ಕ್ರೈಂದೇಶ-ಪ್ರಪಂಚದೇಶ-ವಿದೇಶವಿಡಿಯೋವೈರಲ್ ನ್ಯೂಸ್

ಜಿಮ್ ನಲ್ಲಿ ವರ್ಕ್ ಔಟ್ ಮಾಡುತ್ತಿದ್ದ ವ್ಯಕ್ತಿ ಡಿಢೀರ್ ಸಾವು..! ವೈದ್ಯರು ಹೇಳಿದ್ದೇನು..? ಇಲ್ಲಿದೆ ವೈರಲ್ ವಿಡಿಯೋ

ನ್ಯೂಸ್ ನಾಟೌಟ್: ಜಿಮ್ ನಲ್ಲಿ ವರ್ಕ್ ಔಟ್ ಮಾಡಿ ಕುಳಿತ್ತಿದ್ದ ವ್ಯಕ್ತಿಯೊಬ್ಬರು ಇದ್ದಕಿದ್ದಂತೆ ಕುಸಿದುಬಿದ್ದು ಮೃತಪಟ್ಟ ಆಘಾತಕಾರಿ ಘಟನೆ ಉತ್ತರ ಪ್ರದೇಶದ ವಾರಣಾಸಿಯಲ್ಲಿ ಇಂದು(ಮೇ.2) ವರದಿಯಾಗಿದೆ.

ಮೃತ ವ್ಯಕ್ತಿಯನ್ನು ದೀಪಕ್ ಗುಪ್ತ (32) ಎಂದು ಗುರುತಿಸಲಾಗಿದ್ದು, ಘಟನೆಯ ದೃಶ್ಯ ಅಲ್ಲಿನ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ದೀಪಕ್ ಗುಪ್ತಾ ಜಿಮ್ ನಲ್ಲಿ ವ್ಯಾಯಾಮ ಮಾಡಿ ಬಳಿಕ ಅಲ್ಲೇ ಕುಳಿತ್ತಿದ್ದರು ಈ ವೇಳೆ ಇದ್ದಕಿದ್ದಂತೆ ಕುಸಿದು ಬಿದ್ದಿದ್ದಾರೆ ಈ ಸಮಯದಲ್ಲಿ ಅಲ್ಲಿದ್ದ ಇತರ ಸಹದ್ಯೋಗಿಗಳು ಸಹಾಯಕ್ಕೆ ಧಾವಿಸಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ ಪರಿಶೀಲಿಸಿದ ವೈದ್ಯರು ವ್ಯಕ್ತಿ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಅಲ್ಲದೆ ಪರೀಕ್ಷೆ ನಡೆಸಿದ ವೈದ್ಯರು ದೀಪಕ್ ಬ್ರೈನ್ ಸ್ಟ್ರೋಕ್‌ಗೆ ಒಳಗಾಗಿರುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.

ಅಲ್ಲದೆ ಜಿಮ್ ನಲ್ಲಿರುವ ಸಿಸಿ ಕ್ಯಾಮೆರಾದಲ್ಲಿ ದೀಪಕ್ ತಲೆಗೆ ಕೈ ಹಿಡಿದುಕೊಂಡಿರುವುದು ಕಾಣಿಸಿಕೊಂಡಿದೆ. ಇತ್ತೀಚೆಗೆ ಕೋವಿಶೀಲ್ಟ್ ತೆಗೆದುಕೊಂಡವರಿಗೂ ಇಂತಹ ಲಕ್ಷಣಗಳಿರುವ ಬಗ್ಗೆ ಕಂಪನಿಯೇ ಒಪ್ಪಿಕೊಂಡಿತ್ತು. ಸದ್ಯ ಪ್ರಕರಣ ದಾಖಲಾಗಿದ್ದು ದೀಪಕ್ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ ವರದಿ ತಿಳಿಸಿದೆ.

Related posts

ಹೊಸ ವರ್ಷಕ್ಕೆ ಎಣ್ಣೆ ಪ್ರಿಯರಿಗೆ ಬಿಗ್ ಶಾಕ್..? ಜನವರಿಯಿಂದ ಮದ್ಯದ ಬೆಲೆಯಲ್ಲಿ ಭಾರಿ ವ್ಯತ್ಯಾಸ! ಇಲ್ಲಿದೆ ಸಂಪೂರ್ಣ ಮಾಹಿತಿ

ಪುಲ್ವಾಮಾ ಗುಂಡಿನ ದಾಳಿಯಲ್ಲಿ ಇಬ್ಬರು ಉಗ್ರರ ಹತ್ಯೆ

ಮಹಿಳೆಯರ ಶವದ ಮೇಲೆ ತಾಲಿಬಾನಿ ಉಗ್ರರ ಪೈಶಾಚಿಕ ಕೃತ್ಯ..! ಭೀಕರ ಕಥೆ ಬಿಚ್ಚಿಟ್ಟ ಮಹಿಳೆ