ಕ್ರೈಂಬೆಂಗಳೂರುವೈರಲ್ ನ್ಯೂಸ್

ಜೀನ್ಸ್ ಪ್ಯಾಂಟ್​​​​​​ ಬಣ್ಣ ಹೋಯ್ತು ಎಂದು ಕೋರ್ಟ್​​​​ ಮೆಟ್ಟಿಲೇರಿದ ವ್ಯಕ್ತಿ..! ಒಂದು ವರ್ಷದ ಬಳಿಕ ಕೋರ್ಟ್ ನೀಡಿದ ತೀರ್ಪೇನು..?

ನ್ಯೂಸ್ ನಾಟೌಟ್: ಮೂರು ಬಾರಿ ಪ್ಯಾಂಟ್​​ ತೊಳೆದಾಗ ಅದರ ಬಣ್ಣ ಮಾಸಿ ಹೋಗಿದೆ ಎಂದು ಪ್ರತಿಷ್ಠಿತ ಕಂಪೆನಿಯೊಂದರ ವಿರುದ್ಧ ಕೋರ್ಟ್​​​​ ಮೆಟ್ಟಿಲೇರಿದ್ದ ಬೆಂಗಳೂರಿನ ವ್ಯಕ್ತಿಗೆ ಜಯ ದೊರಕಿದೆ.

ಒಂದು ವರ್ಷದ ಬಳಿಕ ಆತ ಪ್ಯಾಂಟ್​​ ಖರೀದಿಸಿದ ಬ್ಯ್ರಾಂಡ್​​​​ ಕಂಪೆನಿಗೆ ಹಣ ಮರುಪಾವತಿಸುವಂತೆ ಕೋರ್ಟ್​​​ ತೀರ್ಪು ನೀಡಿದೆ ಎಂದು ವರದಿ ತಿಳಿಸಿದೆ. ಬೆಂಗಳೂರಿನಲ್ಲಿ ನೆಲೆಸಿರುವ ಹರಿಹರನ್ ಬಾಬು ಎ.ಕೆ ಎಂಬವರು ಏಪ್ರಿಲ್ 16, 2023 ರಂದು ಆದಿತ್ಯ ಬಿರ್ಲಾ ಫ್ಯಾಷನ್ ಮತ್ತು ರಿಟೇಲ್ ಲಿಮಿಟೆಡ್ (ABFRL) ನಿಂದ 4,499 ರೂ.ಗಳ ಜೀನ್ಸ್ ಪ್ಯಾಂಟ್ ಒಂದನ್ನು ಖರೀದಿಸಿದ್ದರು.

ಆದರೆ ಈ ಪ್ಯಾಂಟ್​​​​​ ಮೂರು ಬಾರಿ ತೊಳೆದ ನಂತರ ಬಣ್ಣ ಹೋಗಲು ಪ್ರಾರಂಭವಾಗಿತ್ತು. ಇದರಿಂದಾಗಿ ಬಟ್ಟೆ ಶೋರೂಮ್‌ ಗೆ ದೂರು ನೀಡಿ ಮರುಪಾವತಿಗೆ ವಿನಂತಿಸಿದ್ದರು. ಆದರೆ ಏನು ಪ್ರಯೋಜನವಾಗಿಲ್ಲ ಎಂದಿದ್ದಾರೆ. ಇದರಿಂದಾಗಿ ಕೋಪಗೊಂಡಿದ್ದ ಹರಿಹರನ್ ಗ್ರಾಹಕರ ನ್ಯಾಯಾಲಯದಲ್ಲಿ ದೂರು ಸಲ್ಲಿಸಿದ್ದರು. ಆದರೆ ಸುಮಾರು ಒಂದು ವರ್ಷಗಳ ಹೋರಾಟದ ನಂತರ ಜಯ ಸಿಕ್ಕಿದೆ.

ಗ್ರಾಹಕರ ದೂರಿನ ಆಧಾರದ ಮೇಲೆ ಜೀನ್ಸ್ ಮೊತ್ತ 4,499ರೂ. ಮತ್ತು ಹೆಚ್ಚುವರಿ 1,000 ರೂ.ಗಳ ಮರುಪಾವತಿಸಲು ಬೆಂಗಳೂರಿನ ಗ್ರಾಹಕ ನ್ಯಾಯಾಲಯವು ಕಂಪನಿಗೆ ಆದೇಶಿಸಿದೆ ಎಂದು ವರದಿ ತಿಳಿಸಿದೆ. ಕಳೆದ ವರ್ಷ(2023) ಅಕ್ಟೋಬರ್‌ನಲ್ಲಿ ಆರಂಭವಾದ ಈ ಕಾನೂನು ಪ್ರಕ್ರಿಯೆಗಳು ಈ ವರ್ಷದ(2024) ಫೆಬ್ರವರಿಯಲ್ಲಿ ಮುಕ್ತಾಯಗೊಂಡಿದೆ.

ಆದಿತ್ಯ ಬಿರ್ಲಾ ಫ್ಯಾಷನ್ ಮತ್ತು ರಿಟೇಲ್ ಲಿಮಿಟೆಡ್ ಗ್ರಾಹಕರಿಗೆ ತೊಳೆಯುವ ಸೂಚನೆಗಳನ್ನು ನಮೂದಿಸಿರಲ್ಲಿಲ್ಲ ಎಂದು ಗ್ರಾಹಕರ ವೇದಿಕೆ ನ್ಯಾಯಾಧೀಶರು ತೀರ್ಪು ನೀಡಿದ್ದಾರೆ ಎನ್ನಲಾಗಿದೆ. ಆದಿತ್ಯ ಬಿರ್ಲಾ ಫ್ಯಾಷನ್ ಮತ್ತು ರಿಟೇಲ್ ಲಿಮಿಟೆಡ್ (ABFRL) ಭಾರತೀಯ ಫ್ಯಾಷನ್ ಮತ್ತು ಚಿಲ್ಲರೆ ಉದ್ಯಮದಲ್ಲಿ ಪ್ರಮುಖ ಕಂಪನಿಯಾಗಿದೆ. ಇದು ಆದಿತ್ಯ ಬಿರ್ಲಾ ಗ್ರೂಪ್‌ನ ಒಂದು ಭಾಗವಾಗಿದೆ, ಇದು ಭಾರತದ ಅತಿದೊಡ್ಡ ಸಂಘಟಿತ ಸಂಸ್ಥೆಗಳಲ್ಲಿ ಒಂದಾಗಿದೆ.

https://newsnotout.com/2024/02/uppinangady-students-health/

Related posts

ಸಂಗೀತ ಕಾರ್ಯಕ್ರಮ ನಡೆಸುತ್ತಿರುವಾಗ ವೇದಿಕೆಯಲ್ಲಿ ನೋವಿನಿಂದ ಒದ್ದಾಡಿದ ಖ್ಯಾತ ಗಾಯಕ..! ಸೋನು ನಿಗಮ್ ಆಸ್ಪತ್ರೆಗೆ ದಾಖಲು..!

ಭಾರತೀಯ ವಿಮಾಯಾನದಲ್ಲಿ ಸಾರ್ವಕಾಲಿಕ ದಾಖಲೆ..! ನ.17 ರಂದು ಒಂದೇ ದಿನ 5 ಲಕ್ಷಕ್ಕೂ ಹೆಚ್ಚು ಜನ ಪ್ರಯಾಣ..!

ಮಂಗಳೂರು: ಸಮುದ್ರಕ್ಕೆ ಹಾರಿ ವಿದ್ಯಾರ್ಥಿನಿ ಆತ್ಮಹತ್ಯೆಗೆ ಯತ್ನ..! ವೆನ್ಲಾಕ್ ಆಸ್ಪತ್ರೆಯಲ್ಲಿ ಯುವತಿಗೆ ಚಿಕಿತ್ಸೆ