ನ್ಯೂಸ್ ನಾಟೌಟ್: ತಮಿಳುನಾಡಿನ ಮಧುರೈನ ಸೆಲ್ಲೂರಿನಲ್ಲಿ 17 ವರ್ಷದ ಯುವಕನೊಬ್ಬ ಜೆಸಿಬಿ ಅಗೆಯುವ ಯಂತ್ರವನ್ನು ಚಲಾಯಿಸಿ ಅವಾಂತರ ಸೃಷ್ಟಿಯಾಗಿದೆ. ಮಧುರೈನ ಸೆಲ್ಲೂರಿನಲ್ಲಿ ರಸ್ತೆಯಲ್ಲಿ ನಿಲ್ಲಿಸಿದ್ದ ವಾಹನಗಳಿಗೆ ಅಗೆಯುವ ಯಂತ್ರವನ್ನು ಚಾಲನೆ ಮಾಡಿ ಡಿಕ್ಕಿ ಹೊಡೆದಿದ್ದಾನೆ ಎನ್ನಲಾಗಿದೆ. ಹಾನಿಗೊಳಗಾದ ವಾಹನಗಳಲ್ಲಿ ಬೈಕ್ ಗಳು, ಆಟೋರಿಕ್ಷಾಗಳು ಮತ್ತು ಕಾರು ಸೇರಿವೆ ಎನ್ನಲಾಗಿದೆ.
ಈ ಘಟನೆ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಈ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ರಾತ್ರಿ ಆ ರಸ್ತೆಯಲ್ಲಿ ಜನರಿಲ್ಲದ ಕಾರಣ ಭಾರೀ ಅನಾಹುತ ತಪ್ಪಿದೆ.
ಅಪ್ರಾಪ್ತ ಯುವಕ ಸುಮಾರು ಅರ್ಧ ಕಿಲೋಮೀಟರ್ ಜೆಸಿಬಿ ಯಂತ್ರವನ್ನು ಓಡಿಸಿದ್ದಾನೆ. ಈ ಘಟನೆ ಬೆಳಗಿನ ಜಾವ 2.30ರ ಸುಮಾರಿಗೆ(ಮಾ.3) ನಡೆದಿದೆ. ಸೆಲ್ಲೂರ್ 50 ಅಡಿ ರಸ್ತೆಯಿಂದ ಜೆಸಿಬಿ ಯಂತ್ರವನ್ನು ಚಲಾಯಿಸಲು ಪ್ರಾರಂಭಿಸಿದ್ದಾನೆ.
A 17-year-old boy operated a JCB excavator that was parked at Sellur in #Madurai and damaged several auto rickshaws and properties.
Know more🔗https://t.co/TWug9cLQmo pic.twitter.com/B5aPo0jwHm
— The Times Of India (@timesofindia) March 3, 2025
ಬಾಲಕ ಭದ್ರತಾ ಸಿಬ್ಬಂದಿಯ ಮೇಲೆ ಕೂಡ ಜೆಸಿಬಿಯಿಂದ ಡಿಕ್ಕಿ ಹೊಡೆದಿದ್ದರಿಂದ ಸ್ಥಳೀಯರು ಆತನನ್ನು ಸೆರೆ ಹಿಡಿದಿದ್ದಾರೆ. ಮಾಹಿತಿ ಪಡೆದ ನಂತರ, ಪೊಲೀಸರು ಸ್ಥಳಕ್ಕೆ ತಲುಪಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ತನಿಗೆ ನಡೆಯುತ್ತಿದೆ.