ವೈರಲ್ ನ್ಯೂಸ್

ಹೊಸ ವರ್ಷಕ್ಕೆ ಎಣ್ಣೆ ಪ್ರಿಯರಿಗೆ ಬಿಗ್ ಶಾಕ್..? ಜನವರಿಯಿಂದ ಮದ್ಯದ ಬೆಲೆಯಲ್ಲಿ ಭಾರಿ ವ್ಯತ್ಯಾಸ! ಇಲ್ಲಿದೆ ಸಂಪೂರ್ಣ ಮಾಹಿತಿ

237

ನ್ಯೂಸ್ ನಾಟೌಟ್: ಹೊಸ ವರ್ಷದ (New Year)ಆರಂಭಕ್ಕೆ ಮದ್ಯಪ್ರಿಯರಿಗೆ ಬಿಗ್ ಶಾಕ್ ಎದುರಾಗಿದ್ದು, ಮದ್ಯ ಉತ್ಪಾದನಾ ಕಂಪನಿಗಳು ದರ ಹೆಚ್ಚಿಸಲು (Liquor Company) ನಿರ್ಧರಿಸಿವೆ ಎನ್ನಲಾಗಿದೆ.

ದಿನನಿತ್ಯ ಬಳಕೆ ವಸ್ತುಗಳ ಬೆಲೆ ಈಗಾಗಲೇ ಗಗನಕ್ಕೇರಿದ್ದು, ಎಲ್ಲವೂ ಫ್ರೀ ಭಾಗ್ಯ ಕೊಟ್ಟ ಸರ್ಕಾರ ಇದೀಗ ಬೇರೆ ಕಡೆಯಿಂದ ಹಣ ಸಂಗ್ರಹಿಸಲು ನಿರ್ಧರಿಸಿದೆ. ಸರ್ಕಾರ ಆರ್ಥಿಕ ಮೂಲವಾದ ಅಬಕಾರಿ ಸುಂಕದ (Excise Duty) ದರವನ್ನು 20% ಹೆಚ್ಚಳ ಮಾಡಿತ್ತು. ಈಗ ಹೊಸ ವರ್ಷದ ಪಾರ್ಟಿ ಮೂಡ್‌ನಲ್ಲಿದ್ದವರಿಗೆ ಮತ್ತೆ ಮದ್ಯದ ಕಂಪನಿಗಳು ಶಾಕ್ ನೀಡುವ ಮೂಲಕ ಕಿಕ್ ಇಳಿಸಿವೆ.

ಜನವರಿ 1ರಿಂದ ಮದ್ಯ ದರ ಏರಿಕೆಗೆ ಸೂಚನೆ ನೀಡಲಾಗಿದ್ದು, ಹಾಲಿ ಓಟಿ 180 ಎಂಎಲ್‌ಗೆ 100 ರೂಪಾಯಿ ಇದ್ದು, ಜ.1 ರಿಂದ ಓಟಿ ಬೆಲೆ 123 ರೂ.ಗೆ ಏರಿಕೆಯಾಗಲಿದೆ. ಬಿಪಿ ದರ ಹಾಲಿ 123 ರೂ. ಇದ್ದು ಜನವರಿಯಿಂದ 159 ರೂ. ಆಗಲಿದೆ. 8ಪಿಎಂ ದರ ಹಾಲಿ 100 ರೂ. ಇದ್ದು 123 ರೂ.ಗೆ ಏರಲಿದೆ.

ಜನವರಿ 1ರಿಂದ ದರ ಏರಿಕೆ ಮಾಡುವಂತೆ ಬಾರ್ (Bar) ಮಾಲೀಕರಿಗೆ ಕಂಪನಿಗಳಿಂದ ಸೂಚನೆ ನೀಡಿದೆ. ಕಂಪನಿಗಳ ಉತ್ಪಾದನಾ ವೆಚ್ಚ, ಸರಕು ಸಾಗಣೆ ವೆಚ್ಚಗಳು ಹೆಚ್ಚಾಗಿರುವ ಕಾರಣ ದರ ಏರಿಕೆ ಅಗತ್ಯವಾಗಿದ್ದು, ಈ ಕಾರಣ ಗ್ರಾಹಕರ ಮೇಲೆ ಹೊರೆ ಹಾಕಲೇಬೇಕಾದ ಹಿನ್ನೆಲೆ ದರ ಏರಿಕೆಗೆ ಕಂಪನಿಗಳು ನಿರ್ಧಾರ ಮಾಡಿವೆ.

ಈ ಸಂಬಂಧ ಬಾರ್ ಮಾಲೀಕರಿಗೆ ಅಂದರೆ ಎಂಆರ್‌ಪಿ ಬಾರ್ ಮಾಲೀಕರಿಗೆ ಮೆಸೇಜ್ ಮೂಲಕ ಕಂಪನಿಗಳು ಮಾಹಿತಿ ರವಾನೆ ಮಾಡಿದ್ದು, ಸೂಚನೆಯಂತೆ ದರ ನಿಗದಿಯಂತೆ ಸಹಕರಿಸುವಂತೆ ಮನವಿ ಮಾಡಿವೆ ಎಂದು ವರದಿ ತಿಳಿದಿದೆ.

See also  ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ 108ನೇ ರ‍್ಯಾಂಕ್ ಪಡೆದ ಮಹಿಳಾ ಅಭ್ಯರ್ಥಿ ಕರ್ತವ್ಯಕ್ಕೆ ಹಾಜರಾದ ಮೊದಲ ದಿನವೇ ಲಂಚ ಸ್ವೀಕರಿಸಿ ಅರೆಸ್ಟ್‌..!, ಈಕೆ ಎಷ್ಟು ಲಂಚ ಕೇಳಿದ್ದಳು?
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget