾರ, 20 ವರ್ಷದ ಜೋಶ್ ಬೇಕರ್‌(Josh Baker) ನಿಗೂಢವಾಗಿ ಸಾವನ್ನಪ್ಪಿದ್ದಾರೆ.

ಬುಧವಾರ ಪಂದ್ಯವನ್ನಾಡಿದ ಬಳಿಕ ಬೇಕರ್‌ ಯಾವುದೇ ಸಂಪರ್ಕಕ್ಕೆ ಸಿಗಲಿಲ್ಲ. ಫೋನ್‌ ಮಾಡಿದರೂ ಕೂಡ ರಿಸೀವ್‌ ಮಾಡಿರಲಿಲ್ಲ. ಬಳಿಕ ಅವರು ತಮ್ಮ ಸ್ನೇಹಿತನ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಸಾವಿಗೆ ನಿಖರವಾದ ಕಾರಣ ತಿಳಿದುಬಂದಿಲ್ಲ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ. ಇವರ ಸಾವಿಗೆ ಇಂಗ್ಲೆಂಡ್​ ಮತ್ತು ವೇಲ್ಸ್​ ಕ್ರಿಕೆಟ್​ ಮಂಡಳಿ, ಐಸಿಸಿ ಸೇರಿ ಅನೇಕ ಮಾಜಿ ಮತ್ತು ಹಾಲಿ ಕ್ರಿಕೆಟಿಗರು ಕಂಬನಿ ಮಿಡಿದ್ದಾರೆ. ಪ್ರಥಮ ದರ್ಜೆ ಕ್ರಿಕೆಟ್​ನಲ್ಲಿ 22 ಪಂದ್ಯ ಆಡಿರುವ ಜೋಶ್ 43 ವಿಕೆಟ್​ ಪಡೆದಿದ್ದಾರೆ. ಬ್ಯಾಟಿಂಗ್​ನಲ್ಲಿ 411 ರನ್​ ಗಳಿಸಿದ್ದಾರೆ. 84ಕ್ಕೆ 5 ವಿಕೆಟ್​ ಉತ್ತಮ ವೈಯಕ್ತಿಕ ಸಾಧನೆಯಾಗಿದೆ. ಲಿಸ್ಟ್​ ಎ ಕ್ರಿಕೆಟ್​ನಲ್ಲಿ 17 ಪಂದ್ಯಗಳಿಂದ 24 ವಿಕೆಟ್​, ಟಿ20 ಕ್ರಿಕೆಟ್​ನಲ್ಲಿ 8 ಪಂದ್ಯ ಆಡಿ 3 ವಿಕೆಟ್​ ಪಡೆದಿದ್ದಾರೆ.

ಬೇಕರ್ 2021 ರಲ್ಲಿ ಪ್ರಥಮ ದರ್ಜೆಗೆ ಪಾದಾರ್ಪಣೆ ಮಾಡಿದ್ದರು. ಎಲ್ಲಾ ಸ್ವರೂಪದ ಕ್ರಿಕೆಟ್​ ಸೇರಿ 47 ಪಂದ್ಯಗಳನ್ನು ಆಡಿ 70 ವಿಕೆಟ್​ಗಳನ್ನು ಪಡೆದಿದ್ದಾರೆ. ಅಂಡರ್​-19 ವಯೋಮಿತಿಯಲ್ಲಿ ಇಂಗ್ಲೆಂಡ್​ ತಂಡವನ್ನು ಪ್ರತಿನಿಧಿಸಿದ್ದರು. ಸ್ಪಿನ್​ ಬೌಲರ್​ ಆಗಿದ್ದ ಜೋಶ್‌ ಬೇಕರ್‌ ಭವಿಷ್ಯದ ಇಂಗ್ಲೆಂಡ್​ ತಂಡದ ಆಟಗಾರನೆಂದೆ ಗುರುತಿಸಿಕೊಂಡಿದ್ದರು. ಆದರೆ ಈಗ ಇಹಲೋಕ ತ್ಯಜಿಸಿದ್ದಾರೆ.

Related posts

ಮದುವೆ ಮನೆಯಲ್ಲಿ ಡಿಜೆ ಹಾಡಿಗಾಗಿ ಗಲಾಟೆ,ಠಾಣೆ ಮೆಟ್ಟಿಲೇರಿದ ಕುಟುಂಬಸ್ಥರು..!,ಇವರು ಮದುವೆಗಾಗಿ ಬಂದ್ರೋ? ಅಥವಾ ಗಲಾಟೆ ಮಾಡೋಕೆ ಬಂದ್ರೋ?

ಆಯುಧ ಪೂಜೆಗೆ ಹೆಚ್ಚು ಖರ್ಚು ಮಾಡದಂತೆ KSRTC ನೌಕರರಿಗೆ ಆದೇಶ..!ಒಂದು ಬಸ್ಸಿಗೆ 100 ರೂ. ಒಳಗೆ ಪೂಜೆ ಮುಗಿಸುವಂತೆ ಸೂಚನೆ..!

LPG Cylinder ವರ್ಷಕ್ಕೆ 15 ಸಿಲಿಂಡರ್ ಮಾತ್ರ, ಸಬ್ಸಿಡಿ ಸಂಖ್ಯೆ ಏರಿಕೆ, ಹೊಸ ನಿಯಮ ಜಾರಿ!