ಕೆವಿಜಿ ಕ್ಯಾಂಪಸ್‌ಸುಳ್ಯ

ಸುಳ್ಯ: ಅ.22ರಂದು ನೆಹರೂ ಮೆಮೋರಿಯಲ್ ಕಾಲೇಜಿನಲ್ಲಿ ಎನ್.ಐ.ಐ.ಟಿ ಮಂಗಳೂರು ವತಿಯಿಂದ ಉದ್ಯೋಗ ಮೇಳ, ಪದವಿ ಪೂರೈಸಿದ ವಿದ್ಯಾರ್ಥಿಗಳಿಗೆ ಇಲ್ಲಿದೆ ಸುವರ್ಣಾವಕಾಶ

ನ್ಯೂಸ್ ನಾಟೌಟ್ : ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನಲ್ಲಿ ಎನ್.ಐ.ಐ.ಟಿ ಮಂಗಳೂರು ವತಿಯಿಂದ ಅಕ್ಟೋಬರ್ 22ರಂದು ಉದ್ಯೋಗ ಮೇಳ ಆಯೋಜಿಸಲಾಗಿದೆ. ಎನ್ನೆಂಸಿ (ಕೆವಿಜಿ ಕ್ಯಾಂಪಸ್)ಯಲ್ಲಿ ನಡೆಯಲಿರುವ ಈ ಉದ್ಯೋಗ ಮೇಳದಲ್ಲಿ ಬಿ.ಎ, ಬಿ.ಎಸ್ಸಿ, ಬಿ.ಕಾಂ, ಬಿ.ಬಿ.ಎ, ಬಿ.ಎಸ್.ಡಬ್ಲ್ಯೂ, ಬಿ.ಸಿ.ಎ ಹೀಗೆ ಎಲ್ಲಾ ಕ್ಷೇತ್ರಗಳ ಅಭ್ಯರ್ಥಿಗಳನ್ನು ನೇಮಿಸಿಕೊಳ್ಳಲು ಅವಕಾಶ ಒದಗಿಸುತ್ತದೆ. ಕ್ಯಾಂಪಸ್ ನೇಮಕಾತಿ ಬೆಳಗ್ಗೆ 9.30 ಗಂಟೆಗೆ ಆರಂಭಗೊಳ್ಳಲಿದ್ದು, ವಿವಿಧ ಗಣ್ಯರ ಸಮ್ಮುಖದಲ್ಲಿ ಮಂಗಳೂರು ಎನ್.ಐ.ಐ.ಟಿ ವೃತ್ತಿ ತರಬೇತಿ ಕೇಂದ್ರದ ಮುಖ್ಯಸ್ಥೆ ಪವಿತ್ರಾ ವಿಕಾಸ್ ಉದ್ಘಾಟಿಸಲಿದ್ದಾರೆ. ಯಾವುದೇ ಕಾಲೇಜಿನ ಅಂತಿಮ ಪದವಿ ಓದುತ್ತಿರುವ ಅಥವಾ ಪದವಿ ಪೂರೈಸಿದ ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದು.

ಹೆಚ್ಚಿನ ಪ್ರತಿಷ್ಠಿತ ಬ್ಯಾಂಕಿಂಗ್ ಸಂಸ್ಥೆಗಳು ಭಾಗವಿಸುವ ನಿರೀಕ್ಷೆಯಿದೆ. ಸುಳ್ಯ, ಪುತ್ತೂರು, ಮಡಿಕೇರಿ ತಾಲೂಕುಗಳು ಹಾಗೂ ಸಮೀಪದ ಇನ್ನಿತರ ಗ್ರಾಮೀಣ ಭಾಗಗಳ ಆಕಾಂಕ್ಷಿತರಿಗೆ ಈ ಬಾರಿಯ ಉದ್ಯೋಗ ಮೇಳ ಅತ್ಯಂತ ಪ್ರಯೋಜನಕಾರಿ ಆಗಲಿದ್ದು ಹೆಚ್ಚು ಸಂಖ್ಯೆಯ ಅಭ್ಯರ್ಥಿಗಳು ಭಾಗವಹಿಸುವ ನಿರೀಕ್ಷೆಯಿದೆ. ಆಸಕ್ತರು ನೋಂದಾಯಿಸಿಕೊಳ್ಳಲು

1. https://forms.gle/SBDudQhkm3HEtGtF9

2. https://forms.gle/tkZX1tzcCoG6dMRHA

3. https://forms.gle/aLgeTSm3bSzYK86f7

4. https://forms.gle/rTFSyx13eGEzdWy5A

ಈ ಲಿಂಕ್ ಗಳನ್ನು ಬಳಸಬಹುದು. ಉದ್ಯೋಗ ಮೇಳದ ಬಗ್ಗೆ ಹೆಚ್ಚಿನ ಮಾಹಿತಿ ಪಡೆದುಕೊಳ್ಳಲು ನೆಹರೂ ಮೆಮೋರಿಯಲ್ ಕಾಲೇಜಿನ ಕಚೇರಿ (08257230331, 08257233331) ಸಂಖ್ಯೆಗಳನ್ನು ಸಂಪರ್ಕಿಸಬಹುದು.

Related posts

ಭಗವತಿ ಯುವ ಸೇವಾ ಸಂಘ ವತಿಯಿಂದ ಎಸ್ಎಸ್ಎಲ್ ಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

ಅಡ್ತಲೆ: ಕೃಷ್ಣ ಜನ್ಮಾಷ್ಟಮಿಗೆ ವಿಶೇಷ ಮೆರುಗು ನೀಡಿದ ಸ್ಪಂದನ ಗೆಳೆಯರ ಬಳಗ, ಸಂಭ್ರಮದಲ್ಲಿ ಮಿಂದೆದ್ದರು ನಮ್ ಹಳ್ಳಿ ಜನ..!

ಸುಳ್ಯ: ಜ್ಯೋತಿ ಆಸ್ಪತ್ರೆಗೆ ಎರಡನೇ ಬಾರಿಗೆ ರಾಷ್ಟ್ರೀಯ ಮಾನ್ಯತೆ, 47 ವರ್ಷಗಳಿಂದ ನಿರಂತರ ಸೇವೆ