ಕ್ರೀಡೆ/ಸಿನಿಮಾವೈರಲ್ ನ್ಯೂಸ್

ಜಿಯೋ ಮಾಮಿ ಫಿಲ್ಮ್​ ಫೆಸ್ಟಿವಲ್‌ ನಲ್ಲಿ ಕಳಚಿದ ನಟಿಯ ಗೌನ್‌ ಸ್ಟ್ರಾಪ್..!ಪರಿಸ್ಥಿತಿ ನಿಭಾಯಿಸಿದ ರೀತಿಗೆ ಎಲ್ಲರ ಮೆಚ್ಚುಗೆ…ವಿಡಿಯೋ ವೀಕ್ಷಿಸಿ..

179

ನ್ಯೂಸ್‌ ನಾಟೌಟ್‌: ಮುಂಬೈಯಲ್ಲಿ ಆಯೋಜನೆಗೊಂಡಿರುವ ಜಿಯೋ ಮಾಮಿ ಫಿಲ್ಮ್​ ಫೆಸ್ಟಿವಲ್ ಅದ್ಧೂರಿಯಾಗಿ ನಡೆಯುತ್ತಿತ್ತು. ಈ ಸಂದರ್ಭ ಹಲವಾರು ಮಂದಿ ಬಾಲಿವುಡ್‌ ತಾರೆಯರು ಪಾಲ್ಗೊಂಡಿದ್ದರು. 2017ರಲ್ಲಿ ಪ್ರಸಾರ ಕಂಡ ‘ಮೇರಿ ಹಾನಿಕಾರಕ್ ಬೀವಿ’ ಧಾರಾವಾಹಿ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಜಿಯಾ ಶಂಕರ್ ಕೂಡ ಭಾಗಿಯಾಗಿದ್ದರು.

ಕಾರ್ಯಕ್ರಮದ ವೇದಿಕೆಯಲ್ಲಿ ಜಿಯಾ ಶಂಕರ್‌ ಗೌನ್ ಧರಿಸಿ ಮಿಂಚುತ್ತಿದ್ದರು. ಅವರ ಫೋಟೋ ಸೆರೆಹಿಡಿಯಲು ಪಾಪರಾಜಿಗಳ ದಂಡೇ ಇತ್ತು. ಈ ಸಮಯಕ್ಕೆ ಸರಿಯಾಗಿ ಅವರ ಗೌನ್​ನ ಸ್ಟ್ರಾಪ್ ಕಳಚಿ ಬಿದ್ದಿದೆ. ಈ ವೇಳೆ ಅವರು ಪರಿಸ್ಥಿತಿಯನ್ನು ನಿಭಾಯಿಸಿದ ರೀತಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ಸ್ಟ್ರಾಪ್ ಕಳಚಿದ ಬೆನ್ನಲ್ಲೇ ಅವರಿಗೆ ಮುಜುಗರವಾಗಿದೆ. ಆದರೂ ಅವರು ಮುಜುಗರಗೊಳಪಡದೆ ಸ್ಟ್ರಾಪ್​ನ ಮೇಲೆ ಹಾಕಿ ಪರಿಸ್ಥಿತಿಯನ್ನು ನಿಭಾಯಿಸಿದರು. ಸದ್ಯ ಈ ವಿಡಿಯೋ ವೈರಲ್ ಆಗುತ್ತಿದೆ. ‘ನಿಮ್ಮನ್ನು ನೀವು ಹೀಗೆ ಮುನ್ನಡೆಸಿಕೊಂಡು ಹೋಗಬೇಕು’ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ. ‘ಅವರು ಎಷ್ಟು ಪ್ರಬುಧ್ಧವಾಗಿ ಪರಿಸ್ಥಿತಿ ನಿಭಾಯಿಸಿದರು. ಈ ರೀತಿಯ ಪರಿಸ್ಥಿತಿ ಎದುರಾಗಿದ್ದರೆ ನನ್ನ ಬಳಿ ಅದನ್ನು ನಿಭಾಯಿಸಲು ಸಾಧ್ಯವೇ ಆಗುತ್ತಿರಲಿಲ್ಲ’ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ. ಜಿಯಾ ‘ಕಾಟೇಲಾಲ್ & ಸನ್ಸ್ ’ ಹಾಗೂ ‘ಪಿಶಾಚಿನಿ’ ಧಾರಾವಾಹಿಗಳಲ್ಲೂ ನಟಿಸಿದ್ದು, ಮರಾಠಿ ಚಿತ್ರರಂಗದಲ್ಲೂ ಗುರುತಿಸಿಕೊಂಡಿದ್ದಾರೆ. ಮರಾಠಿಯ ‘ವೇದ್’ ಸಿನಿಮಾ ಮೂಲಕ ಸಾಕಷ್ಟು ಜನಪ್ರಿಯತೆ ಪಡೆದರು. ‘ಬಿಗ್ ಬಾಸ್ ಸೀಸನ್ 2’ ಮೂಲಕ ಅವರು ಖ್ಯಾತಿ ಹೆಚ್ಚಿಸಿಕೊಂಡರು.

See also  ನೈಟ್‌ ಕ್ಲಬ್‌ ನಲ್ಲಿ ಛಾವಣಿ ಕುಸಿದು 79 ಮಂದಿ ಸಾವು..! ವಿಡಿಯೋ ವೈರಲ್
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget   Ad Widget