Uncategorized

ಜಪಾನ್‌ನಲ್ಲಿ ಪ್ರಬಲ ಭೂಕಂಪ: 7.1 ತೀವ್ರತೆ ದಾಖಲು..! ಸುನಾಮಿ ಅಪ್ಪಳಿಸುವ ಎಚ್ಚರಿಕೆ..!

ನ್ಯೂಸ್ ನಾಟೌಟ್: ಜಪಾನ್‌ನ ದಕ್ಷಿಣ ಕರಾವಳಿಯಲ್ಲಿ ಗುರುವಾರ ಪ್ರಬಲ ಭೂಕಂಪ ಸಂಭವಿಸಿದ್ದು, ರಿಕ್ಟರ್‌ ಮಾಪಕದಲ್ಲಿ 7.1 ತೀವ್ರತೆಯನ್ನು ದಾಖಲಿಸಿದೆ. ಈ ಹಿನ್ನೆಲೆ ಕರಾವಳಿ ಸುತ್ತಮುತ್ತಲ ಪ್ರದೇಶಗಳಿಗೆ ಸುನಾಮಿಯ ಎಚ್ಚರಿಕೆ ನೀಡಲಾಗಿದೆ.

ಜಪಾನ್‌ನ ದಕ್ಷಿಣ ಮುಖ್ಯ ದ್ವೀಪವಾದ ಕ್ಯುಶುವಿನ ಪೂರ್ವ ಕರಾವಳಿಯಲ್ಲಿ ಸುಮಾರು 30 ಕಿಮೀ ಆಳದಲ್ಲಿ ಈ ಕಂಪನವು ಕೇಂದ್ರೀಕೃತವಾಗಿದೆ. ಭೂಕಂಪದ ತೀವ್ರತೆ ಪ್ರಾಥಮಿಕವಾಗಿ 6.9 ಇತ್ತು. ಆ ಬಳಿಕ ಮತ್ತೆ ಹೆಚ್ಚಾಗಿದೆ ಎಂದು ಜಪಾನ್ ಹವಾಮಾನ ಸಂಸ್ಥೆ ತಿಳಿಸಿದೆ.
ಕ್ಯುಶುವಿನ ದಕ್ಷಿಣ ಕರಾವಳಿ ಮತ್ತು ಶಿಕೋಕು ಹತ್ತಿರದ ದ್ವೀಪದ ಉದ್ದಕ್ಕೂ 1 ಮೀಟರ್ ವರೆಗಿನ ಅಲೆಗಳು ಏಳುವ ಸಾಧ್ಯತೆ ಇದೆ. ಅಲ್ಲಿ ವಾಸವಿರುವ ಜನರಿಗೆ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಎಂದು ಮುನ್ಸೂಚನೆ ನೀಡಲಾಗಿದೆ. ಭೂಕಂಪನದ ತೀವ್ರತೆ ಭೂ ಭಾಗದಲ್ಲಿಯೂ ಪರಿಣಾಮ ಬೀರಿದ್ದು, ಸಮುದ್ರ ತೀರದ ಹಲವು ಮನೆಗಳ ಕಿಟಕಿಗಳು ಹೊಡೆದಿವೆ. ಗೋಡೆಗಳು, ರಸ್ತೆಗಳು ಬಿರುಕುಬಿಟ್ಟಿವೆ. ಘಟನೆಯಿಂದ ಸ್ಥಳೀಯರು ಆತಂಕಕ್ಕೆ ಒಳಗಾಗಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

Related posts

ಬೈದ್ರೆ ಸಾಕು ಊರಿಡೀ ಅಟ್ಟಾಡಿಸುತ್ತೆ ಈ ಕೋಣ..!

ರಾಜ್ಯ ಸಾರಿಗೆ ನೌಕರರಿಗೆ ಗುಡ್ ನ್ಯೂಸ್: ಕೊನೆಗೂ ವೇತನಕ್ಕೆ ಹಣ ಬಿಡುಗಡೆ ಮಾಡಿದ ಸರಕಾರ

ಇಂದಿನಿಂದ ಟಿ20 ಕ್ರಿಕೆಟ್ ವಿಶ್ವಕಪ್: ಭಾರತ-ಪಾಕ್ ಪಂದ್ಯದತ್ತ ಎಲ್ಲರ ಚಿತ್ತ