Latestಕ್ರೈಂರಾಜ್ಯ

ಜೀವಂತ ಮೊಸಳೆಯನ್ನು ತಂದು ಜೆಸ್ಕಾಂ ಕಚೇರಿ ಮುಂದೆ ಪ್ರತಿಭಟನೆ..! ಎತ್ತಿನ ಬಂಡಿಯಲ್ಲಿ ಕಟ್ಟಿಕೊಂಡು ಬಂದಿದ್ದ ಜನ..!

774

ನ್ಯೂಸ್ ನಾಟೌಟ್: ಬೆಳಗಿನ ಜಾವ ನಾಲ್ಕು ಗಂಟೆಗೆ ಗೋಧಿ ಬೆಳೆಗೆ ನೀರು ಬಿಡಲು ಹೋದಾಗ ರೈತನ ಜಮೀನಿನಲ್ಲಿ ಪ್ರತ್ಯಕ್ಷವಾಗಿರುವ ಮೊಸಳೆಯನ್ನು ಎತ್ತಿನ ಬಂಡಿಯಲ್ಲಿ ಕಟ್ಟಿಕೊಂಡು ಬಂದು ಜೆಸ್ಕಾಂ ಕಚೇರಿ ಮುಂದೆ ರೈತರು ಪ್ರತಿಭಟನೆ ನಡೆಸಿರುವ ಘಟನೆ ಫೆ.20 ಕಲಬುರಗಿಯಲ್ಲಿ ನಡೆದಿದೆ.

ಅಫಜಲಪುರ ತಾಲ್ಲೂಕಿನ ಗೊಬ್ಬೂರ್ ಬಿ ಗ್ರಾಮದ ಲಕ್ಷ್ಮಣ ಪೂಜಾರಿ ಎಂಬ ರೈತನ ಹೊಲದಲ್ಲಿ ಮೊಸಳೆ ಪ್ರತ್ಯಕ್ಷವಾಗಿತ್ತು. ಜೆಸ್ಕಾಂ ಕಚೇರಿ ರೈತರ ಕೃಷಿ ಜಮೀನಿಗೆ ಬೆಳಗಿನ ಜಾವ 4 ಗಂಟೆಗೆ ವಿದ್ಯುತ್ ಪೂರೈಕೆ ಮಾಡುತ್ತಿರುವುದರಿಂದ ಭಯದ ವಾತಾವರಣದಲ್ಲಿ ಕೆಲಸ ಮಾಡುವಂತಾಗಿದೆ. ರೈತರಿಗೆ ಬೆಳಗಿನ ಜಾವ 4 ಗಂಟೆ ಬದಲು 6 ಗಂಟೆಗೆ ಸಮರ್ಪಕವಾಗಿ ವಿದ್ಯುತ್ ನೀಡುವಂತೆ ಆಗ್ರಹಿಸಿ ಗೊಬ್ಬೂರ್ ಬಿ ಗ್ರಾಮದ ಜೆಸ್ಕಾಂ ಕಚೇರಿ ಮುಂಭಾಗದಲ್ಲಿ ಮೊಸಳೆ ಇಟ್ಟು ರೈತರು ಪ್ರತಿಭಟನೆ ನಡೆಸಿದರು.

ಇದನ್ನೂ ಓದಿ:ಪುಟ್ಟ ಬಾಲಕನನ್ನು ಥಳಿಸಿ ಲಿಫ್ಟಿನಿಂದ ಹೊರಕ್ಕೆ ದೂಡಿದ ಮಹಿಳೆ..! ವಿಡಿಯೋ ವೈರಲ್

ಈ ಸಂದರ್ಭದಲ್ಲಿ ದೇವಲ್ ಗಾಣಗಾಪುರ ಪೊಲೀಸ್ ಠಾಣೆಯ ಪಿಎಸ್ಐ ರಾಹುಲ್ ಪಾವಡೆ ರೈತರ ಮನವೊಲಿಸಿ ಮೊಸಳೆಯನ್ನು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಒಪ್ಪಿಸಿ ಮೊಸಳೆಯನ್ನು ರಕ್ಷಿಸಲಾಯಿತು ಎಂದು ವರದಿ ತಿಳಿಸಿದೆ.

See also  ಕಂದಕದೊಳಗೆ 9 ವರ್ಷದ ಬಾಲಕಿಯ ಮೃತದೇಹ ಪತ್ತೆ..! ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿದ ಗ್ರಾಮಸ್ಥರು, ಓಡಿದ ಪೊಲೀಸರು..!
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget