ಸುಳ್ಯ : ಜಯನಗರ ಕೊರಂಬಡ್ಕ ಶ್ರೀ ನಾಗಬ್ರಹ್ಮ ಆದಿ ಮೊಗೇರ್ಕಳ ಹಾಗೂ ಸ್ವಾಮಿ ಕೊರಗಜ್ಜ ದೇವಸ್ಥಾನದಲ್ಲಿ ಕಾಲಾವಧಿ ನೇಮೋತ್ಸವ ನಡೆಯಿತು.
ಏ.2 ರಂದು ರಾತ್ರಿ ಸಂಜೆ ಗುಳಿಗ ದೈವದ ನೇಮ ನಡೆದು ಪ್ರಸಾದ ವಿತರಣೆ ನಡೆಯಿತು. ರಾತ್ರಿ ಸಾರ್ವಜನಿಕ ಅನ್ನಸಂತರ್ಪಣೆ ನೆರವೇರಿತು. ರಾತ್ರಿ ಮೋಗೆರ್ಕಳ ದೈವಗಳು ಗರಡಿ ಇಳಿದು ಸತ್ಯದೇವತೆ ತನ್ನಿಮಾನಿಗ ದೈವದ ನೇಮ ನಡೆಯಿತು. ರಾತ್ರಿ ಒಂದು ಗಂಟೆಗೆ ಪಾತ್ರಿಗಳ ದರ್ಶನ ಆಯಿತು ಏ.3 ರಂದು ಬೆಳಿಗ್ಗೆ ಕೊರಗಜ್ಜ ದೈವದ ಕೋಲ ನಡೆದು ಪ್ರಸಾದ ವಿತರಣೆ ನಡೆಯಿತು. ಸಚಿವ ಅಂಗಾರ ದೇವಸ್ಥಾನಕ್ಕೆ ಭೇಟಿ ನೀಡಿ ಕೊರಗಜ್ಜ ದೈವದ ದರ್ಶನ ಪಡೆದರು.
ಈ ಸಂದರ್ಭದಲ್ಲಿ ಆಡಳಿತ ಸಮಿತಿಯವರು ಉತ್ಸವ ಸಮಿತಿಯವರು ಸಾವಿರಾರು ಭಕ್ತಾದಿಗಳು ಉಪಸ್ಥಿತರಿದ್ದರು.