ಕರಾವಳಿವೈರಲ್ ನ್ಯೂಸ್ಸಿನಿಮಾ

ಜೈ ಹನುಮಾನ್ ಚಿತ್ರದಲ್ಲಿ ‘ಹನುಮ’ನಾಗಿ ರಿಷಬ್ ಶೆಟ್ಟಿ..! ಇಲ್ಲಿದೆ ಇಂಟರೆಸ್ಟಿಂಗ್ ಮಾಹಿತಿ

240

ನ್ಯೂಸ್ ನಾಟೌಟ್: ‘ಜೈ ಹನುಮಾನ್’ ಚಿತ್ರದ ಮೊದಲ ಪೋಸ್ಟರ್ ಅನ್ನು ಮೈತ್ರಿ ಮೂವೀಸ್ ಮೇಕರ್ಸ್‌ನ ಇನ್‌ ಸ್ಟಾಗ್ರಾಮ್ ನಲ್ಲಿ ಹಂಚಿಕೊಳ್ಳಲಾಗಿದೆ. ಇದರೊಂದಿಗೆ ಚಿತ್ರದಲ್ಲಿ ‘ಕಾಂತಾರ’ ಖ್ಯಾತಿಯ ರಿಷಬ್ ಶೆಟ್ಟಿಯೂ ನಟಿಸಲಿದ್ದಾರೆ ಎಂಬ ಮಾಹಿತಿಯೂ ಹೊರಬಿದ್ದಿದೆ. ಪೋಸ್ಟರ್‌ ನಲ್ಲಿ ರಿಷಬ್ ಅವರು, ಭಜರಂಗಬಲಿ ರೂಪದಲ್ಲಿ ಕಾಣಿಸಿಕೊಂಡಿದ್ದು, ಕೈಯಲ್ಲಿ ಶ್ರೀರಾಮನ ವಿಗ್ರಹವಿದೆ.

ಪ್ರಶಾಂತ್ ವರ್ಮಾ ‘ಹನುಮಾನ್’ ಸಿನಿಮಾವನ್ನು ಪ್ರೇಕ್ಷಕರಿಗೆ ಉಡುಗೊರೆಯಾಗಿ ನೀಡಿದ್ದರು. ತೇಜ ಸಜ್ಜ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಚಿತ್ರದ ಬಿಡುಗಡೆಯ ವೇಳೆಯೇ ಮುಂದಿನ ಭಾಗವನ್ನು ಘೋಷಿಸಿದರು. ಈ ಚಿತ್ರದ ಸೀಕ್ವೆಲ್ ‘ಜೈ ಹನುಮಾನ್’ ಹೆಸರಿನಲ್ಲಿ ಬರುತ್ತಿದೆ. ದೀಪಾವಳಿಗೂ ಮುನ್ನ ಈ ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದ್ದು ಅಭಿಮಾನಿಗಳನ್ನು ರಿಷಭ್ ಶೆಟ್ಟಿಯ ಲುಕ್ ಮಂತ್ರಮುಗ್ಧಗೊಳಿಸಿದೆ.

ಪೋಸ್ಟರ್ ಹಂಚಿಕೊಂಡಿರುವ ನಿರ್ಮಾಪಕರು, ‘ತ್ರೇತಾಯುಗದ ಭರವಸೆ, ಕಲಿಯುಗದಲ್ಲಿ ಖಂಡಿತವಾಗಿಯೂ ಈಡೇರುತ್ತದೆ’ ಎಂಬ ಶೀರ್ಷಿಕೆಯನ್ನು ಬರೆದಿದ್ದಾರೆ. ರಾಷ್ಟ್ರ ಪ್ರಶಸ್ತಿ ವಿಜೇತ ನಟ ರಿಷಬ್ ಶೆಟ್ಟಿ ಮತ್ತು ನಿರ್ದೇಶಕ ಪ್ರಶಾಂತ್ ವರ್ಮಾ ಭಕ್ತಿ ಮತ್ತು ಧೈರ್ಯದ ಪೌರಾಣಿಕ ಕಥೆಯನ್ನು ತೆರೆಯ ಮೇಲೆ ತರುತ್ತಿದ್ದಾರೆ.

Click

https://newsnotout.com/2024/10/kumbhamela-kannada-news-17-year-old-boy-nomore-kannada-news/
https://newsnotout.com/2024/10/kumbhamela-kannada-news-prayagraj-viral-news-d/
https://newsnotout.com/2024/10/goa-kannada-news-bengaluru-kannada-news-wine/
https://newsnotout.com/2024/10/darshan-kannada-news-bengaluru-viral-news-bail-d/
https://newsnotout.com/2024/10/china-and-india-military-withdawn-from-conflicted-boarder/
See also  ರಂಜಾನ್ ವಿಶೇಷ: 52 ಮನೆಗಳಿಗೆ ಕಿಟ್ ವಿತರಣೆ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget