ಕ್ರೈಂಬೆಂಗಳೂರುರಾಜ್ಯವೈರಲ್ ನ್ಯೂಸ್

ಜೈಲಿನಲ್ಲಿ ದರ್ಶನ್ ನನ್ನು ಭೇಟಿಯಾಗಿ, ತಬ್ಬಿಕೊಂಡಿದ್ದೆ ಎಂದಿದ್ದ 21 ವರ್ಷಗಳಿಂದ ಜೈಲಿನಲ್ಲಿದ್ದ ಸಿದ್ಧಾರೂಢ..! ಜೈಲಾಧಿಕಾರಿಗಳಿಗೆ ನೋಟಿಸ್..! ಸಿದ್ಧಾರೂಢನಿಗೆ ಮತ್ತೆ ಕಂಟಕ..!

268

ನ್ಯೂಸ್ ನಾಟೌಟ್: ಸನ್ನಡತೆಯ ಆಧಾರದ ಮೇಲೆ ಜೈಲಿನಿಂದ ಬಿಡುಗಡೆ ಆಗಿದ್ದ ಸಿದ್ಧಾರೂಢಗೆ ತಾನೇ ಹೇಳಿದ ಹೇಳಿಕೆಗಳಿಂದ ಸಂಕಷ್ಟ ಎದುರಾಗಿದೆ. ಜೈಲಿನಲ್ಲಿ ದರ್ಶರನ್ನು (Darshan) ಭೇಟಿಯಾಗಿದ್ದೇನೆ ಎಂದು ಸಿದ್ಧಾರೂಡ ಸುಳ್ಳು ಕಥೆ ಕಟ್ಟಿದ್ರಾ ಎಂಬ ಶಂಕೆ ವ್ಯಕ್ತವಾಗಿದೆ. ಹಲವು ಮಾಧ್ಯಮಗಳಲ್ಲಿ ದರ್ಶನ್ ಕುರಿತು ಸಿದ್ಧಾರೂಢ ನೀಡಿರುವ ಹೇಳಿಕೆ ಭಾರೀ ಸಂಚಲನ ಮೂಡಿಸಿದೆ.

ಈ ಬೆನ್ನಲ್ಲೇ ಪರಿಶೀಲಿಸಿ, ಜೈಲಿನಲ್ಲಿ ದರ್ಶನ್ ಮತ್ತು ಸಿದ್ಧಾರೂಢ ಭೇಟಿ ಮಾಡಿಯೇ ಇಲ್ಲ. ನಟ ದರ್ಶನ್ ಭದ್ರತಾ ಸೆಲ್‌ನಲ್ಲಿದ್ದು, ಭೇಟಿಗೆ ಯಾರಿಗೂ ಅವಕಾಶ ಕೊಡಲಿಲ್ಲ ಎಂದು ಜೈಲಾಧಿಕಾರಿಗಳು ಕಾರಾಗೃಹ ಇಲಾಖೆಗೆ ರಿಪೋರ್ಟ್ ಕೊಟ್ಟಿದ್ದಾರೆ ಎನ್ನಲಾಗಿದೆ. ಜುಲೈ 8ರಂದು ಸಿದ್ಧಾರೂಢ ಬಳ್ಳಾರಿ ಜೈಲಿನಿಂದ ಸೆಂಟ್ರಲ್ ಜೈಲಿಗೆ ಬಂದಿದ್ದರು. 18 ಗಂಟೆಗಳ ಕಾಲ ಜೈಲಿನಲ್ಲಿ ಸಿದ್ಧರೂಢ ಇದ್ದಿದ್ದಾಗಿ ವರದಿಯಾಗಿದೆ. ಜು.9ರಂದು ಸನ್ನಡತೆಯ ಆಧಾರದ ಮೇಲೆ ರಿಲೀಸ್ ಆದ್ದರು. ಈ ಕುರಿತು ಎರಡು ಕಡೆಯ ಜೈಲಾಧಿಕಾರಿಗಳಿಗೆ ಕಾರಾಗೃಹ ಇಲಾಖೆಗೆ ನೋಟಿಸ್ ನೀಡಿತ್ತು. ಇತ್ತೀಚೆಗೆ ಜೈಲಿನಲ್ಲಿ ದರ್ಶನ್‌ರನ್ನು ಭೇಟಿಯಾಗಿರೋದಾಗಿ ಮಾಧ್ಯಮಕ್ಕೆ ಸಿದ್ಧಾರೂಢ ಹೇಳಿದ್ದರು. ಜೈಲಿನಲ್ಲಿ ನರಕ ಅನುಭವಿಸುತ್ತಿದ್ದಾರೆ.

ದರ್ಶನ್‌ರನ್ನು ಅಲ್ಲಿ ನೋಡಿ ಬೇಜಾರಾಯಿತು ಎಂದೆಲ್ಲಾ ಮಾತನಾಡಿದ್ದರು. ಜುಲೈ 8ರಂದು ಅಧಿಕಾರಿಗಳ ಅನುಮತಿ ಪಡೆದು ದರ್ಶನ್‌ರನ್ನು ಭೇಟಿಯಾದೆ. ನಿಮ್ಮ ಅಭಿಮಾನಿ ಅಂತ ಭೇಟಿಯಾದಾಗ ತಬ್ಬಿಕೊಂಡರು ಎಂದು ಹೇಳಿಕೊಂಡಿದ್ದಕ್ಕೆ ಈಗ ಜೈಲಾಧಿಕಾರಿಗಳಿಗೆ ನೋಟಿಸ್ ನೀಡಿ ಅಧಿಕಾರಿಗಳು ದರ್ಶನ್ ನನ್ನು ಭೇಟಿ ಮಾಡಿಸಿದ ಕಾರಣ ಕೇಳಿದ್ದಾರೆ. ಇದರ ಜೊತೆಗೆ ಈ ಬಗ್ಗೆ ಶೀಘ್ರದಲ್ಲೆ ಮರು ತನಿಖೆ ಮಾಡುವ ಸಾಧ್ಯತೆಯಿದೆ.

ವಿಚಾರಣಾಧೀನ ಕೈದಿಯನ್ನು ಕುಟುಂಬಸ್ಥರು ಮತ್ತು ಅತೀ ಆಪ್ತರು ಸೂಕ್ತ ಕಾರಣ ನೀಡಿ ಭೇಟಿಯಾಗೋ ಅವಕಾಶವಿದೆ. ಆದರೆ, ಬಿಡುಗಡೆಯಾದ ಕೈದಿಯೊಬ್ಬನನ್ನು ಅನುಮತಿ ರಹಿತವಾಗಿ ಭೇಟಿ ಮಾಡಿಸಿದ್ದು ಚರ್ಚೆಗೆ ಕಾರಣವಾಗಿದೆ. ನಾನು ಕಳೆದ 21 ವರ್ಷಗಳಿಂದ ಜೈಲಿನಲ್ಲಿ ಇದ್ದೇನೆ. ನನಗೆ ಗೊತ್ತು. ದರ್ಶನ್ ಸರ್ ನಿಜವಾಗಲೂ ನರಕ ಅನುಭವಿಸುತ್ತಿದ್ದಾರೆ. ನಾನು ಭೇಟಿಯಾದ ಅವರು ಡಲ್ ಆಗಿದ್ರೂ. ‘ಕಾಟೇರ’ (Kaatera) ಸಿನಿಮಾದಲ್ಲಿ ಇದ್ದ ಬಾಡಿಗೂ ಈಗ ಇರುವ ಬಾಡಿಗೂ ಬದಲಾವಣೆ ಆಗಿದೆ. ಅವರಿಗೆ ವಿಐಪಿ ಟ್ರೀಟ್ಮೆಂಟ್‌ ನಿಜವಾಗಲೂ ಕೊಟ್ಟೇ ಇಲ್ಲ. ಎಲ್ಲರ ಹಾಗೇ ಅವರನ್ನು ನೋಡ್ತಿಕೊಳ್ತಿದ್ದಾರೆ ಎಂದೆಲ್ಲ ಸಿದ್ಧಾರೂಡ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದು ಈಗ ಅವರಿಗೇ ತಿರುಗು ಬಾಣವಾಗಿದೆ.

Click

https://newsnotout.com/2024/07/police-kannada-news-hospital-bengaluru-case/
See also  ಪೊಲೀಸರ ಎದುರಲ್ಲೇ ಕಾಲೇಜು ವಿದ್ಯಾರ್ಥಿಗಳ ನಡುವೆ ಹೊಡೆದಾಟ..! 8 ವಿದ್ಯಾರ್ಥಿಗಳ ವಿರುದ್ಧ ಪ್ರಕರಣ ದಾಖಲು
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget