ಭಕ್ತಿಭಾವ

ಸುಳ್ಯ:ಇತಿಹಾಸ ಪ್ರಸಿದ್ದ ಚೆನ್ನಕೇಶವ ದೇವಸ್ಥಾನದಲ್ಲಿ ಜಾತ್ರಾ ವೈಭವ, ಸಂಭ್ರಮಕ್ಕೆ ಸಾಕ್ಷಿಯಾದ ಸಾವಿರಾರು ಭಕ್ತರು

458

ನ್ಯೂಸ್ ನಾಟೌಟ್: ಇತಿಹಾಸ ಪ್ರಸಿದ್ದ ಸುಳ್ಯ ಚೆನ್ನಕೇಶವ ದೇವಸ್ಥಾನದಲ್ಲಿ ವಿಜೃಂಭಣೆಯಿಂದ ಜಾತ್ರೋತ್ಸವ ನಡಿತಿದೆ.ಜಾತ್ರೋತ್ಸವಕ್ಕೆ ಸಾವಿರಾರು ಭಕ್ತಾದಿಗಳು ಬಂದು ಶ್ರೀ ಚೆನ್ನಕೇಶವ ದೇವರ ದರ್ಶನ ಪಡೆದು ಪುನೀತರಾಗುತ್ತಿದ್ದಾರೆ.

ಜ.೩ರಿಂದ-೧೨ರವರೆಗೆ ಜಾತ್ರಾ ಸಂಭ್ರಮ:

ಬೆಳಗ್ಗೆ ಉಗ್ರಾಣ ಮುಹೂರ್ತದೊಂದಿಗೆ ಜಾತ್ರೋತ್ಸವ ಆರಂಭಗೊಂಡಿತು.ಸಂಜೆ ನಾಲ್ಕು ದೈವಗಳ ಚಾವಡಿಯಿಂದ ಬಲ್ಲಾಳರ ಪಯ್ಯೋಳಿ ತರಲಾಯಿತು. ನಂತರ ಕುಕ್ಕನೂರು ದೈವಗಳ ಭಂಡಾರ ಆಗಮನವಾಯಿತು.ಇದಾದ ನಂತರ ಧ್ವಜಾರೋಹಣ ನಡೆಯಿತು. ಶ್ರೀ ದೇವರ ಬಲಿ ಹೊರಟು ಉತ್ಸವ ನಡೆಯಿತು.ಜಾತ್ರೆ ಸಂಭ್ರಮ ಜನವರಿ ೩ರಿಂದ ೧೨ರವರೆಗೆ ನಡೆಯಲಿದೆ.

ಈ ಸಂದರ್ಭ ದೇವಾಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರರಾದ ಡಾ.ಹರಪ್ರಸಾದ್ ತುದಿಯಡ್ಕ, ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಡಾ.ಕೆ.ವಿ. ಚಿದಾನಂದ,ಸಮಿತಿ ಸದಸ್ಯರು,ಗಿರಿಜಾ ಶಂಕರ ತುದಿಯಡ್ಕ. ಕೃಪಾಶಂಕರ ತುದಿಯಡ್ಕ, ಇತರ ಗಣ್ಯರು,ಭಕ್ತಾದಿಗಳು ಉಪಸ್ಥಿತರಿದ್ದರು.

See also  ಪ್ರವೀಣ್ ನೆಟ್ಟಾರು 'ಕನಸಿನ ಮನೆ' ಗೃಹಪ್ರವೇಶಕ್ಕೆ ಜನಸಾಗರ,'ಪ್ರವೀಣ್ ನಿಲಯ' ಸನಿಹದಲ್ಲೇ ಕಂಚಿನ ಪುತ್ಥಳಿಯೂ ಲೋಕಾರ್ಪಣೆ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget