ಕ್ರೈಂವೈರಲ್ ನ್ಯೂಸ್

ಎರಡೂ ಕೂಡ ಹೆಣ್ಣು ಮಕ್ಕಳೇ ಎಂದು ಮಾರಲು ಹೊರಟ ತಂದೆ..! ರಕ್ಷಿಸಲು ಬಂದವರೇ ಜೈಲು ಸೇರಿದ್ದೇಕೆ..?

170

ನ್ಯೂಸ್ ನಾಟೌಟ್: ಅವರಿಬ್ಬರಿಗೂ ಮದುವೆಯಾಗಿ ಸುಮಾರು ಆರು ವರ್ಷ ಕಳೆದಿವೆ. ಅದರೆ ಆ ದಂಪತಿಗೆ ಮೊದಲ ಮಗು ಹೆಣ್ಣು, ಆ ನಂತರ ಜನಿಸಿದ ಮಗು ಕೂಡಾ ಹೆಣ್ಣು. ಎರಡು ಮಕ್ಕಳು ಹೆಣ್ಣುಮಕ್ಕಳು ಹುಟ್ಟಿದ್ದಕ್ಕೆ, ಮಗುವನ್ನೇ ಕಿಡ್ನಾಪ್ ಮಾಡಿ ತಂದೆಯೇ ಮಾರಾಟಕ್ಕೆ ಮುಂದಾಗಿದ್ದ ಎನ್ನಲಾಗಿದೆ.

ಕಳೆದ 4 ದಿನಗಳ ಹಿಂದೆ ಹಾವೇರಿ (Haveri) ಜಿಲ್ಲೆ ಬ್ಯಾಡಗಿ ತಾಲೂಕು ಆಸ್ಪತ್ರೆಯಿಂದ ಬಾಣಂತಿ ಗೀತಾ ಪತಿ ಸಿದ್ದಲಿಂಗಪ್ಪ ಹಸುಗೂಸನ್ನ ಕಿಡ್ನಾಪ್ ಮಾಡಿ ಮಾರಲು ಯತ್ನಿಸಿದ್ದಾನೆ.ಎಂದು ದೂರಿನಲ್ಲಿ ತಿಳಿಸಲಾಗಿದೆ.

ವಿಷಯ ತಿಳಿದ ಪತ್ನಿ ಹಸುಗೂಸು ಸಮೇತ ಅಂಬುಲೆನ್ಸ್ ನಲ್ಲಿ ಎಸ್‍ಪಿ ಕಚೇರಿಗೆ ಆಗಮಿಸಿ ಪತಿ ವಿರುದ್ಧ ದೂರು ನೀಡಿದ್ದಾರೆ ಎನ್ನಲಾಗಿದೆ. 

 ಮತ್ತೊಂದೆಡೆ ಹಸುಗೂಸನ್ನು ಮಾರಲು ಮುಂದಾಗಿದ್ದ ಸಿದ್ದಲಿಂಗಪ್ಪನ ಕೈಯಿಂದ ಪರಿಚಯಸ್ಥ ಯುವಕರು ಮಗುವನ್ನು ಕಾಪಾಡಿದ್ದರು. ಅವರ ವಿರುದ್ಧವೇ ಸಿದ್ಧಲಿಂಗಪ್ಪ ಕಿಡ್ನಾಪ್ ಆರೋಪ ಮಾಡಿ ದೂರು ನೀಡಿದ್ದಾನೆ ಎಂದು ವರದಿ ತಿಳಿಸಿದೆ.

ಪ್ರಕರಣ ಸಂಬಂಧ ಓರ್ವ ಜೈಲುಪಾಲಾಗಿದ್ದು, ಹೀಗಾಗಿ ಸಹಾಯ ಮಾಡಲು ಬಂದವರದ್ದು ತಪ್ಪಿಲ್ಲಾ ಅವರಿಕೇಗೆ ಶಿಕ್ಷೆ. ಅವರನ್ನು ಬಿಟ್ಬಿಡಿ. ನನ್ನ ಪತಿರಾಯನೆ ತನಗೆ ಹುಟ್ಟಿದ ಮಕ್ಕಳನ್ನ ಕದ್ದು ಮಾರಲು ಯತ್ನಿಸಿದ್ದಾನೆ ಎಂದು ಪತ್ನಿ ಆರೋಪಿಸಿದ್ದಾಳೆ. ಅವರಿಗೆ ಗಂಡು ಹುಟ್ಟಿಲ್ಲಾ ಎಂದು ಬೇಸರವಿದೆ. ಬೇರೆ ಮಹಿಳೆಯರ ಜೊತೆ ಅನೈತಿಕ ಸಂಬಂಧವಿದೆ ಅಂತ ಪತ್ನಿ ಗೀತಾ ಪೊಲೀಸರ ಜೊತೆ ಹೇಳಿಕೊಂಡಿದ್ದಾಳೆ.

ಸದ್ಯ ಸಿದ್ದಲಿಂಗಪ್ಪ ವಿರುದ್ಧವೂ ದೂರು ದಾಖಲಿಸಿಕೊಂಡ ಪೊಲೀಸರು ವಿಚಾರಣೆ ನಡೆಸಿ ಆತನನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.

https://newsnotout.com/2024/01/punith-kerehalli-fir-news/
See also  ದೊಡ್ಡಡ್ಕ: ಶಾಮಿಯಾನ ವಾಹನ - ಕಾರಿನ ನಡುವೆ ಅಪಘಾತ, ಎರಡೂ ವಾಹನ ಜಖಂ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget   Ad Widget