ಸುಳ್ಯ

ಜೇಸಿಐ ಸುಳ್ಯ ಸಿಟಿ ಘಟಕದ 2025ನೇ ಸಾಲಿನ ನಿಯೋಜಿತ ಅಧ್ಯಕ್ಷರಾಗಿ ‘ನ್ಯೂಸ್ ನಾಟೌಟ್’ ಪ್ರಧಾನ ಸಂಪಾದಕ ಹೇಮಂತ್ ಸಂಪಾಜೆ ಆಯ್ಕೆ, ಹಾಲಿ ಅಧ್ಯಕ್ಷ ವಿಷ್ಣು ಪ್ರಕಾಶ್ ನಾರ್ಕೋಡು ಸಮ್ಮುಖದಲ್ಲಿ ಸರ್ವಾನುಮತದ ಆಯ್ಕೆ

ನ್ಯೂಸ್ ನಾಟೌಟ್: ಜೇಸಿಐ ಸುಳ್ಯ ಸಿಟಿ ಘಟಕದ 2025ನೇ ಸಾಲಿನ ನಿಯೋಜಿತ ಅಧ್ಯಕ್ಷರಾಗಿ ‘ನ್ಯೂಸ್ ನಾಟೌಟ್’ ಪ್ರಧಾನ ಸಂಪಾದಕ ಹೇಮಂತ್ ಸಂಪಾಜೆ ಆಯ್ಕೆಯಾಗಿದ್ದಾರೆ. ಶನಿವಾರ ಮ್ಯಾಟ್ರಿಕ್ಸ್ ವಿದ್ಯಾ ಸಂಸ್ಥೆಯಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಹಾಲಿ ಜೇಸಿಐ ಸುಳ್ಯ ಸಿಟಿ ಘಟಕದ ಅಧ್ಯಕ್ಷ ವಿಷ್ಣು ಪ್ರಕಾಶ್ ನಾರ್ಕೋಡು ಸಮ್ಮುಖದಲ್ಲಿ ಸರ್ವಾನುಮತದ ಆಯ್ಕೆ ನಡೆಯಿತು. ಶಾಲು ಹೊದಿಸಿ 2025ನೇ ಸಾಲಿನ ನಿಯೋಜಿತ ಅಧ್ಯಕ್ಷ ಹೇಮಂತ್ ಸಂಪಾಜೆ ಅವರನ್ನು ಸ್ವಾಗತಿಸಲಾಯಿತು.

ಕಾರ್ಯಕ್ರಮದಲ್ಲಿ ಜೇಸಿಐ ಸುಳ್ಯ ಸಿಟಿ ಘಟಕದ ಸ್ಥಾಪಕ ಮನಮೋಹನ್ ಬಳ್ಳಡ್ಕ, ನಿಕಟಪೂರ್ವ ಅಧ್ಯಕ್ಷ ಜೇಸಿ ರಂಜೀತ್ ಪಿ.ಜೆ, ಮ್ಯಾಟ್ರಿಕ್ಸ್ ವಿದ್ಯಾ ಸಂಸ್ಥೆಯ ಸಂಚಾಲಕ ಜೇಸಿ ವಿನಯ್ ರಾಜ್ ಮಡ್ತಿಲ, ಜೇಸಿಐ ಸುಳ್ಯ ಸಿಟಿ ಘಟಕದ ಪೂರ್ವಾಧ್ಯಕ್ಷ ಚಂದ್ರಶೇಖರ ಕನಕಮಜಲು, ಜೇಸಿಐ ಸುಳ್ಯ ಸಿಟಿ ಘಟಕದ ಪೂರ್ವಾಧ್ಯಕ್ಷ ಜೇಸಿ ಬಶೀರ್ ಯು.ಪಿ, ಜೇಸಿ ಅನಿತಾ ಪಾನತ್ತಿಲ, ಜೇಸಿ ಶಶಿಧರ್ ಎಕ್ಕಡ್ಕ, ಜೇಸಿ ಅಶ್ವಥ್ ಅಡ್ಕಾರ್, ಜೇಸಿ ಗೋಪಾಲಕೃಷ್ಣ ಪೆರ್ಲಂಪ್ಪಾಡಿ, ಜೇಸಿ ನಾಗವೇಣಿ, ಜೇಸಿ ರಶ್ಮಿ, ಜೇಸಿ ಧನುಷ್ , ಜೇಸಿ ಪ್ರಜ್ವಲ್ ಮತ್ತಿತರರು ಉಪಸ್ಥಿತರಿದ್ದರು.

Related posts

ಕಲ್ಮಡ್ಕ: ಕಾಚಿಲ ಶ್ರೀಮಹಾವಿಷ್ಣುಮೂರ್ತಿ ದೈವಸ್ಥಾನ ಪ್ರತಿಷ್ಠಾ ವಾರ್ಷಿಕೋತ್ಸವ ಮತ್ತು ಒತ್ತೆಕೋಲ ನಡಾವಳಿ, ಸಾವಿರಾರು ಜನ ಸೇರುವ ನಿರೀಕ್ಷೆ

ಸುಳ್ಯ – ಮಂಡೆಕೋಲು ಭಾಗಕ್ಕೆ ಹೊಸ ಬಸ್ ಸಂಚಾರ ಆರಂಭ, ದಿನಕ್ಕೆ ಎಷ್ಟು ಭಾರಿ ಸಂಚಾರ..? ಇಲ್ಲಿದೆ ಡಿಟೇಲ್ಸ್

ಸುಳ್ಯದ ಖ್ಯಾತ ಉದ್ಯಮಿಯ ಸೊಸೆ ಐಶ್ವರ್ಯಾ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್..!,ನಾಲ್ಕು ಪುಟಗಳ ಡೆತ್‌ನೋಟ್‌ ಪತ್ತೆ,ಐವರು ಅರೆಸ್ಟ್..!