ಕ್ರೀಡೆ/ಸಿನಿಮಾಕ್ರೈಂವೈರಲ್ ನ್ಯೂಸ್ಸಿನಿಮಾ

Janhvi Kapoor: 12ನೇ ವಯಸ್ಸಿಗೆ ನನ್ನ ಫೋಟೋ ಅಶ್ಲೀಲ ವೆಬ್‌ಸೈಟ್‌ ಗೆ ಹಾಕಿದ್ರು ಎಂದ ನಟಿ..! ಜಾನ್ವಿ ಕಪೂರ್ ತನ್ನ ಬಾಲ್ಯದ ಕಹಿ ಘಟನೆಯ ಬಗ್ಗೆ ಹೇಳಿದ್ದೇಕೆ..?

244

ನ್ಯೂಸ್ ನಾಟೌಟ್: ಬಾಲಿವುಡ್ ಮತ್ತು ಟಾಲಿವುಡ್‌ನಲ್ಲಿ ಬೇಡಿಕೆಯ ನಟಿ ಜಾನ್ವಿ ಕಪೂರ್ ‘ಮಿಸ್ಟರ್ ಆ್ಯಂಡ್ ಮಿಸೆಸ್ ಮಹಿ’ (Mr And Mrs Mahi) ಸಿನಿಮಾ ಪ್ರಚಾರವೊಂದರಲ್ಲಿ ವೈಯಕ್ತಿಕ ಬದುಕಿನ ಬಗ್ಗೆ ನಟಿ ಮಾತನಾಡಿದ್ದಾರೆ. ಜ್ಯೂ.ಎನ್‌ಟಿಆರ್, ರಾಮ್ ಚರಣ್, ಸೂರ್ಯ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿ ತೊಡಗಿಕೊಂಡಿದ್ದಾರೆ.

ಸದ್ಯ ‘ಚಿಕ್ಕವಯಸ್ಸಿನಲ್ಲಿ ಅಶ್ಲೀಲ ವೆಬ್‌ಸೈಟ್‌ನಲ್ಲಿ ನನ್ನ ಫೋಟೋ ಹಾಕಿದ್ದರು ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಸಿನಿಮಾ ಪ್ರಚಾರದ ಸಂದರ್ಶನ ವೇಳೆ, 12 -13 ವರ್ಷ ವಯಸ್ಸಿನಲ್ಲಿರುವಾಗ ಸೋಷಿಯಲ್ ಮೀಡಿಯಾದಿಂದಾಗಿ ಲೈಂಗಿಕವಾಗಿ ನಾನು ಸಮಸ್ಯೆ ಎದುರಿಸಿದ್ದೆ ಎಂದು ಹೇಳಿಕೊಂಡಿದ್ದಾರೆ. ಆಗ ನನಗೆ ಚಿಕ್ಕ ವಯಸ್ಸು. ಒಮ್ಮೆ ನನ್ನ ತಾಯಿ ಮತ್ತು ತಂದೆಯೊಂದಿಗೆ ಈವೆಂಟ್‌ಗೆ ಹೋಗಿದ್ದೆ.

ಆ ಚಿತ್ರಗಳು ಇಂಟರ್‌ನೆಟ್‌ನಲ್ಲಿ ವೈರಲ್ ಆಗಿತ್ತು. ಮಾರ್ಫಿಂಗ್ ಮಾಡಿ ಪೋರ್ನ್ ವೆಬ್‌ಸೈಟ್‌ಗಳಲ್ಲಿ ಹಾಕಿದ್ದರು ಎಂದಿದ್ದಾರೆ. ಆದರೆ ಇದು ಮಾರ್ಫ್ ಮಾಡಿದ ಚಿತ್ರಗಳು ಎಂದು ಹಲವರಿಗೆ ತಿಳಿದೇ ಇರಲಿಲ್ಲ. ನಿಜ ಎಂದು ನಂಬಿದ್ದರು. ಆ ಚಿಕ್ಕ ವಯಸ್ಸಿನಲ್ಲಿಯೇ ನನಗೆ ತುಂಬಾ ಆಘಾತವಾಗಿತ್ತು. ನನ್ನ ಫ್ರೆಂಡ್ಸ್ ಕೂಡ ಗೇಲಿ ಮಾಡುತ್ತಿದ್ದರು. ಆ ವಯಸ್ಸಿನಲ್ಲಿ ಏನಾಗುತ್ತಿದೆ ಎಂದು ನನಗೆ ತಿಳಿದೆ ಇರಲಿಲ್ಲ ಎಂದಿದ್ದಾರೆ.

Click 👇

https://newsnotout.com/2024/05/hotel-issue-boyfriend-and-issue
https://newsnotout.com/2024/05/sand-mining-kannada-news-news
https://newsnotout.com/2024/05/coaching-centre-and-education-centre
See also  ಗೈರು ಹಾಜರಾದ ವಿದ್ಯಾರ್ಥಿಯಿಂದ ಪರೀಕ್ಷೆ ಬರೆಯಲು ಹಣ ಪಡೆದ ಪ್ರಾಂಶುಪಾಲ..! ಪ್ರಾಂಶುಪಾಲ ಸೇರಿ ಇಬ್ಬರು ಅರೆಸ್ಟ್..!
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget