ಸುಳ್ಯ

ಸುಳ್ಯ: ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ದಿ. ಜಾನಕಿ ವೆಂಕಟ್ರಮಣ ಗೌಡರ 12ನೇ ವರ್ಷದ ಪುಣ್ಯಸ್ಮರಣೆ

ನ್ಯೂಸ್ ನಾಟೌಟ್: ಆಧುನಿಕ ಸುಳ್ಯದ ನಿರ್ಮಾತೃ, ಶಿಕ್ಷಣ ಬ್ರಹ್ಮ, ಕೆವಿಜಿ ಸಮೂಹ ಶಿಕ್ಷಣ ಸಂಸ್ಥೆಗಳ ಸ್ಥಾಪಕಾಧ್ಯಕ್ಷ ದಿ. ಡಾ.ಕುರುಂಜಿ ವೆಂಕಟ್ರಮಣ ಗೌಡರ ಧರ್ಮಪತ್ನಿ ದಿ. ಜಾನಕಿ ವೆಂಕಟ್ರಮಣ ಗೌಡರ 12ನೇ ವರ್ಷದ ಪುಣ್ಯ ತಿಥಿಯ ಪ್ರಯುಕ್ತ ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜಿನ್ ನಲ್ಲಿ ಗುರುವಾರ (ಆ.22) ನುಡಿನಮನ ಕಾರ್ಯಕ್ರಮ ನಡೆಯಿತು.

ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ (ರಿ.)ಸುಳ್ಯ ಇದರ ಅಧ್ಯಕ್ಷ ಡಾ. ಕೆ.ವಿ ಚಿದಾನಂದ ದೀಪ ಬೆಳಗಿಸಿ ನುಡಿನಮನ ಸಲ್ಲಿಸಿದರು. ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ (ರಿ.) ಸುಳ್ಯ ಇದರ ಕೌನ್ಸಿಲ್ ಮೆಂಬರ್ ಜಗದೀಶ್ ಅಡ್ತಲೆ, ಎಡ್ವೈಸರ್ ಪ್ರೊ.ದಾಮೋದರ ಗೌಡ, ಅಧ್ಯಕ್ಷರ ಆಪ್ತ ಕಾರ್ಯದರ್ಶಿ ಚಂದ್ರಶೇಖರ ಪೇರಾಲು, ವಿದ್ಯಾರ್ಥಿ ಕ್ಷೇಮಾಧಿಕಾರಿ ಡಾ. ಹರ್ಷಿತಾ ಎಂ., ಕೆವಿಜಿ ಆಯುರ್ವೇದ ಫಾರ್ಮಾ ಮತ್ತು ಸಂಶೋಧನಾ ಘಟಕದ ಕಾರ್ಯನಿರ್ವಾಹಣಾಧಿಕಾರಿ ಡಾ.ಪುರುಷೋತ್ತಮ ಕೆ.ಜಿ., ಕೆವಿಜಿ ಆಯುರ್ವೇದ ಆಸ್ಪತ್ರೆಯ ಮೆಡಿಕಲ್ ಆಫೀಸರ್ ಡಾ.ಸನತ್ ಕುಮಾರ್ ಡಿ.ಜಿ., ಹಾಗೂ ಸಂಸ್ಥೆಯ ಬೋಧಕ, ಬೋಧಕೇತರ ಸಿಬ್ಬಂದಿ, ಸ್ನಾತಕೋತ್ತರ ವಿದ್ಯಾರ್ಥಿಗಳು, ಕಲಿಕಾ ವೈದ್ಯರು, ಪದವಿ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ದ್ರವ್ಯಗುಣ ವಿಭಾಗದ ಪ್ರೊಫೆಸರ್ ಡಾ. ಕವಿತಾ ಬಿ. ಎಂ., ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು.

Related posts

ಸುಳ್ಯ : ‘ವಿಶ್ವ ಮಧುಮೇಹ ದಿನಾಚರಣೆ’ ಅಂಗವಾಗಿ ಅಪಾಯಕಾರಿ ಅಂಶಗಳ ಉಚಿತ ತಪಾಸಣಾ ಶಿಬಿರ ಹಾಗೂ ಮಾಹಿತಿ ಕಾರ್ಯಕ್ರಮ,ಕೆ.ವಿ.ಜಿ ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆಯಲ್ಲಿ ನಡೆದ ಕಾರ್ಯಕ್ರಮವನ್ನು ಉದ್ಘಾಟಿಸಿದ ಎಓಎಲ್‌ಇ ಅಧ್ಯಕ್ಷ ಡಾ.ಕೆ.ವಿ ಚಿದಾನಂದ

‘ಸಾರಿ ಅಣ್ಣ’ ಬರೆದು ವಿದೇಶದಲ್ಲಿ ಉದ್ಯೋಗದಲ್ಲಿದ್ದ ಕಡಬದ ಯುವಕ ಆತ್ಮಹತ್ಯೆ

ಸುಳ್ಯಕ್ಕೆ ಆಗಮಿಸಲಿದ್ದಾರೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ,ಕಾಂಗ್ರೆಸ್ ಅಭ್ಯರ್ಥಿ ಜಿ.ಕೃಷ್ಣಪ್ಪ ಪರ ಪ್ರಚಾರ